ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನೇಕೆ ಮೊಬೈಲ್ ಬಿಸಾಡಿದೆ..

-ವಿ ಎನ್ ಲಕ್ಷ್ಮೀನಾರಾಯಣ

2ಜಿ, 3ಜಿ ಹಗರಣ ನನಗೆ ಮೊಬೈಲ್ ವ್ಯಾಪಾರದ ಇನ್ನೊಂದು ಮುಖವನ್ನು ಪರಿಚಯಿಸಲು ಸಹಾಯಕವಾಗಿದೆ. ಇದು ಕೇವಲ ಯಾರೋ ಕೆಲವು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳ ಗೋಲ್ ಮಾಲ್ ಪ್ರಶ್ನೆಯಲ್ಲ. ಮನಮೋಹನ ಸಿಂಗ್ ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಕೈಗೊಳ್ಳುತ್ತಿರುವ ಎಲ್ಲಾ ಕ್ರಮಗಳೂ  ಉದ್ದೇಶದಲ್ಲಿ ಪ್ರಜಾತಾಂತ್ರಕವೆಂಬಂತೆ ಕಾಣುತ್ತಲೇ ಪರಿಣಾಮದಲ್ಲಿ ಅಮೆರಿಕನ್ ಬಂಡವಾಳ/ರಾಜಕೀಯ ಮಾದರಿಯ ಕೇಂದ್ರೀಕರಣ ಮತ್ತು ಖಾಸಗೀಕರಣದ ಉದ್ಯಮಪತಿ ಸರ್ವಾಧಿಕಾರಕ್ಕೆ ಭಾರತೀಯರ ಜೀವನಕ್ರಮವನ್ನು ಬದಲಿಸುವ ರಾಜಕೀಯ ಕ್ರಮಗಳು.

ಮಹಾ ಸಾಧ್ವಿಯಂತೆ ತೋರುವ ಅವರ ಭಾವ-ಭಂಗಿ-ಮಾತುಗಳು, ಜನಸಾಮಾನ್ಯರ ಹಿತಕ್ಕೆ ವಿರುದ್ಧವಾದ ಅವರ ಉದ್ದೇಶಗಳನ್ನು ಮರೆಮಾಚುತ್ತವೆ. ಖಾಸಗೀಕರಣದ ಆರ್ಥಿಕನೀತಿಯ ಭಾಗವಾಗಿ ಪ್ರಪಂಚದ ಎಲ್ಲಾ ಕಡೆ, ಸಾಮಾನ್ಯಜನರಿಗೆ ವರದಾನವೆಂಬಂತೆ ಮೊಬೈಲ್ ಬಳಕೆಗೆ ಬಂತು. ಅದರಲ್ಲಿನ ಅನುಕೂಲಗಳನ್ನು ಮಾನ್ಯ ಮಾಡುತ್ತಲೇ ಇಂದಿಗೂ ಅನೇಕರು ಮೊಬೈಲ್ ನ ಮಾರಕ ಅಂಶಗಳನ್ನು ಟವರ್ ಗಳ ಘಾತಕ ಪರಿಣಾಮಗಳನ್ನೂ ಪಟ್ಟಿಮಾಡುತ್ತಲ್ಲೇ ಇದ್ದಾರೆ.

ವಿರೋಧಪಕ್ಷಗಳ ಚುನಾಯಿತ ಪ್ರತಿನಿಧಿಗಳು ಜೆಪಿಸಿ ವಿಚಾರಣೆಗಾಗಿ ಆಗ್ರಹಿಸಿ ಲೋಕಸಭೆಯ ಕಲಾಪವನ್ನು ನಡೆಯಗೊಡದಂತೆ ಪ್ರತಿಭಟಿಸಿದಾಗಲೂ ಮನಮೋಹನ ಸಿಂಗರ ಸರ್ಕಾರ ಜಗ್ಗದಿದ್ದಾಗ ಸಾಮಾನ್ಯಜನರಾದ ನಮ್ಮ ಪಾಡೇನು ಎಂಬ ಅಸಹಾಯಕತೆ ನನ್ನಂಥವರನ್ನು ಕಾಡಿದೆ. ಆಗ ನೆನಪಿಗೆ ಬಂದ್ದು ನನ್ನ ಕೈಲೇ ಇರುವ, ಬಳಸಲು ಹೇಗೋ ಹಾಗೆ ಬಳಸದಿರಲೂ ಸಾಧ್ಯವಿರುವ ಸ್ವಾತಂತ್ರ್ಯವನ್ನು ಇನ್ನೂ ಅಳಿಸಿಹಾಕದಿರುವ ಸಾಧನವಾಗಿರುವ ಮೊಬೈಲ್ .

ಜನವಿರೋಧೀ ನೀತಿಗಳ, ಪ್ರಜಾತಂತ್ರಮುಖವಾಡದ ಸರ್ವಾಧಿಕಾರೀ ಉದ್ಯಮಪರಸರಕಾರದ ಆರ್ಥಿಕ-ರಾಜಕೀಯದ ವಿರುದ್ಧ ನಾನು ಬಳಸಬಹುದಾದ, ನನಗೆಟುಕುವ ಸಾಧನ ಮೊಬೈಲ್. ಆದ್ದರಿಂದ ಮೊಬೈಲನ್ನು ಬಿಸಾಡಿದ್ದೇನೆ.ನನ್ನ ಈ ಕ್ರಮ ಸಿಟ್ಟು ಬೇಜಾರು ಅಥವಾ ಭಾವಾವೇಶದಿಂದ ಕೈಗೊಂಡಿದ್ದಲ್ಲ. ನನ್ನ ತಿಳುವಳಿಕೆಯಂತೆ ಮೊಬೈಲ್ ಅಥವಾ ನಿಸ್ತಂತು ತಂತ್ರಜ್ಞಾನ ಮಿಲಿಟರಿ, ವೈದ್ಯಕೀಯ, ಮತ್ತು ಯಾವುದೇ ತುರ್ತುಸೇವೆಗೆ ಸಂಬಂಧಿಸಿದ್ದಾದರೆ ಅತ್ಯಂತ ಉಪಯೋಗಿ. ಅಮಾಯಕರು, ಯುವಜನರು, ಕಾಲೇಜು ವಿದ್ಯಾರ್ಥಿಗಳು, ಶೋಕಿಲಾಲರು ಮತ್ತು ಹಣದ ಬೇಜವಾಬ್ದಾರಿ ಬಳಕೆಯ ಜನರನ್ನು ಬಂಡವಾಳಮಾಡಿಕೊಂಡು ಮೋಸಗಾರಿಕೆಯ ಷರತ್ತುಗಳನ್ನು ಒಡ್ಡಿ ಕೋಟ್ಯಾಂತರ ರೂ/ಡಾಲರ್ ಹಣಮಾಡಿಕೊಳ್ಳುವ ವ್ಯಾಪಾರಿಗಳ ಸಾಧನವಾದರೆ ಅನಗತ್ಯ. ಈಗ ಆಗಿರುವುದು ಅದೇ.

ಮೊಬೈಲ್ ತಂತ್ರಜ್ಞಾನಕ್ಕಿಂತ ಮೊಬೈಲ್ ಉದ್ಯಮ ಜನರನ್ನು ಆಳುತ್ತಿದೆ. ಎರಡೂ ಒಂದೇ ಎಂದು ತುಂಬಾಜನರು ಅಂದುಕೊಂಡಿದ್ದಾರೆ. ಜನರ ಕೈಲಿನ ಪುಡಿಗಾಸುಗಳನ್ನು ಉಪಾಯವಾಗಿ, ನಯವಾಗಿ ಅಗೋಚರವಾಗಿ ಒಟ್ಟುಮಾಡುವ ವ್ಯಾಪಾರ ಇದು. ರಾಜಕಾರಣಿಗಳ ಕೈಗೆ ಉದ್ಯಮಿಗಳು ನಾನಾ ವಿಧದಲ್ಲಿ ದಾಟಿಸುವ ಕೋಟ್ಯಾಂತರ ಹಣ ಎಲ್ಲಿಂದ ಬರುತ್ತದೆ? ನಿಮ್ಮಂಥವರು ನನ್ನಂಥವರೇ ಕೊಡಬೇಕು ತಾನೆ? ನಾವಿಲ್ಲದೆ ಮೊಬೈಲ್ ಉದ್ಯಮ ನಡೆಯುವುದು ಸಾಧ್ಯವಿಲ್ಲ. ಆದ್ದರಿಂದ ಈ ಕ್ರಮ. ಮೊಬೈಲ್ ಅನಿವಾರ್ಯವೇನಲ್ಲ. ಹಾಗೆಂದು ನಂಬಿಸಿದ್ದಾರೆ.

ಇದು ಮಾರ್ಕ್ಸ್ ಹೇಳುವ ಮಿಗುತೆ ಮೌಲ್ಯದ 21ನೆಯ ಶತಮಾನದ ರೂಪ. ಇವುಗಳ ಮುಂದೆ ಕಾಸಿನ ಬಡ್ಡಿ, ಬಾಡಿಗೆ, ಲಾಭಾಂಶ ಮುಂತಾದ ಶೋಷಣಾಕ್ರಮಗಳು ಜಾರಿಯಲ್ಲಿದ್ದರೂ ಹಳೆಯದಾಗಿವೆ. ಯಾವುದೇ ಕಂಪೆನಿಯ ಮೊಬೈಲ್ ಬಳಸಿದರೂ ಒಂದೇ ನಂಬರ್ ಹೊಂದಬಹುದು ಎನ್ನುವುದು ಮೇಲುನೋಟಕ್ಕೆ ‘ಸೌಲಭ್ಯ’ವಾಗಿ ತೋರುತ್ತದೆ. ಸೌಲಭ್ಯ ಹೌದು. ಆದರೆ ಜನರಿಗಲ್ಲ. ಉದ್ಯಮಿಗಳಿಗೆ. ಸಾರ್ವಜನಿಕ ವಲಯದ ಮೊಬೈಲನ್ನು ಅಸಮರ್ಥ ಎಂದು ದೂರುವವರೆಲ್ಲಾ ಖಾಸಗಿ ಕಂಪನಿಗಳ ಜಾಲಕ್ಕೆ ಸಿಕ್ಕಿಕೊಳ್ಳಲು ಎಸೆದ ಬಲೆ.

ನನ್ನ ಈ ಕ್ರಮ ವೈಯಕ್ತಿಕವಾಗಿರುವವರೆಗೂ ಸರಕಾರವೇನೂ ಬಿದ್ದುಹೋಗುವುದಿಲ್ಲ. ಅಥವಾ ಹಗರಣ ಪರಿಹಾರವಾಗಿಬಿಡುವುದಿಲ್ಲ. ನಿರುದ್ಯೋಗ, ಬೆಲೆಯೇರಿಕೆ, ಭ್ರಷ್ಟಾಚಾರ ಸಮಸ್ಯೆಗಳು ಬಗೆಹರಿದುಬಿಡುವುದಿಲ್ಲ. ಆದರೆ ಇದು ಮತ್ತು ಇಂಥ ಇನ್ನೂ ಯಾವ್ಯಾವ ಕ್ರಮಗಳಿವೆಯೋ ಅವೆಲ್ಲಾ ಸಾಮೂಹಿಕವಾದರೆ ಏನಾಗಬಹುದು?

ಪೂರಕ ಓದಿಗೆ – ಇಲ್ಲಿ ಕ್ಲಿಕ್ಕಿಸಿ

‍ಲೇಖಕರು avadhi

13 February, 2011

3 Comments

  1. Vasanth

    No body advertise that you purchase vegetables or rise. But you can find hundreds of advertisement on mobile phone and various SMS offer. If mobile users stop using SMS, the whole mobile industry will collapse. Huge economy is generated through SMS. But we have failed to understand the hidden agenda of mobile companies and we have become slave to this tools. Mobile etiquette in India is dream.

  2. chandrashekar

    yeen maadodu swamy hagaranagala saramaleyalli mobile bisiyaagideyalla adakke, joballi itkollodu kasta anta

  3. Laxminarayana

    How true are your words Vasanth! Surely sooner or later your wisdom will dawn on all the users of these instruments. Apart from lack of information what is holding them back is obviously the utility value of the technology that the mobile companies are banking upon to lure the customers

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading