ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಡಿಗ್ ಸಾಹಿತ್ಯ ಪ್ರತಿಷ್ಠಾನದ ವಾರ್ಷಿಕ ಪ್ರಶಸ್ತಿ ಪ್ರಕಟ…

ತುಮಕೂರಿನ ನಾಡಿಗ್ ಸಾಹಿತ್ಯ ಪ್ರತಿಷ್ಠಾನ ಕೊಡುವ ಐದನೇ ವರ್ಷದ ೨೦೨೨ನೇ ಸಾಲಿನ ರಾಜ್ಯಮಟ್ಟದ ದಿ. ಡಾ.ನಾಡಿಗ್ ಕೃಷ್ಣಮೂರ್ತಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ರಾಜ್ಯಮಟ್ಟದ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿ ಪ್ರಕಟವಾಗಿದೆ.

೨೦೨೨ನೇ ಸಾಲಿನ ದಿ. ಡಾ.ನಾಡಿಗ್ ಕೃಷ್ಣಮೂರ್ತಿ ಪತ್ರಿಕೋದ್ಯಮ ಪ್ರಶಸ್ತಿಗೆ ಇಬ್ಬರು ಆಯ್ಕೆಯಾಗಿದ್ದು, ೪೭ ವರ್ಷಗಳಿಂದ ತುಮಕೂರಿನಲ್ಲಿ “ಅಮರ ಸಂದೇಶ” ಎಂಬ ದಿನ ಪತ್ರಿಕೆಯನ್ನು ನಡೆಸುತ್ತಿರುವ ಪತ್ರಿಕೆಯ ಸಂಪಾದಕರಾದ ಹಾಗೂ ಕನ್ನಡದ ಹೋರಾಟಗಾರ ತುಮಕೂರಿನ ತೊಗ ಅಡವಿಶಪ್ಪ ಹಾಗೂ ಕಳೆದ ಹತ್ತು ವರ್ಷಗಳಿಂದ “ಅಮರ ಬಾಪು ಚಿಂತನ” ಪತ್ರಿಕೆಯನ್ನು ನಡೆಸುತ್ತಿರುವ ಹಿರಿಯ ಗಾಂಧಿವಾದಿ ಹಾಗೂ ಪತ್ರಿಕೆಯ ಸಂಪಾದಕರಾದ ಶ್ರೀ ಜೀರಿಗೆ ಲೋಕೇಶ್ ಆಯ್ಕೆಯಾಗಿದ್ದಾರೆ.

೨೦೨೨ನೇ ಸಾಲಿನ ಡಾ. ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿಗೆಗೂ ಸಹ ಇಬ್ಬರನ್ನು ಆಯ್ಕೆಮಾಡಲಾಗಿದ್ದು, “ಮಾತಾಪಿತೃಗಳ ಕೊಡುಗೆ” ಕೃತಿಕಾರರಾದ ಬೆಂಗಳೂರಿನ ಶ್ರೀ ಪ್ರಮೋದ್ ಕುಲಕರ್ಣಿ ಹಾಗೂ “ಮುದ್ದಿನ ಅಪ್ಪ ಬಸವಣ್ಯಪ್ಪ” ಕೃತಿಯ ಲೇಖಕರಾದ ತುಮಕೂರಿನ ಡಾ. ಭರತ್ ರಾಜ್ ರವರನ್ನು ತೀರ್ಪುಗಾರರು ಆಯ್ಕೆಮಾಡಿದ್ದಾರೆ.

ಜೂನ್ ತಿಂಗಳಿನಲ್ಲಿ ತುಮಕೂರಿನಲ್ಲಿ ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.

‍ಲೇಖಕರು avadhi

12 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading