35ನೇ ವರ್ಷಕ್ಕೆ ಕಾಲಿಟ್ಟ ಅಂಕಣ:
ಇದು ಕೊಂಚ ಸ್ವಂತದ ತುತ್ತೂರಿ.
‘ಪತ್ರಿಕಾ ದಿನಾಚರಣೆ’ ಎಂಬ ಕಾರಣಕ್ಕಾಗಿ ಇದನ್ನು ದಾಖಲಿಸಬೇಕು. ‘ಪ್ರಜಾವಾಣಿ’ಯಲ್ಲಿ ನಾಗೇಶ ಹೆಗಡೆಯ ‘ವಿಜ್ಞಾನ ವಿಶೇಷ’ ಅಂಕಣ ಸತತ 35ನೇ ವರ್ಷದಲ್ಲಿ ಮುನ್ನಡೆಯುತ್ತಿದೆ. ಯಾವುದೇ ಒಂದು ಅಂಕಣ ಇಷ್ಟು ದೀರ್ಘ ಅವಧಿಯ ನಂತರವೂ ಜೀವಂತವಾಗಿರುವುದು ಕನ್ನಡದ ಪತ್ರಿಕೆಗಳ ಮಟ್ಟಿಗೆ ದಾಖಲೆ ಎಂದು ಗೆಳೆಯರೊಬ್ಬರು ಐದು ವರ್ಷಗಳ ಹಿಂದೆ ಗುರುತಿಸಿದ್ದರು. (ಇದು ತಪ್ಪಾಗಿದ್ದರೆ ಮಾಧ್ಯಮ ಅಕಾಡೆಮಿಯ ಚರಿತ್ರಕಾರರು ಸರಿಪಡಿಸಬೇಕು).
ಓದುಗರ ಆಸಕ್ತಿ ಮತ್ತು ಸಂಪಾದಕರ ಬೆಂಬಲವೇ ಈ ಅಂಕಣದ ಆಮ್ಲಜನಕ. ಇದರ ದೀರ್ಘ ನಡಿಗೆಯಲ್ಲಿ ಸಾಕಷ್ಟು ಕೌತುಕದ ಕತೆಗಳಿವೆ. 20ನೇ ವರ್ಷದಲ್ಲಿ ಇದಕ್ಕೆ ಸಂಪಾದಕೀಯ ಮುಖ್ಯಸ್ಥರೊಬ್ಬರು ಹಠಾತ್ ಗಲ್ಲು ಶಿಕ್ಷೆ ಘೋಷಿಸಿದರು. ಅದು ಮಾಲಿಕರಿಗೆ ಗೊತ್ತಾಗಿ, ಮರುದಿನವೇ ಇದಕ್ಕೆ ಜೀವದಾನ ಸಿಕ್ಕಿತು; ಅಷ್ಟೇ ಅಲ್ಲ ಅದುವರೆಗೆ ಅನಾಮಿಕವಾಗಿದ್ದ ಅಂಕಣಕಾರನಿಗೆ ಅಂದಿನಿಂದ ಬೈಲೈನ್ ಸಿಗತೊಡಗಿತು.
ಗಲ್ಲುಶಿಕ್ಷೆ ಘೋಷಿಸಿದ್ದ ಆ ಮುಖ್ಯಸ್ಥರಿಗೆ, ಜೀವದಾನ ಕೊಟ್ಟ ಶ್ರೀ ಶಾಂತಕುಮಾರರಿಗೆ ಹಾಗೂ ಈ ಅಂಕಣಕ್ಕೆ ನಿರಂತರ ಜೀವಪೋಷಣೆ ಮಾಡುತ್ತಿರುವ ‘ಪ್ರಜಾವಾಣಿ’ಯ ಓದುಗರಿಗೆ ಧನ್ಯವಾದಗಳು.
-ನಾಗೇಶ ಹೆಗಡೆ






ಅಭಿನ೦ದನೆಗಳು. I am sure this must have been responsible for the scientific temper of at least some people in the community
ನಿಮ್ಮ ಈ ಸುದೀರ್ಘ ನಡೆಗೆ ಶುಭಾಶಯಗಳು ಸರ್
Can u identify the chap who had stopped the column? I can guess?!!
ಪ್ರಜಾವಾಣಿಯ ಜೊತೆಗಿನ ಈ ಅರಿವಿನ ಅಭಿಯಾನಕ್ಕೆ ಅಭಿನಂದನೆಗಳು ಸರ್.
vijnana vishayagalannu swaarasyakaravaagi/saralavaagi/aatmeeyavaagi hanchikolluva nimma ankana 35 pooraisi munnadeyuttiiruvudu atyanta santoshakara sangati ; Abhinandanegalu/shubha harakegalu.
Narayan Raichur
ಪಿಯು ತನಕ ವಿಜ್ನಾನ ಓದಿ ಗಣಿತಕ್ಕೆ ಹೆದರಿ ಪದವಿಯಿಡಿ ಮಾನವಿಕ/ಕನ್ನಡ ಓದಿದ ನಾನು ಕಳೆದ ೩೦ ವರ್ಷಗಳಿಂದ ನಾಗೇಶ್ ಹೆಗಡೆಯವರ ಬರಹಗಳನ್ನು ಓದಿಕೊಂಡೇ ಬಂದಿದ್ದೇನೆ.ವಿಜ್ಞಾನದಂತಹ ಪಕ ಅನವಯಿಕ ಮತ್ತು ಪ್ರಯೋಗಿಕ ಅನುಭವಾತ್ಮಕ ಸಂಗತಿಗಳನ್ನು ಲಲಿತ ಪ್ರಬಂಧಗಳ ಮಾದರಿಯಲ್ಲಿ ಸಂವಹನ ಗೊಳಿಸುವ ಕಲೆ ನಾಗೇಶ್ ಹೆಗಡೆಯವರಿಗೆ ಕರಗತವಾಗಿದೆ. ತರಗತಿಯ ಕನ್ನಡ ಪಠ್ಯಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ವಿಷ್ಯಗಳು ಪ್ರಸ್ತಾಪವಾಗಿದ್ದರೆ ನಾಗೇಶ ಹೆಗಡೆಯವರ ಬರಹಗಳನ್ನು ಓದಿಕೊಂಡು ಸ್ವತಃ ಸಂಶೋಧನೆ ಮಾಡಿದ ತರ ಹೆಮ್ಮೆ ಯಿಂದ ಬೋಧನೆ ಮಾಡಿದ್ದೂ ಉಂಟು.ವಿದ್ಯಾರ್ಥಿಗಳಿಗೆ ಆಶ್ಚರ್ಯ ಕನ್ನಡ ಮೇಷ್ಟ್ರು ಇಷ್ಟು ಚೆನ್ನಾಗಿ ವಿಜ್ಞಾನದ ಸಂಗತಿಗಳನ್ನು ಕಲಿತ ಬಗೆ ಗೆ ಹ ಹ..ಇದಕ್ಕೆ ನಾನು ನಾಗೇಶ್ ಹೆಗಡೆಯವರ ಬರಹಗಳಿಗೆ ಋಣಿ.. ಅವರ ಇರುವುದೊಂದೆ ಭೂಮಿ ಕೃತಿಯಂತೂ ಈಗಲೂ ನನ್ನ ಪಾಲಿನ ಮೌಲಿಕ ಆಕರ ಗ್ರಂಥ. ಭಾಷೆಯ ವಿಷಯದಲ್ಲಿ ಅವರ ಕಲೆಗಾರಿಕೆ ಅನುಪಮ. ಸರಳ ಸೋದಾಹರಣವಾದ ಶೈಲಿಯಲ್ಲಿ ಚಿತ್ರಿಸುವ ಪರಿ ಎಂತಹ ದಡ್ಡನಿಗೂ ಕಠಿಣ ಪರಿಕಲ್ಪನೆಗಳು ಸರಳವಾಗಿ ಅರ್ಥವಾಗುತ್ತವೆ. ವಿಜ್ಞಾನದ ವಿಷಯಗಳಿಗೆ ಸಾಹಿತ್ಯಕ ಸ್ಪರ್ಷಕೊಟ್ಟು ಓದಲು ಹಚ್ಚುವ ಅವರ ಬರಹಗಳ ಮಧುರ ಗುಣ ನಿಜಕ್ಕೂ ಅನನ್ಯ..
ಕನ್ನಡದಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕ ಅರಿವು ಮೂಡಿಸುವಲ್ಲಿ ಶ್ರೀ ನಾಗೆಶ ಹೆಗಡೆಯವರದು ಮಹತ್ವದ ಕೆಲಸ. ಸಾಹಿತ್ಯಿಕ ಭಾಷೆಯಲ್ಲಿ ವಿಜ್ಞಾನ, ಪರಿಸರ ಕಾಳಜಿಗಳನ್ನು ಹೇಳುವ ರೀತಿ ಅನನ್ಯವಾದದ್ದು. ನಾನಂತು ಅವರ ಅಭಿಮಾನಿ.
ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿರುವ ಶ್ರೀಯುತ ನಾಗೇಶ್ ಹೆಗಡೆಯವರ ಅಂಕಣ, ನನ್ನ ಅಚ್ಚು ಮೆಚ್ಚಿನ ಅಂಕಣವಾಗಿದ್ದು, ಒಂದು ವಾರದ ಅಂಕಣ ಓದುವುದನ್ನು ತಪ್ಪಿದಲ್ಲಿ ಚಡಪಡಿಕೆಯ ಜೊತೆಗೆ ಒಂದು ಅಮೂಲ್ಯ ಔ್ಞನವನ್ನು ಕಳೆದುಕೊಂಡ ಅನುಭವವಾಗುತ್ಯದೆ. ಹೆಗಡೆಯವರಿಗೆ ಅನಂತ ಧನ್ಯವಾದಗಳು.
ನಾಗೇಶ್ ಹೆಗಡೆ ಎಂಬ ತುಂಬಿದ ಕೊಡಕ್ಕೆ ಶರಣು
/
_||_
ನಾಗೇಶ್ ಹೆಗಡೆ ಸರ್, ಅಭಿನಂದನೆ.
ನಾನು ನಿಮ್ಮ ಕಟ್ಟಾ ಅಭಿಮಾನಿ. ಅದಕ್ಕೆ ಪುರಾತನವಾದ್ದೊಂದು ಕಾರಣವಿದೆ.
ಪಿಯುಸಿ ವರೆಗೆ ಅಚ್ಚುಕಟ್ಟಾಗಿ ಸೈನ್ಸ್ ಓದಿಕೊಂಡ ನನಗೆ “ಇರುವುದೊಂದೆ ಭೂಮಿ” ಓದಿದಾಗಲೇ ತಿಳಿದದ್ದು-
ವಿಜ್ಞಾನವನ್ನು ಕನ್ನಡದಲ್ಲೂ ಓದಿಕೊಳ್ಳಬಹುದು ಅಂತ.!
ಆಗಿನಿಂದ ಅನೇಕ ವಿಜ್ಞಾನ ಪುಸ್ತಕಗಳನ್ನ ಇಂಗ್ಲಿಷ್ ನಲ್ಲಿ ಓದಿದ್ದರೂ, ಕನ್ನಡದಲ್ಲೇ ಸಿಕ್ಕಿದಾಗ ಕೊಂಡು,
ಓದಿಕೊಂಡು, ಮಾತೃಭಾಷೆಯ ಸ್ವಾದ ಸವಿಯುತ್ತಿದ್ದೇನೆ.
ಈ ಕನ್ನಡ ವಿಜ್ಞಾನ ಪಾಠಕ್ಕಾಗಿ ಆಭಾರಿ. ಮುಂದುವರಿಯಲಿ ತುತ್ತೂರಿ…!
ಮತ್ತೊಮ್ಮೆ ಅಭಿನಂದನೆ ಸರ್.