ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ..

ಗುಂಡಣ್ಣ ಚಿಕ್ಕಮಗಳೂರು 

ನಾನು ಸಾಕಷ್ಟು ಆತ್ಮ ಚರಿತ್ರೆಗಳನ್ನು ಓದಿದ್ದೇನೆ…
ಬರೆಯುವ ಶೈಲಿ ಹೇಗಿರಬೇಕು ಎನ್ನುವ ಜಿಜ್ಞಾಸೆ ಸಾಕಷ್ಟು ತಲೆ ಬಿಸಿ ಮಾಡಿತ್ತು…

ಇದುವರೆವಿಗೂ ನನಗೆ ಜ್ಯೋತಿ ಬಸು ಅವರ ಆತ್ಮ ಚರಿತ್ರೆಯ ಬರಹದ ಶೈಲಿ ತುಂಬಾ ಹಿಡಿಸಿತ್ತು…. ತಮ್ಮ ವಯಕ್ತಿಕ ಕಥೆ ಹೇಳದೆ, ಪಕ್ಷ, ಸಂಘಟನೆ, ಹೋರಾಟಗಳ ಜೊತೆ ಜೊತೆಗೇ ತಮ್ಮ ಜೀವನವನ್ನು ತಳ ಮಟ್ಟದಲ್ಲಿ ಗುರುತಿಸಿಕೊಂಡು ಹೋಗುವ ಶೈಲಿ…

ನಂತರ , ‘ಕುದಿ ಎಸರು’ ಓದಿದ ಮೇಲೆ, ಬರೆದರೆ ಹೀಗೆ ನಿರ್ಭಿಡೆಯಿಂದ, ನಿಸ್ವಾರ್ಥ ದಿಂದ ಬರೆಯಬೇಕು ಎನ್ನಿಸಿತು.

ಓದುವಾಗ, ಓದಿದ ಮೇಲೆ ಸುಮಾರು ದಿನ ತಲ್ಲಣ ಗೊಳಿಸಿದ ಚರಿತ್ರೆ….

ಓದಿದ ನಂತರ, ಮೊದಲ ಬಾರಿ ಕಲಾಕ್ಷೇತ್ರದಲ್ಲಿ ಅಮ್ಮ ಸಿಕ್ಕಾಗ, ಬಿಗಿದಪ್ಪಿ ಅತ್ತಿದ್ದೆ… ಅಮ್ಮ ಸ್ವಾಂತನ ನೀಡಿದರು….

ಇಂದೂ ಈ ಮಾತುಗಳನ್ನು ಬರೆಯುವಾಗ ಕಣ್ಣಲ್ಲಿ ನೀರು ತುಂಬಿದೆ….
ಒಂದು ಕಾರಣ, ಓದಿದ್ದನ್ನು, ಅಮ್ಮನ ಕಷ್ಟಗಳನ್ನು ನೆನಪಿಸಿಕೊಂಡು…
ಎರಡನೇ ಕಾರಣ, ಅದು ಸಂತೋಷದ , ಅಭಿಮಾನದ
ಆನಂದಬಾಷ್ಪ……

ಅಭಿನಂದನೆಗಳು ಅಮ್ಮ… ನನ್ನ ಹೃದಯದ ಅಮ್ಮ…

‍ಲೇಖಕರು avadhi

18 December, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading