ವೃತ್ತಿಗೆ ನಿವೃತ್ತಿ -ಧ್ವನಿಗಲ್ಲ… ಅಲ್ವೇ
ಮಂಜುಳಾ ಸುಬ್ರಹ್ಮಣ್ಯ
ನಾವು ಒಂದು ಸುವಾಸನೆ ಮೂಗಿಗೆ ಬಡಿದರೆ ತಕ್ಷಣ ಅದು ಯಾವುದರದ್ದೂ?, ಹೂವಿದ್ದೋ, ಕಾಯಿಯದ್ದೋ, ಎಲೆಯದ್ದೋ; ಹೂವಿದ್ದಾದರೆ ಅದು ಯಾವ ಹೂವಿನದ್ದು, ಹೂವು ಬಿಡುವ ಗಿಡ, ಮರ, ಬಳ್ಳಿ ಯಾವುದಿರಬಹುದು.. ಅದು ಯಾವ ಪ್ರದೇಶದಲ್ಲಿದೆ… ಹೀಗೆ ಅದರ ಜಾಡು ಹಿಡಿದು ಅರಸುತ್ತೇವೆ…. ಹೀಗೆ ಒಂದು ಕಂಠ ನಮಗೆ ಆಪ್ತವಾದರೆ!!! …
ಮಂಗಳೂರು ಬಾನುಲಿ ಕೇಂದ್ರದ ಈ ಕಂಠ ಯಾರಿಗೂ ಆಪ್ತವಾಗದೆ ಇರದು. ಹಾಗೇ ಕಂಠದೊಡತಿ ನಿಮಗಷ್ಟೇ ಆಪ್ತತೆಯನ್ನು ನೀಡುತ್ತಾರೆ. ಅವರೇ ಕಿಣಿ ಮೇಡಂ..😊 ( ಶಕುಂತಲಾ ಆರ್ ಕಿಣಿ..ಸುಮಾರು ಮೂರು ದಶಕಗಳಿಂದ ಕನ್ನಡ, ತುಳು, ಕೊಂಕಣಿ..ನಿರರ್ಗಳ ಮಾತಿನಿಂದ ನಮ್ಮನ್ನು ಹಿಡಿದಿಟ್ಟವರು)
ಅವರ ಆತ್ಮೀಯತೆಗೆ ಪದಗಳ ಸಾಕ್ಷಿ, ‘ ಅದು ನೀವಾ “ಮಾರಾಯ್ರೆ”, ಗೊತ್ತೇ ಆಗ್ಲಿಲ್ಲ “ಮಾರಾಯ್ರೆ”, ನೀವೊಂದು ಹಾಗೂ ಮಾಡುದಾ “ಮಾರಾಯ್ರೆ”..😄 😄
ಇವರ ಮಾರ್ಗದರ್ಶನದಲ್ಲಿ ನಾನು ಒಂದಷ್ಟು ನನ್ನ ಭಾಷಾಜ್ಞಾನವನ್ನು ಸುಧಾರಿಸಿಕೊಂಡಿದ್ದೇನೆಂದರೆ ಅದು ನನಗೆ ಹೆಮ್ಮೆ ಜೊತೆಗೆ ಸಂತೋಷ ಕೂಡಾ.
ಇದನ್ನೆಲ್ಲಾ ಯಾಕೆ ನೆನಪಿಸಿಕೊಂಡೆ ಅಂದರೆ ಇನ್ನು ಕೆಲವೇ ದಿನಗಳಲ್ಲಿ ಇವರು ತಮ್ಮ ವೃತ್ತಿ ಬದುಕಿನಿಂದ ನಿವೃತ್ತಿಯ ಜೀವನದತ್ತ ಮುಖಮಾಡಲಿದ್ದಾರೆ. ಮೇಡಂ ಇದು ನಿಮಗೆ ಸರಕಾರಿ ಕರ್ತವ್ಯ ಪಾಳಿಯ ನಿವೃತ್ತಿ..ನಿಮ್ಮ ಧ್ವನಿಗಲ್ಲ.. ನಿಮ್ಮ ಅಲೋಚನೆಗಳಿಗಲ್ಲ.. ನಿಮ್ಮ ಸೃಜನಶೀಲ ಬರವಣಿಗೆಗಳಿಗಲ್ಲ ಎಂಬುದು ನಮಗೂ ಗೊತ್ತು.. ಇನ್ನು ನಿಮ್ಮ ಸಮಯ .. ನಿಮ್ಮ ಮುಂದಿನ ಬದುಕಿಗೆ ನನ್ನ ಪ್ರೀತಿಯ ಹಾರೈಕೆ..
ತುಂಬು ಪ್ರೀತಿಯ ಧನ್ಯವಾದಗಳೊಂದಿಗೆ





ಬಾಲ್ಯ, ಕಾಲೇಜು ದಿನಗಳಲ್ಲಿ ನಮ್ಮ ಕನಸುಗಳನ್ನು ಕಟ್ಟ್ಟಿ ಕೊಟ್ಟ ಆಕಾಶವಾಣಿ, ಮತ್ತದರ ದ್ವನಿ ಶಕುಂತಲಾ ಆರ್ ಕಿಣಿ ಯವರನ್ನು ನೆನಪಿಸಿದಕ್ಕೆ ಧನ್ಯವಾದಗಳು.