ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಾಗರಾಜನ ತೋಟ ಬರಿ ತೋಟವಲ್ಲ…'!

ಮುರುಳಿ ಮೋಹನ್ ಕಾಟಿ

ಮೊನ್ನೆ ಕಡೂರಿನಲ್ಲಿರುವ ಗೆಳೆಯ ನಾಗರಾಜನ ತೋಟಕ್ಕೆ ಹೊಗಿದ್ದೆ…ಅದು ಬರೀ ತೋಟವಾಗಿದ್ದರೇ.. ಅಲ್ಲಿ ಕೇವಲ ತೆಂಗೋ ಅಡಿಕೆಯೋ ಬೆಳೆದು ಪಸಲು ತೆಗೆಯುತ್ತಿದ್ದರೆ, ನಾ ಹೋಗಿದ್ದರಲ್ಲಿ ಆ ಕುರಿತು ಮತ್ತೆ ನೆನಪಿಸಿಕೊಳ್ಳುವುದರ ಅಗತ್ಯವಿರುತ್ತಿರಲ್ಲಿಲ್ಲ. ಆ ತೋಟವೇ ಬಂದು ಪ್ರಯೋಗ ಶಾಲೆ. ನಾಗರಾಜ ತನ್ನ ಬದುಕನ್ನು , ತಾನು ಬೆಳೆಸುತ್ತಿರುವ ಪ್ರತಿಯೊಂದನ್ನು ದುರ್ಭಿನು ಹಾಕಿ ಮತ್ತೆ ಮತ್ತೆ ವಾಪಸ್ಸು ನೋಡುತ್ತಿದ್ದಾನೆ ಸುಸ್ಥಿರ ಹಸಿರ ಹಾದಿ ಹುಡುಕಲು. ಆತನ ನಾಯಿ, ಕಿತ್ತಳೆ ಮರ, ಹಸುಗಳು, ತೆಂಗು,ಅಡಿಕೆ.. ಜೇನು, ಮೇಕೆ, ಅಜೋಲ, ಬೆಳೆಸಲು ಸಿದ್ದವಾಗಿರುವ ಮನೆಗಳು, ಆತನ ತಮ್ಮ,ಅಮ್ಮ ಎಲ್ಲಾವು,ಎಲ್ಲರೂ ನಾಗರಾಜನ ಜೊತೆ ಸೇರಿದ್ದಾರೆ. ಆ ದಿನ ಬೆಳಗ್ಗೆ ಕೆಲಸದ ವೇಗ ನೋಡಿ ನಾನು ದಂಗಾಗಿ ಹೋದೆ. ಬಹುಶ: ಎರಡು-ಮೂರು ಗಂಟೆ ಮಾಡಬೇಕಾಗಿದ್ದ ಕೆಲಸವನ್ನು ಒಂದೇ ಗಂಟೆಯಲ್ಲಿ ಮಾಡಿ ಮುಗಿಸಿದ್ದ. ಹಸುಗಳ ಸಗಣಿ ಬಾಚಿ ಮರದ ಬುಡಗಳಿಗೆ ಹಾಗಿ , ಹಸುವಿನ ಮನೆಯನ್ನು ಸ್ವಚ್ಛಗೊಳಿಸಿ, ಹಾಲು ಕರೆದು, ಮೇಬು ಕತ್ತರಿಸಿ, ತೋಟಕ್ಕೆ ನೀರು ಹಾಯಿಸಿ… ತನ್ನ ನಾಯಿಯನ್ನು ತೊಳೆದು ತಾನು ಸ್ನಾನ ಮಾಡುವ ಹೋತ್ತಿಗೆ ನಾನು ಒಂದತ್ತು ಪೋಟೋ ಮಾತ್ರ ತೆಗೆದ್ದಿದ್ದೆ.

ನಾಗರಾಜ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ನಂತರ ನೆರವಾಗಿ ನಡೆದ್ದಿದು ತನ್ನೂರಿನ ತನ್ನ ಮೂರು ಎಕ್ಕರೆ ತೋಟದ ಮನೆಗೆ.. ಸುತ್ತಲಿನ ಯುವಜನರೆಲ್ಲ ಶಾಲಾ ಶಿಕ್ಷಣ ಪಡೆದೋ, ಪಡೆಯದೆಯೋ, ಹಳ್ಳಿಯನ್ನು ಬಿಟ್ಟು ಉದ್ಯೋಗಕ್ಕಾಗಿ ನಗರದ ಕಡೆ ಮುಖ ಮಾಡಿರುವ ಸಂದರ್ಭದಲ್ಲಿ ಇತ ತನ್ನ ಹಳ್ಳಿಗೆ ಹಿಂದುರಿಗಿದ್ದು ತನ್ನ ಓರಗೆಯವರ ಹುಬ್ಬು ಏರುವಂತೆ ಮಾಡಿತು. ನೀರಿಲ್ಲದ ನೆಲದಲ್ಲಿ ಹಸಿರ ಬೆಳೆಸುವ ಇತನ ಕನಸ್ಸಿಗೆ ಪ್ರಾರಂಭದಲ್ಲಿ ಬಹುತೇಕರು ರಾಸಯನಿಕಯಕ್ತ ನೀರನ್ನೇ ಇತನ ಮುಖದ ಮೇಲೆ ಎರಚಿದರಂತೆ ಆದರೆ ಇತನ ಸಾವಯವ ಕನಸ್ಸು ಇದರಿಂದ ಮತ್ತಷ್ಟು ಗಟ್ಟಿಗೊಂಡಿತಂತೆ. ಎರಡು ವರ್ಷದ ನಂತರ ನಾಗರಾಜ ಪೂರ್ಣ ಪ್ರಮಾಣದ ಸಾವಯವ ಕೃಷಿಕನಾಗಿ, ತನ್ನ ಹಳ್ಳಿಯ ಕೆರೆ-ಕಟ್ಟೆ ಬಳಗದ ನಾಯಕನಾಗಿ, ಸಾರಥಿ ಸಂಸ್ಥೆಯ ಕೀಯಾಶೀಲ ಬೆನ್ನೇಲಬಾಗಿ ಕೆಲಸ ಮಾಡುತ್ತಿದ್ದಾನೆ. ನಾಗರಾಜನ ಕ್ರೀಯಾಶೀಲ ಬದುಕು ನನಗೆ ಮತ್ತೆ ಮತ್ತೆ ನೆನಪಾಗುತ್ತಿದೆ. ನಗರದೊಳಗಿನ ಟ್ರಾಪಿಕ್‌ನೊಳಗೆ ಕಳೆದು ಹೋಗದಂತೆ ಎಚ್ಚರಿಸುತ್ತಿದೆ. ತ್ಯಾಂಕ್ಯು ನಾಗ್‌ರಾಜ್. ಇಂಥಹ ನಾಗರಾಜ್ ನ ತೋಟದಲ್ಲಿಯ ಕೆಲವು ಛಾಯಾ ಚಿತ್ರಗಳು ಅವಧಿ ಆಪ್ತರಿಗೆ…

ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:

‍ಲೇಖಕರು avadhi

18 May, 2013

4 Comments

  1. s.gangadharaiah

    ಕಡೂರಿನ ಹತ್ತಿರ ಯಾವ ಊರು ತಿಳಿಸಿ.

  2. ಸತೀಶ್ ಮಾಗೋಡ್

    ಇಂಟರೆಸ್ಟಿಂಗ್. ಫೋಟೋಗಳೂ ಚೆನ್ನಾಗಿವೆ. ಐಫೋನು,ಲ್ಯಾಪ್ಟಾಪು, ಕರೀಷ್ಮಾ ಎನ್ನುತ್ತ ಸುತ್ತಾಡುವ ಯುವಕರ ಮಧ್ಯೆ ನಾಗರಾಜ್ ನಿಜಕ್ಕೂ ಭಿನ್ನ. ಅವರಿಗೆ ಕೃಷಿಯಲ್ಲಿ ಈ ಪರಿಯ ಆಸಕ್ತಿ ಮೂಡಲು ಪ್ರೇರಣೆಯೇನು, ಸಾಗಿ ಬಂದ ದಾರಿಯೇನು, ಲಾಭ-ನಷ್ಟಗಳೇನು ಎಂಬುದರ ಬಗ್ಗೆ ಚೂರೇ ಚೂರು ಮಾಹಿತಿಯಿದ್ದರೆ ಇನ್ನೂ ಚೆನ್ನಾಗಿತ್ತೆನ್ನಿ.

    • Ramesh cheemachanahalli

      ನಾಗರಾಜುವಿನ ಬಗ್ಗೆ ಮತ್ತಷ್ಟು ಮಾಹಿತಿ ಬೇಕಿದ್ರೆ ಫೊನ್ ಮಾಡ್ಬಹುದು ನಂ.9742913898.ಇ ಮೇಲ್-sarathi.kaduru@gmail.com,

  3. Ramesh cheemachanahalli

    ನಾಗರಾಜನ ಊರು ಚಿಕಿಂಗಳ, ಕಡೂರಿನಿಂದ ಎಮ್ಮೆದೊಡ್ಡಿ ರಸ್ತೆಯಲ್ಲಿ 4 ಕಿಮಿ ಆಗುತ್ತದೆ, ಅದೇ ದಾರಿಯಲ್ಲಿ ಮುಂದೆ ಇನ್ನು 6 ಕಿಮಿ ಹೊದರೆ ಮದಗದ ಕೆರೆ ಸಿಗುತ್ತದೆ. ಮತೊಂದು ವಿಷಯ ಈ ಹಿಂದೆಯು ನಾಗರಾಜು ನಿಮಗೆ ಗೊತ್ತು, ಅದು ವಿಶ್ವಮಾನವ ಸಂದೇಶದ ಬೈಕ್ ರ್ಯಾಲಿಯ ಸಮಯದಲ್ಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading