
ನಾಗೇಶ ಮೈಸೂರು
ಕದಿಯೋರಿಗೆ ಬಲಿಯಾಗಿದ್ದುಂಟೇ ಸಿವಾಯಿ
ನಾನ್ಯಾವತ್ತೂ ಕದ್ದಿಲ್ಲ ಬಿಡಿ
ಹಾಗಂತೆನಲ್ಲ ಸಾಚಾ ಕವನ ;
ಕದಿಯೋದು ಕುಲ ಕಸುಬು, ಮನಸಿಗೆ
ಕದಿಯೋದಂದ್ರೆ ಅಂತಿಂಥ ಮಾಲಲ್ಲ
ಬಿಕರಿ ಅಂಗಡಿಲಿ ಸಿಕ್ಕೋದಲ್ಲ
ಬೇಕಂದ್ರು ಕಣ್ಣಿಗೆ ಕಾಣೋದಿಲ್ಲ
ಎಷ್ಟೊಂದು ಕದ್ರು ಕರ್ಗೊದೆ ಇಲ್ಲ ದಾಸ್ತಾನು
ಪ್ರೀತಿ ಹೆಸರಲ್ ಕದೀತಾರೆ ಮಂದಿ
ನೀತಿ ಹೆಸರಲ್ ಮುಸುಗ್ಹಾಕ್ತಾರೆ – ಕೌದಿ
ಮುನಿಸೊ ಸೊಗಸೊ ಹುಚ್ಚಾಟದ ಕುದುರೆ
ಕದಿ, ಆವೇಶ ಬಂತಂದ್ರೆ ಕುಡೀದಿದ್ರೂ ಮದಿರೆ !
ಬರ್ತಾಳೆ ಸ್ಫೂರ್ತಿ, ಜತೆ ಬಾಳಿನ ಗೆಳತಿ
ತರ್ತಾಳೆ ಸುದ್ಧಿ ಮುರೂರಿನ ಸಂಗ್ತಿ ಕಡ
ಕೆರೆ ದಂಡೇಲ್ ಕೂತು ಜಾಲ್ಸಿದ್ದು ಒಗದಿದ್ದು
ಬಟ್ಟೆಲ್ ಹಿಡ್ದಾ ಮೀನಾ ಸೋಸಿ ಕದ್ದೋಡಿದ್ದು..
ಇನ್ನೇನಿದೆ, ಕದಿಯೋ ಪುಕ್ಸಟ್ಟೆ ಮಾಲಿಲ್ಲಿ ?
ಭಾವ್ನೆ – ಬವಣೆ ಚೆಲ್ಲಾಡ್ಕೊಂಡ್ ಬಿದ್ದೈತಿಲ್ಲಿ
ಕೇಳೋರಿಲ್ಲ ಹೇಳಿರಿಲ್ಲ ಕದಿಯೋದೆ ಹಾಕಿ ಕನ್ನ
ಕದ್ರುನು ಹಿಡಿಯೋರಿಲ್ಲ, ಓದ್ತಾರೆ ಬರ್ದಿದ್ ಕವನ !





ಯಾಕೋ ಅವಧಿಯಲ್ಲಿ ಕದಿಯೋರು, ಕದ್ದಿಲ್ಲ ಅನ್ನೋರು ಜಾಸ್ತಿ ಆಗ್ತಿದ್ದರೆ!
ಹುಷಾರು ಅವಧಿ☺
ಹಾಗಂತ ಹೇಳೋರು ಕೂಡ ಕದಿಯೋರೆ ಇರಬಹುದಾ ಅಂತ ಗುಮಾನಿ ! 🙂