
ಬೆಳಿಗ್ಗೆ ಸಮಯ ೮-೩೦. ಅವರು ವರಾಂಡದಲ್ಲಿ ದಿನಪತ್ರಿಕೆ ಓದುತ್ತಾ ಕುಳಿತಿದ್ದರು. “ಸರ್, ನ್ಯೂಸ್ ಪೇಪರ್ ಬಿಲ್” ಅಂದೆ. ಒಮ್ಮೆ ಕತ್ತೆತ್ತಿ ನೋಡಿ, ಎಷ್ಟಾಯ್ತು ಅಂದರು. ಹೇಳಿದೆ. ಜೇಬಿಗೆ ಕೈ ಹಾಕಿದರು. ಅವರು ನನ್ನ ಅತ್ಯಂತ ಆತ್ಮೀಯವಾದ ಗ್ರಾಹಕ. ಅವರಿಗೆ ಹದಿಮೂರು ವರ್ಷಗಳಿಂದ ನನ್ನ ಕಡೆಯಿಂದಲೇ ದಿನಪತ್ರಿಕೆ ತಲುಪುತ್ತಿದೆ. ನನ್ನ ವೆಂಡರ್ ಕಣ್ಣು ಪುಸ್ತಕವನ್ನು ಓದಿದ್ದಲ್ಲದೇ ನನ್ನೆಲ್ಲಾ ಚಟುವಟಿಕೆಗಳನ್ನು ಅರಿತವರು. ಜೇಬಿನಿಂದ ಒಂದು ಸಾವಿರದ ನೋಟನ್ನು ತೆಗೆದುಕೊಟ್ಟರು.
“ಸಾರ್ ಚಿಲ್ಲರೆ ಇಲ್ಲವಲ್ಲ”
ನನ್ನ ಕಡೆಗೊಮ್ಮೆ ವ್ಯಂಗ್ಯವಾಗಿ ನೋಡಿ,
“ನಿನ್ನ ಬಳಿ ಸಾವಿರ ರೂಪಾಯಿಗೆ ಚಿಲ್ಲರೆ ಇಲ್ವಾ, ಬೆಕ್ಕಿಗೆ ಜ್ವರ ಬರೋ ಮಾತಾಡಬೇಡ”
ಅವರ ಮಾತಿಗೆ ಮರುಉತ್ತರ ಹೇಳದೆ ಚಿಲ್ಲರೆ ಎಣಿಸಿಕೊಟ್ಟು,
“ಸರ್ ಬೆಕ್ಕಿಗೆ ನಿಜಕ್ಕೂ ಜ್ವರ ಬರುತ್ತಾ” ಕೇಳಿದೆ.
ನನ್ನನ್ನೊಮ್ಮೆ ನೋಡಿ ನಕ್ಕು ಹಣ ಎಣಿಸಿಕೊಂಡರು.
“ಪೋಟೊ ತೆಗಿತೀಯಾ, ಪತ್ರಿಕೆಗೆ ಲೇಖನ ಬರೀತೀಯ, ಬ್ಲಾಗ್ ಬರೀತೀಯಾ, ಪುಸ್ತಕ ಬರೀತೀಯಾ, ಇದನ್ನು ಕಂಡುಹಿಡಿಯಕಾಗೊಲ್ವಾ?” ಅಂದರು.
ನನಗೂ ಹೌದಲ್ವಾ ಅನ್ನಿಸಿತು. ಅವರಿಗೆ ಥ್ಯಾಂಕ್ಸ್ ಹೇಳಿ ಅ ಮನೆಯಿಂದ ಹೊರಬರುವ ಹೊತ್ತಿಗೆ ನನ್ನ ತಲೆಯಲ್ಲಿ ಹೊಸ ಹುಳುವೊಂದು ಹೊಕ್ಕಿತ್ತು.
ಪೂರ್ಣ ಓದಿಗೆ: ಛಾಯಾ ಕನ್ನಡಿ
ನಮ್ಮ ಶಿವೂ ಹಾಗೂ ಬೆಕ್ಕು
ನಿಮಗೆ ಇವೂ ಇಷ್ಟವಾಗಬಹುದು…





0 Comments