‘ನಮ್ಮ ಶಾಮಣ್ಣ’ ಎಂಬ ಪುಸ್ತಕ

‘ನಮ್ಮ ಶಾಮಣ್ಣ’  ಅಪರೂಪದ ಪುಸ್ತಕ.

l c sumitra

ಡಾ ಎಲ್ ಸಿ ಸುಮಿತ್ರಾ, ತೀರ್ಥಹಳ್ಳಿ

namma shamannaರೈತ ಚಳುವಳಿ ಯಲ್ಲಿ ಸಕ್ರಿಯರಾಗಿರುವ , ಸಾಮಾಜಿಕ ಕಾಳಜಿಯ ಕೃಷಿಕ ಕಡಿದಾಳು ಶಾಮಣ್ಣ ನವರ ಅಭಿನಂದನಾ ಪುಸ್ತಕ ’ ನಮ್ಮ ಶಾಮಣ್ಣ’.

ಪುಸ್ತಕದ ಹೆಸರಿನಲ್ಲೇ ಅಭಿಮಾನವಿದೆ. ಮಾನವೀಯ ಅಂತಕರಣದ , ಸರಳ ಸ್ವಭಾವದ ನಿಗರ್ವಿ ಶಾಮಣ್ಣನವರನ್ನು ಕುರಿತು ಅವರ ಸ್ನೇಹಿತರು, ಶಿಷ್ಯರು, ಕುಟುಂಬದವರೂ ಇಲ್ಲಿ ಬರೆದಿದ್ದಾರೆ. ಹಿರಿಯರಾದ ಪ್ರಭುಶಂಕರ ಅವರಿಂದ ಆರಂಭವಾಗಿ ಕಿರಿಯರಾದ ಅಕ್ಷತಾ ಹುಂಚದಕಟ್ಟೆವರೆಗೆ ಇಲ್ಲಿ ಲೇಖನಗಳಿವೆ.

ಮೈಸೂರಿನಲ್ಲಿ ಸಮಾಜಸಾಸ್ತ್ರದ ಎಂ ಎ ಪದವಿಯ ನಂತರ ಕೆಲಕಾಲ ಅಧ್ಯಾಪಕರಾಗಿದ್ದು  ಆಮೇಲೆ ಭಗವತೀಕೆರೆಯಲ್ಲಿ ಕೃಷಿಕರಾಗಿ ನೆಲೆಸಿರುವ ಶಾಮಣ್ಣನವರ ಬದುಕು ಮತ್ತು ವ್ಯಕ್ತಿತ್ವ ಕುರಿತು ಇಲ್ಲಿನ ಲೇಖನಗಳಿವೆ. ಅವರ ರೈತ ಸಂಗಾತಿಗಳು ರೈತ ಚಳುವಳಿಯಲ್ಲಿನ ಶಾಮಣ್ನನವರ ಪಾತ್ರ ಕುರಿತು ಬರೆದಿದ್ದಾರೆ.

ಇವತ್ತಿನ ಸಮಾಜಕ್ಕೆ, ಯುವಜನಾಂಗಕ್ಕೆ ಶಾಮಣ್ನನವರಂತಹ ಸರಳಜೀವಿ, ಆದರ್ಶವಾದಿ, ಗ್ರಾಮವಾಸಿಯ ಕುರಿತು ಅರಿವು ಮೂಡಿಸುವ ಕೆಲಸವನ್ನು ಈ ಪುಸ್ತಕ ಮಾಡುತ್ತದೆ. ಮೊಬೈಲ್ ಫೋನನ್ನೂ ಉಪಯೋಗಿಸದ  ಶಾಮಣ್ಣನವರ ಆದರ್ಶ ವ್ಯಕ್ತಿತ್ವದ ಹಲವು ಮಗ್ಗುಲುಗಳನ್ನು ಈ ಪುಸ್ತಕ ತೆರೆದಿಟ್ಟಿದೆ.

ಡಿ ಎಸ್ ನಾಗಭೂಷಣ, ಎಂ.ಬಿ. ನಟರಾಜ್, ಬಿ ಚಂದ್ರೇಗೌಡ ಸಂಪಾದಿಸಿರುವ ೪೨೨ ಪುಟಗಳ ಈ ಪುಸ್ತಕ ತೇಜಸ್ವಿ ಮತ್ತು ಪಿ ಲಂಕೇಶ್ ಅವರ ಲೇಖನಗಳನ್ನೂ [ಈಗಾಗಲೆ ಪ್ರಕಟಿತ] ಒಳಗೊಂಡಂತೆ ೭೪ ಲೇಖನಗಳನ್ನು ಹೊಂದಿದೆ. ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. 

‍ಲೇಖಕರು admin

April 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: