ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗೇಶ್ ಹೆಗ್ಡೆ ಅವರ ’ದೈವಿಕ ಕೃಷಿ’

 

– ನಾಗೇಶ್ ಹೆಗ್ಡೆ

‘ದೈವಿಕ ಕೃಷಿ’ ಗೊತ್ತಾ? ಗಣೇಶ ವಿಸಜ೯ನೆ ಮುಗಿದ ನಂತರ ಬೆಂಗಳೂರಿನ ಸಹಸ್ರಾರು ಬಂಗಾಳಿಗಳು ನಮ್ಮೂರ ಕೆರೆಗೆ ಬಂದು ವಿಶ್ವಕಮ೯ನ ಸುಂದರ ವಿಗ್ರಹಗಳನ್ನು ವಿಸಜಿ೯ಸಿ ಹೋಗುತ್ತಾರೆ.

ಮೂರು ವಾರಗಳ ನಂತರ ನಾನು ಮತ್ತು ಪತ್ನಿ ರೇಖಾ ಕೆರೆಗೆ ಇಳಿದು ಬಣ್ಣರಹಿತ ವಿಗ್ರಹಗಳನ್ನು ಮೇಲೆತ್ತಿ ಒಣಗಿಸುತ್ತೇವೆ.

ಈಗ ಅವು ಬರೀ ಹುಲ್ಲಿನ ಮೂತಿ೯ಗಳು. ಹಿತ್ತಿಲಿಗೆ ಸಾಗಿಸಿ ತಂದು ಎರೆಗೊಬ್ಬರದ ತೊಟ್ಟಿಯಲ್ಲಿ ಹಾಕಿ ಕಾಯಕಲ್ಪ ಮಾಡಿಸುತ್ತೇವೆ.

ನಮಗೆ ಉತ್ಕೃಷ್ಟ ಪುಡಿಗೊಬ್ಬರ ಸಿಗುತ್ತದೆ.

ಮುಂದಿನ ಕತೆ ಗೊತ್ತೇ ಇದೆ: ರೇಖಾ ಅದರಿಂದ ಸ್ವಾದಿಷ್ಟ ಹಣ್ಣು, ಕಾಯಿಪಲ್ಲೆ ಬೆಳೆಸುತ್ತಾಳೆ. ನಾನು ಚಪ್ಪರ ಕಟ್ಟುತ್ತೇನೆ.

ವಿಶ್ವಕಮ೯ ಎಂದರೆ ಸ್ವಗ೯ದ ಶಿಲ್ಪಿಯಂತೆ. ಸಮುದ್ರಮಥನ ಕಾಲದಲ್ಲಿ ಕಾಮಧೇನು, ಕಲ್ಪವೃಕ್ಷಗಳ ಹಾಗೆ ಈ ಶಿಲ್ಪಿಯೂ ಮೇಲೆದ್ದು ಬಂದನಂತೆ. ನಾವು ಅವನನ್ನು ಕೆರೆಯಿಂದ ಮೇಲೆತ್ತುವಾಗಲೂ ಏನೆಲ್ಲ ವಿಷವಸ್ತುಗಳು ಹೊರಬರುತ್ತವೆ. ಆಗ ನಾವು ವಿಷಕಂಠರಷ್ಟೇ ಅಲ್ಲ ಮೈಕೈಗೆಲ್ಲ ನೀಲಿ ಕೆಸರು ಅಂಟಿಸಿಕೊಂಡು ಮಡ್ ಬಾತ್ಮಾನಂದರು! ಕೆಸರಿನಿಂದ ಲಭಿಸಿದ ಗೊಬ್ಬರವನ್ನು ಹೀರಿದ ಹಾಗಲ, ಲಿಂಬೆಗಳ ಕಹಿ,ಹುಳಿಯನ್ನೆಲ್ಲ ಕಡೆಗಣಿಸಿ ಸಪೋಟ, ಆಮ್ರಪಾಲಿ, ಸೀಬೆ, ಅಂಬರಹಣ್ಣುಗಳ ರಸವನ್ನೆಲ್ಲ ಪಕ್ಷಿಗಳು, ಬಾವಲಿಗಳು ಹೀರಿದ ನಂತರ ನಮ್ಮ ಪಾಲಿಗೆ ಉಳಿದಿದ್ದು ಅಮೃತ.
 

‍ಲೇಖಕರು G

27 August, 2014

6 Comments

  1. nidhi

    This is great

  2. kusumabaale

    Wat an idea nageshji 🙂 ರೈತ ತನ್ನ ತನ್ನ ಭೂಮಿಗೆ ತಾನೇ ವಿಜ್ಞಾನಿಯಾಗಬೇಕಪ್ಪ..ಹೀಗೆ..ಏನಾದರೂ ಹೊಸದು ಕಂಡುಕೋಬೇಕು.

  3. Bhaskar Narasimhaiah

    ಕಸದಿಂದ ರಸ!

  4. narendra shivanagere

    Like it, Naagesh Sir:)

  5. Rupa Hassan

    wonderful sir!

  6. Veeresha

    Good idea sir..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading