ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ನೀನೆಂದೆಂಬ..

-ಹೆಚ್ ಆರ್ ಲೀಲಾವತಿ

ನಾನು ನೀನೆಂದೆಂಬ
ಜೀವ ಜಾವದ ಹೂವು
ಪರಿಮಳದ ಜಾಡಿನಲಿ
ಮೈಮರೆತ ಪಯಣಿಗರು

ಪ್ರೇಮ ಪಯಣದ ನಾವೆ
ಮೆಲುಮೆಲನೆ ಸಾಗುತಿರೆ
ಭುವಿ ಬಾನ ಮಿಲನದಲಿ
ಹೃದಯಗಳ ಸಮ್ಮಿಲನ

ಋತು ವಸಂತನ ಗಾನ
ಚುಂಬಿಸಲು ಕಿವಿದೆರೆಯ
ಯಾವ ಮೋಹದ ಭಾವ
ಮೀಟಿತೆದೆ ವೀಣೆಯನು

ರಾಗ ರಂಜಿತ ತುಟಿಗೆ
ಒಲವ ಮುತ್ತಿನ ಮಾಲೆ
ಕಣ್ಣ ಬೆಳಕಂಚಿನಲಿ
ತುಳುಕುತಿಹ ನಗೆ ಲೀಲೆ

ನಾ ನೀನು ಒಂದಾಗಿ
ಸರಸದಲಿ ವಿಹರಿಸಿರೆ
ಜೋಡಿ ಹಂಸೆಯ ತೆರದಿ
ಮುಕ್ತ ಬಾಳಿನ ಯಾನ

‍ಲೇಖಕರು Admin

5 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading