ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾದ ಮಣಿನಾಲ್ಕೂರು ಜೊತೆ ‘ಫಟಾ ಫಟ್’

ಗಾಯಕ ಮತ್ತು ಹೋರಾಟಗಾರರಾದ ನಾದ ಮಣಿನಾಲ್ಕೂರು ತಮ್ಮ ಕಾವ್ಯ ಸಂಚಾರಕ್ಕೆ ಹೆಸರುವಾಸಿ. ತಂಬೂರಿ ಹಿಡಿದು ಇಡೀ ರಾಜ್ಯಆಡಿನಂತ ಹಾಡುತ್ತಾ ಇವರು ನಡೆದುಬಿಟ್ಟಾಗ ಎಲ್ಲರೂ ಅಚ್ಚರಿಗಣ್ಣುಗಳಿಂದ ನೋಡಿದರು.

ಸಂತ ಮತ್ತು ಸೂಫಿ ಹಾಡುಗಳಿಗೆ ದನಿಯಾಗುವ ಇವರು ಈ ಬಾರಿ ಹೊಟೇಲ್ ಒಂದರ ಮೆನುಕಾರ್ಡಿನ ತಿಂಡಿ ತಿನಿಸುಗಳಿಗೆ ದನಿಯಾಗಿ ಹೊಸ ಪ್ರಯೋಗ ಮಾಡಿದ್ದಾರೆ. ಅದೇನೆಂದರೆ ಮೆನುಕಾರ್ಡಿನಲ್ಲಿರುವ ಒಂದೊಂದು ತಿಂಡಿ ತಿನಿಸುಗಳ ಹೆಸರುಗಳಿಗೆ ಕವಿತೆಗಳ ರೂಪ ನೀಡಿ ಹಾಡಿದ್ದಾರೆ.

ಅವರ ಈ ಪ್ರಯೋಗದ ಹಿನ್ನೆಲೆ ‘ಅವಧಿ’ಯು ಫಟಾ ಫಟ್ ಸಂದರ್ಶನ ನಡೆಸಿತು.

ಮೆನುಕಾರ್ಡನ್ನು ಕವಿತೆಯಂತೆ ಓದಿದ್ದು ನಶೆಯಲ್ಲಿನೇನಾ ?

 ನಶೆಯಲ್ಲಿ ಅಲ್ಲಾ. ನಿಶೆಯಲ್ಲಿ.

ಅಲೆಮಾರಿಗೆ ಬಾರಿನಲ್ಲೇನು ಕೆಲಸ ?

 ಅಲ್ಲಿ ತುಂಬಾ ಅಲೆಮಾರಿಗಳಿರ‍್ತಾರೆ. ಅವರನ್ನ ಭೇಟಿ ಆಗೋದು.

ಮೀನು ತಿನ್ನೋದು, ಮೆನು ಓದೋದು. ನಿಮಗೆ ಯಾವುದು ಸುಲಭ ?

ಮೀನು ತಿನ್ನೋದು.

ಮೆನುಕಾರ್ಡನ್ನು ಕವಿತೆಯಾಗಿಸಲು, ಕವಿತೆಗಳಿಗೇನು ಕೊರತೆ ಇತ್ತೇನು ?

 ಕವಿತೆಗಳಿಗೆ ಕೊರತೆ ಅಂತಲ್ಲ. ಮೆನುಕಾರ್ಡನ್ನು ಕವಿತೆಯ ಹಾಗೆ ಕಾಣಬಹುದು ಅಂತಾ.

ಬಾರಲ್ಲಿ ಕವಿತೆಯ ಕಾರುಬಾರು ನಡೆಸಿದ್ದು ಇದು ಮೊದಲೇನಾ ?

 ಬಹುಶಃ ಹೌದು.

‍ಲೇಖಕರು Avadhi

26 August, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading