ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಶರ್ಮಿಳಾ….

– ಸುಮಂಗಲ


ನವೆಂಬರ್ 2, 2000, ಮಣಿಪುರದ ಮಾಲೋಮ್ ನಲ್ಲಿ ಅಂದು ಹರಿಯಿತು ರಕ್ತದ ಕೋಡಿ,
ಹತ್ತು ಜನ ಅಮಾಯಕರು ಹತ್ಯೆಯಾದರು.
ಗುಂಡಿಟ್ಟವರು ಯಾರೋ ಹೊರಗಿನವರಲ್ಲ, ನಮ್ಮನ್ನು ರಕ್ಷಿಸಲೆಂದು ನಿಯೋಜಿತವಾಗಿದ್ದ ಅಸ್ಸಾಮ್ ರೈಫಲ್ಸ್ ನವರೇ ನಮ್ಮೆದೆಗೆ ಗುರಿ ಇಟ್ಟಿದ್ದರು ಅಂದು…
ಇದೊಂದೇ ಬಾರಿಯಲ್ಲ, ಎಷ್ಟೆಲ್ಲ ಸಲ ನಮ್ಮ ದೇಹ, ಮನಸ್ಸುಗಳ ಮೇಲೆ ಲಗ್ಗೆ ಇಟ್ಟವರಲ್ಲಿ ಎಷ್ಟೆಲ್ಲ ಬಗೆಯ ಮನುಷ್ಯರಿದ್ದರು…
ನನ್ನ ಸುತ್ತಲಿನ ಈ ಹಿಂಸೆ, ಮೈಮನಸುಗಳ ಮೇಲಿನ ಆಕ್ರಮಣಗಳ ಕಂಡು ಹೇಗೆ ಸುಮ್ಮನಿರಲಿ…
ನವೆಂಬರ್ 3 2000, ಅಂದಿನ ಊಟದ ನಂತರ ನಾನು ಈ ಎಲ್ಲದರ ವಿರುದ್ಧ ನನ್ನ ಪುಟ್ಟಪ್ರತಿಭಟನೆಯಾಗಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ.
ಅಂದಿನಿಂದ ಇಂದಿನವರೆಗೆ ನಾನು ಈ ಬಾಯೆಂಬ ಮಾಯೆಯೊಳು ಯಾವ ಆಹಾರವನ್ನೂ ತೆಗೆದುಕೊಳ್ಳಲಿಲ್ಲ.
ಪ್ರಭುತ್ವ ಇನ್ನೂ ಎಚ್ಚೆತ್ತುಕೊಂಡಿಲ್ಲ … ಆದರೆ ನನ್ನ ಚೈತನ್ಯ ಇನ್ನೂ ಬತ್ತಿಲ್ಲ,
ಆರಿಲ್ಲ ಇನ್ನೂ ಪ್ರತಿಭಟನೆಯ ಕಿಡಿ
ನಾನು ಇರೋಮ್ ಚಾನು ಶರ್ಮಿಳಾ
ನಾನು ಕೇವಲ ಮಗಳಲ್ಲ, ಸಹೋದರಿಯಲ್ಲ,
ನಾನು ಕೇವಲ ಶರ್ಮಿಳಾ ಕೂಡ ಅಲ್ಲ,
ನಾನು ಕೇವಲ ಮಹಿಳೆಯೂ ಅಲ್ಲ,
ಗೆಳೆಯ, ಗೆಳತಿಯರೇ, ನಾನು ಎಲ್ಲ ಹಿಂಸೆಯ ವಿರುದ್ಧ ಪ್ರತಿಭಟಿಸುವ ನಿಮ್ಮೆಲ್ಲರ ಆಳದ ಬೆಳಕಿನ ಉಂಡೆ,
ನಾನು ನಿಮ್ಮೆಲ್ಲರ ಮನಸ್ಸಾಕ್ಷಿ….
ನಾನು ಇಡೀ ದೇಶದ ಮನಸ್ಸಾಕ್ಷಿ ….
 

‍ಲೇಖಕರು avadhi

9 March, 2013

9 Comments

  1. D.Ravivarma

    ನಾನು ಇರೋಮ್ ಚಾನು ಶರ್ಮಿಳಾ
    ನಾನು ಕೇವಲ ಮಗಳಲ್ಲ, ಸಹೋದರಿಯಲ್ಲ,
    ನಾನು ಕೇವಲ ಶರ್ಮಿಳಾ ಕೂಡ ಅಲ್ಲ,
    ನಾನು ಕೇವಲ ಮಹಿಳೆಯೂ ಅಲ್ಲ,
    ಗೆಳೆಯ, ಗೆಳತಿಯರೇ, ನಾನು ಎಲ್ಲ ಹಿಂಸೆಯ ವಿರುದ್ಧ ಪ್ರತಿಭಟಿಸುವ ನಿಮ್ಮೆಲ್ಲರ ಆಳದ ಬೆಳಕಿನ ಉಂಡೆ,
    ನಾನು ನಿಮ್ಮೆಲ್ಲರ ಮನಸ್ಸಾಕ್ಷಿ….
    ನಾನು ಇಡೀ ದೇಶದ ಮನಸ್ಸಾಕ್ಷಿ ….
    manakalukitu….naanu nimmodaniruve…….

    • Manjula Narayanarao

      Oh odidare alu barutte.

  2. mmshaik

    shrmila havdu neenu nammellara manassaakshi…naavella ninnondige..!!!!!

  3. ಫ್ರಸಾದ್.ಡಿ.ವಿ.

    ಅಂತಃಸತ್ವ ಒಮ್ಮೆಗೆ ಮಡುಗಟ್ಟಿ, ಶರ್ಮಿಳಾಳೊಳಗೆ ಪ್ರವಹಿಸಿಬಿಡಬೇಕು ಎನ್ನಿಸಿತು! ಆಕೆ ನಿಜವಾಗಲೂ ದೇಶದ ಆಸ್ತಿ, ನಮ್ಮೆಲ್ಲರ ಮನಸ್ಸಾಕ್ಷಿ! ನಾನು ಮೌನವಾದೆ, ಇದು ಒಳಗುದಿಯನ್ನು, ’ಅಹಿಂಸೆಯನ್ನು ವಾಸ್ತವದೊಳಕ್ಕೆ ಸಂಧಾನಿಸುವ ಒಂದು ಬಿಂದು’ವಿನೆಡೆಗೆ ನಿರ್ದೇಶಿಸುವ ಧ್ಯಾನ.
    – ಪ್ರಸಾದ್.ಡಿ.ವಿ.

  4. Lingaraju bs

    ದೆಹಲಿಯಲ್ಲಿ ಅತ್ಯಾಚಾರಕ್ಕೀಡಾಗಿ ಮೃತಪಟ್ಟ ಆ ಹೆಣ್ಣುಮಗಳಿಗೆ ಸಿಕ್ಕಿದ ಬೆಂಬಲ ಈ ಹೆಣ್ಣು ಮಗಳಿಗೆ ಏಕೆ ಸಿಕ್ಕಿಲ್ಲ. ಒಂದು ಲೈಕ್ ಮೂಲಕ ಅಥವಾ ಮನೆಯ ಕಂಪ್ಯೂಟರ್ ಮುಂದೆ ಕುಳಿತು ಕೀ ಬೋಡರ್್ ಒತ್ತುವವರ ಈ ಅಳು ಯಾರಿಗೂ ಬೇಕಿಲ್ಲ. ಒಂದು ವೇಳೆ ಅಂತಃಸಾಕ್ಷಿ ಇದ್ದಿದ್ದರೆ ಶಮರ್ಿಳಾ ಹೋರಾಟ ಇಂದಿಗೂ ಮುಂದುವರೆಯುತ್ತಿರಲಿಲ್ಲ ಅಲ್ಲವೇ ಮಾನ್ಯರೆ

  5. ದಿವಾಕರ ನಾ

    ಶರ್ಮಿಳಾಗೆ ನ್ಯಾಯ ಒದಗಿಸುವುದೆಂದರೆ ಆಳುವ ವರ್ಗವನ್ನು ಪ್ರತಿನಿಧಿಸುವ ಆಡಳಿತಾತ್ಮಕ ಯಂತ್ರಗಳನ್ನು ಅಪರಾಧಿ ಸ್ಥಾನನದಲ್ಲಿ ನಿಲ್ಲಿಸಬೇಕು. ಈ ನಿಲುವಿಗೆ ಸರ್ಕಾರದ ಸಮ್ಮತಿ ಇದೆಯೇ ? ಇಲ್ಲವಾದರೆ ಈ ಸರ್ಕಾರದ ನಿಷ್ಕ್ರಿಯತೆಗೆ ಕಾರಣ ಆಳುವ ವರ್ಗಗಳ ಊಳಿಗಮಾನ್ಯ ಧೋರಣೆಯೇ ಅಲ್ಲವೆ. ವಿಪರ್ಯಾಸವೆಂದರೆ ಶರ್ಮಿಳಾ ಪರವಾಗಿ ದನಿ ಎತ್ತುತ್ತಿರುವವರ ಸಂಖ್ಯೆ ನಗಣ್ಯ, ಬುದ್ಧಿಜೀವಿಗಳೆಂಬ ಹಣೆ ಪಟ್ಟಿ ಹೊತ್ತಿರುವವರು. ಈ ದನಿ ಎಷ್ಟು ಕ್ಷೀಣ ಎಂದರೆ ಪಕ್ಕದಲ್ಲಿರುವವರಿಗೂ ಕೇಳಿಸುತ್ತಿಲ್ಲ. ಕೇಳಿಸಿಕೊಳ್ಳುತ್ತಿರುವವರ ಕಿವಿ, ಕಣ್ಣು, ಹೃದಯ, ಮೆದುಳು ಎಲ್ಲವೂ ನಿಷ್ಕ್ರಿಯವಾಗಿವೆ. ಕೈಗಳು ಮಾತ್ರ ಬಲವಾಗಿವೆ,, ಪ್ರತಿರೋಧದ ದನಿಗಳನ್ನು ಅಡಗಿಸಲು. ಆಳ್ವಿಕರಿಗೆ ಕೊಲ್ಲುವ ಹಕ್ಕು ನೀಡಿದವರಾರು ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮುನ್ನ ಸಾವನ್ನು ಸಂಭ್ರಮಿಸುವ, ಹಿಂಸೆಯನ್ನು ಮೆಲ್ಲುಗಣ್ಣಿನಿಂದ ನೋಡು, ಪ್ರತಿರೋಧದ ದನಿಯನ್ನು ಸ್ವಾರ್ಥತೆಯ ದೃಷ್ಟಿಯಿಂದ ನೋಡುವ ನಮ್ಮ ನಾಗರಿಕ ಸಮಾಜದ ಧೋರಣೆ ಬದಲಾಗಬೇಕು. ಶರ್ಮಿಳಾ ಶಸ್ತ್ರಾಸ್ತ್ರ ಹಿಡಿದಿದ್ದರೆ ಈ ವೇಳೆಗೆ ಕೆಲವರ ದೃಷ್ಟಿಯಲ್ಲಿ ಹುತಾತ್ಮರಾಗಿಬಿಡುತ್ತಿದ್ದರು. ಇನ್ನು ಕೆಲವರ ದೃಷ್ಟಿಯಲ್ಲಿ ಮತ್ತೊಬ್ಬ ಕಸಬ್ ಆಗಿಡಬಿಡುತ್ತಿದ್ದಳು. ಆಕೆಯ ಮೌನ ಪ್ರತಿಭಟನೆಗೆ ಮನ್ನಣೆಯೇ ಇಲ್ಲದಿರುವುದನ್ನು ನೋಡಿದರೆ ನಮ್ಮ ನಾಗರಿಕತೆಯ ಬಗ್ಗೆಯೇ ಅನುಮಾನ ಮೂಡುತ್ತದೆ.
    ನಾ ದಿವಾಕರ

    • Sumangala

      ದಿವಾಕರ ಅವರು ಹೇಳಿರುವುದಕ್ಕೆ ನನ್ನ ಸಹಮತವಿದೆ. ಶರ್ಮಿಳಾಳ ಉಪವಾಸ ಅಂತ್ಯಗೊಳ್ಳಬೇಕೆಂದರೆ ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆಗೆ ತಿದ್ದುಪಡಿ ಆಗಬೇಕು, ಮಣಿಪುರದಿಂದ ಅಸ್ಸಾಂ ರೈಫಲ್ಸ್ ವಾಪಸು ಕರೆಸಿಕೊಳ್ಳಬೇಕು, ಪ್ರಭುತ್ವದ ಆಡಳಿತಾತ್ಮಕ ಯಂತ್ರಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಅಥವಾ ಆ ನಿಟ್ಟಿನಲ್ಲಿ ತನಿಖೆಗಳು/ಪರಿಶೀಲನೆಗಳನ್ನು ಮಾಡುವ ಧೈರ್ಯ ಯಾರಿಗಿದೆ…? ಹದಿಮೂರು ವರ್ಷದಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೂ ಶರ್ಮಿಳಾ ಬೇಡಿಕೆಗಳ ಕುರಿತು ಗಂಭೀರ ಮಾತುಕತೆಗೆ ಪ್ರಭುತ್ವ ಮುಂದಾಗಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ ಮತ್ತು ಈ ವರೆಗೂ ರಾಷ್ಟ್ರ ಮಟ್ಟದ ವ್ಯಾಪಕವಾದ ಒಂದು ಜನಾಂದೋಳನ ಮಾಡಲು ಯಾರೂ ವಿಚಾರವಾದಿಗಳು/ಬುದ್ಧಿಜೀವಿಗಳು ಮುಂದಾಗಿಲ್ಲ, ನಿಜಕ್ಕೂ ನಮ್ಮಲ್ಲೆರ ಆತ್ಮಸಾಕ್ಷಿ ಸತ್ತಿದೆ ಎನ್ನಿಸುತ್ತಿದೆ.

  6. srjoshi

    ಶರ್ಮಿಳಾರ ಈ ಗಾಂಧಿಗಿರಿಗೆ ಏನು ಬೆಲೆ ಇದೆ ಹೇಳಿ. ಸಿನೆಮಾ ನಟರು ಕ್ರಿಕೆಟ್ ಆಡಿದರೆ ದಿನಗಟ್ಟಲೆ ‘ಲೈವ್’ ಪ್ರಸಾರ ಮಾಡುವ, ಅವರುಗಳು ಉಂಡುಟ್ಟುದುದನ್ನು ದಿನವಿಡೀ ಕೊರೆಯುವ ಚಾನಲ್ಗಳು ಹಾಗು ಕಚಕುಳಿ ವರದಿಗಳನ್ನೇ ವೈಭವೀಕರಿಸುವ ಪತ್ರಿಕೆಗಳಿಗೆ ಚಾನುಳ ತ್ಯಾಗ-ಹೋರಾಟ ಏಕೆ ಮಹತ್ವದ್ದಾಗುವುದಿಲ್ಲವೋ ತಿಳಿಯುತ್ತಿಲ್ಲ. ಕಳೆದ ಎಷ್ಟೊಂದು ವರ್ಷಗಳಿಂದ ಅವರು ಹೋರಾಟದ ಕಿಡಿಯನ್ನು ಉರಿಸುತ್ತಲೇ ಬಂದಿರುವುದೊಂದು ಪರಮ ಅಚ್ಚರಿಗಳಲ್ಲೊಂದು. ಆಕೆಯ ಹೋರಾಟಕ್ಕೊಂದು ಜನಾಭಿಪ್ರಾಯ ರೂಪಿಸುವ ಕೆಲಸವಾಗಬೇಕು, ದೇಶಾದ್ಯಂತ ಹೋರಾಟವೊಂದು ರೂಪಗೊಳ್ಳಬೇಕು.
    -ಎಸ್ ಆರ್ ಜೋಶಿ,ಬೆಂಗಳೂರು.

  7. k.r.siddaganga

    sharmila namma manasaakshi

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading