ಈಗಿನ ಸರ್ಕಾರ ಜನವರಿ 26 ನ್ನು ನಗಣ್ಯವಾಗಿಸಲು, ಜನಮಾನಸದಿಂದ ಅಂಬೇಡ್ಕರ್ ಅವರನ್ನು ಮರೆ ಮಾಡಲು ಯತ್ನಿಸುತ್ತಿದೆಯೇ?.
ಈ ಪ್ರಶ್ನೆ ಈಗ ಎದ್ದಿದೆ . ಪ್ರಧಾನಿ ನರೇಂದ್ರ ಮೋದಿ ನವೆಂಬರ್ 26 ನ್ನು ಸಂವಿಧಾನ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದ್ದಾರೆ.
ಇದು ಸರಿಯೇ? ಏನಾದರೂ ಹುನ್ನಾರವಿದೆಯೇ?
ಓದುಗರ ಪತ್ರವೊಂದು ಅದನ್ನು ಅವಲೋಕಿಸಲು ಯತ್ನಿಸುತ್ತಿದೆ
ಇರಲಿ, ನಿಮ್ಮ ಅಭಿಪ್ರಾಯ ಏನು ಶೇರ್ ಮಾಡಿ. ಚರ್ಚೆಗೇ ಮೀಸಲಾದ ಈ ‘ಜುಗಾರಿ ಕ್ರಾಸ್’ ನಲ್ಲಿ

‘ನವೆಂಬರ್ 26’ ಸಂವಿಧಾನ ದಿನಾಚರಣೆ ಸರಿಯೇ?
ವಿಕಾಸ್ ಆರ್ ಮೌರ್ಯ, ಬಳ್ಳಾರಿ
ದಲಿತ ಚಳವಳಿ ಮತ್ತು ಬಹುಜನ ಚಳವಳಿಗಳು ಜನವರಿ ೨೬ರನ್ನು ‘ಸಂವಿಧಾನ ದಿನಾಚರಣೆ’ ಎಂದು ಆಚರಿಸುತ್ತಾ ಬರುತ್ತಿರುವುದು ಇತಿಹಾಸ. ಭಾರತ ಸರಕಾರ ಅಂದಿನಿಂದಲೂ ಸಂವಿಧಾನ ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವದ ಹೆಸರಿನಲ್ಲಿ ಆಚರಿಸಿ ರಾಷ್ಟ್ರೀಯ ಹಬ್ಬವನ್ನಾಗಿಸಿದೆ. ಆ ರಾಷ್ಟ್ರೀಯ ಹಬ್ಬವನ್ನೇ ದಲಿತ, ಬಹುಜನ ಚಳವಳಿಗಳು ಸಂವಿಧಾನದ ದಿನಾಚರಣೆಯನ್ನಾಗಿ ಆಚರಿಸುತ್ತ ಬರುತ್ತಿವೆ.
ಆದರೆ ಈಗಿನ ಕೇಂದ್ರ ಸರಕಾರ ನವೆಂಬರ್ ೨೬ರನ್ನು ಸಂವಿಧಾನ ದಿನಾಚರಣೆಯಾಗಿಸಲು ಹೊರಟಿರುವುದು ಇತಿಹಾಸವನ್ನು ತಿರುಚುವ ಹುನ್ನಾರವಾಗಿದೆ. ನವೆಂಬರ್ ೨೬ ಸಂವಿಧಾನ ಅಂಗೀಕೃತವಾದ ದಿನವಾದರೂ ಪ್ರಜಾಪ್ರಭುತ್ವದಡಿಯಲ್ಲಿ ಸಂಸತ್ತು ಜಾರಿಗೆ ತಂದ ದಿನಕ್ಕೆ ಹೆಚ್ಚು ಬೆಲೆ ಮತ್ತು ಅದೇ ಅಧಿಕೃತ.
ಆದ್ದರಿಂದ ನವೆಂಬರ್ ೨೬ ರಂದು ಸಂವಿಧಾನ ದಿನಾಚರಣೆ ಇತಿಹಾಸಕ್ಕೆ ಅಪಚಾರ ವೆಸಗಿದಂತೆ. ದಲಿತ, ಬಹುಜನ ಚಳವಳಿಯ ಆಚರಣೆಗಲ್ಲದೆ ಸಂವಿಧಾನ ದಿನಾಚರಣೆಗೆ ದೊರಕಿರುವ ರಾಷ್ಟ್ರೀಯ ಹಬ್ಬವೆಂಬ ಶ್ರೇಷ್ಠತೆಯನ್ನು ಅಳಿಸಿಹಾಕುವ ಕ್ರಮವಾಗಿದೆ.
ವೋಟ್ ಬ್ಯಾಂಕ್ ರಾಜಕಾರಣ ಸಂವಿಧಾನ ಜಾರಿಗೆ ಬಂದ ದಿನದ ಘನತೆಯನ್ನು ಕಡಿಮೆ ಮಾಡದಿರಲಿ. ಪ್ರಧಾನಿಗಳಿಗೆ ನವೆಂಬರ್ ೨೬ನ್ನು ಘನತೆಯ ದಿನವಾಗಿಸಬೇಕೆಂಬ ಬದ್ಧತೆ ಇದ್ದರೆ ಆ ದಿನವನ್ನು ಸಂವಿಧಾನ ಅಂಗೀಕೃತ ದಿನವನ್ನಾಗಿ ಆಚರಿಸಲಿ.
–





0 Comments