ನೆಶೆ ಏರಿದೆ ಮಣ್ಣಿಗೆ
ಆನಂದ ಭೋವಿ
ನೆಶೆ ಏರಿ ಮಣ್ಣಿಗೆ
ಅನ್ನ ಹಳಸಿದೆ
ನಂಜೇರಿ ನೆಲಕೆ
ಬೀಜ ಕೊಳತಿದೆ
ಹುಲ್ಲು ಗರಿಕೆ
ಚಾಪೆ ಮುಳ್ಳಾಗಿದೆ
ಅಂಗಾಲ ಕೊರೆದು
ರಕ್ತ ಮಾರುತಿದೆ
ಜೋಳ ರಾಗಿ ಭತ್ತ
ಪಡು ಗಾಳಿಗೆ ಹಾರಿದೆ
ಪಶ್ಚಿಮದ ಮುತ್ತಿಗೆ
ಕೆಂಪಾದ ಕೂಸು ಹುಟ್ಟಿದೆ
ಅಕ್ಕಿ ಚೆಲ್ಲಿ ಚೆಲ್ಲಾಪಿಲ್ಲಿ
ಹಕ್ಕಿ ನೆಕ್ಕಿ ಸತ್ತಿದೆ
ಬೀಜ ಮೊಳೆತ ನೆಲ
ಗರಿಗರಿ ನೋಟ ತೂರಿದೆ
ಮದವೇರಿ ಧೂಳು
ತೂಕಡಿಸಿ ಬಿದ್ದಿದೆ
ಬಸಿದ ಬೆವರ ಹನಿಗೆ
ಹಸಿದ ಹೊಟ್ಟೆ ಊಬ್ಬಿದೆ
ದಿನಕೊಬ್ಬ ಹೊಸ
ಪುರುಷನ ಪೌರುಷ
ಹಡೆದ ಗರ್ಭ ನಾಚಿ
ಬಂಜೆಯಾಗಿದೆ
ರೆಂಟೆ ಕುಂಟೆಗಳೆಲ್ಲಾ
ಹುದಲಲ್ಲಿ ಸಿಕ್ಕು ಕೊಳೆತು
ಹರಗಿ ಹದ ಮಡಿದರೂ
ಇಳಿಯುತ್ತಿಲ್ಲ ನೆಶೆ.
nice poem..
Good one