ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮೂರೈಕ್ಳು ಸಿ.ಇ.ಟಿ ಬರೆದದ್ದು

ಗೊರೂರು ಶಿವೇಶ್

ಎರಡು ವರ್ಷಗಳ ಹಿಂದೆ ನಮ್ಮೂರಿನ ಜೂನಿಯರ್ ಕಾಲೇಜಿಗೆ ವಿಜ್ಞಾನದ ಕೋರ್ಸನ್ನು ತಂದಾಗ ಆ ಕೋರ್ಸ್ ಉಳಿಸಿಕೊಳ್ಳಲು ಬಲವಂತವಾಗಿ ಸೇರ್ಪಡೆಗೊಂಡವರೆ ನಾಗ, ಗುರು, ಪ್ರಕಾಶ ಮತ್ತು ಮಂಜ. ಎಲ್ಲ ವಿಷಯಗಳಿಗೂ ಉಪನ್ಯಾಸಕರು ನೇಮಕವಾಗಿ ಆರುಜನ ಉಪನ್ಯಾಸಕರಿಗೆ ಇವರೇ ನಾಲ್ಕು ಜನ ಶಿಷ್ಯಂದಿರು.
ಇತ್ತ ಅಧ್ಯಾಪಕರು ಹೇಗಾದರೂ ಮಾಡಿ ಫಲಿತಾಂಶವನ್ನು ತರಬೇಕೆಂದು ತಮಗೆ ತಿಳಿದಿದ್ದೆಲ್ಲವನ್ನು ಅರೆದುಯ್ಯುತ್ತಿದ್ದರೆ, ಅತ್ತ ತಾವು ಎಷ್ಟು ಬೇಕೋ ಅಷ್ಟನ್ನು ಸ್ವೀಕರಿಸುವವರು ಈ ಶಿಷ್ಯಂದಿರು. ಇಂಥವರು ಮೊನ್ನೆ ಸಿ.ಇ.ಟಿ ಪರೀಕ್ಷೆ ಬರೆದು ಬರುವಾಗ ಎದುರಾದರು.
‘ಏನ್ರಪ್ಪ ಹೇಗೆ ಆಯ್ತು ಪರೀಕ್ಷೆ’ ? ಎಂದೆ.
‘ಏನೋ ಪರ್ವಾಗಿಲ್ಲ ಸಾರ್’ ಎಂದರು ಒಕ್ಕೊರಲಿನಿಂದ.
ಅದಿರ್ಲಿ ಮೇನ್ ಎಕ್ಸಾಂ ಹೇಗೆ ಬರೆದಿದ್ದೀರಿ’ ಎಂದೆ.
‘ಅದು ಪರ್ವಾಗಿಲ್ಲ ಸಾರ್ ಈ ಬಾರಿ ಪ್ರಾಕ್ಟಿಕಲ್ಸ್ನಲ್ಲಿ ಮೂವತ್ತು ಅಂಕ ಇರೋದ್ರಿಂದ ಒಳ್ಳೆ ಮಾಕ್ಸರ್್ ಬರಬಹುದು’ ಅಂದ.
‘ಅಂದ್ರೆ’ ಅರ್ಥವಾಗದೆ ಪ್ರಶ್ನಿಸಿದೆ.

‘ಈ ಬಾರಿ ನಮ್ಮದೇ ಫಸ್ಟ್ ಬ್ಯಾಚ್ ಆದ್ದರಿಂದ ನಮ್ಮ ಲಕ್ಚರರ್ಸ್ ಎಕ್ಸಟರ್ನಲ್ ಎಕ್ಸಾಮಿನರ್ಗೆ ಹೇಳಿ ಒಳ್ಳೆ ಅಂಕ ಕೊಟ್ಟಿರೊದ್ರಿಂದ ಅದು ಮೂವಕ್ಕೆ ಇಪ್ಪತ್ತೈದಕ್ಕೆ ಮೋಸ ಇಲ್ಲ. ಇನ್ನೂ ಥಿಯರಿಯಲ್ಲಿ ಎಪ್ಪತ್ತಕ್ಕೆ ಇಪ್ಪತ್ತೈದು ತೆಗೆದ್ರೂ ಸೆಕೆಂಡ್ ಕ್ಲಾಸ್ಗೆ ಮೋಸವಿಲ್ಲ’ ಎಂದ.
‘ಅದಿರ್ಲಿ ಸಿ.ಇ.ಟಿ ಹೇಗೆ ಬರೆದಿದ್ದಿರೋ? ಎಂತೆೆಂಥ ಘಟಾನುಘಟಿಗಳು ಇದರಲ್ಲಿ ಪಲ್ಟಿ ಹೊಡಿತಾರೆ’ ಎಂದೆ ನಾನು. ‘ಅದಕ್ಕೆಲ್ಲ ಇದು ಇರಬೇಕು ಸಾರ್’ ತನ್ನ ತಲೆಯನ್ನು ತೋರಿಸುತ್ತಾ ನುಡಿದ ಮಂಜ.
‘ಅದೆಂತದಪ್ಪ ಆ ಟ್ರಿಕ್ಸ್. ನಮ್ಗೂ ಹೇಳಪ್ಪ’ ಎಂದೆ ನಾನು.
ಎಲ್ರೂ ಸಿ.ಇ.ಟಿ ಟ್ಯೂಷನ್, ಕ್ರಾಷ್ ಕೋಸರ್್ ಅಂಥ ಮುಕ್ಕುರಿತ್ತಿದ್ರು. ನಾವು ಆರಾಮಗಿದ್ದೀವಿ. ಸಿ.ಇ.ಟಿಲಿ ಪಿ.ಸಿ.ಎಂ.ಬಿ ನಾಲ್ಕು ಪೇಪರ್ರಿಗು ಕ್ರಮವಾಗಿ ಎ.ಬಿ.ಸಿ.ಡಿ ಉತ್ತರ ಅಂದ್ರೆ, ಭೌತಶಾಸ್ತ್ರದಲ್ಲಿ ಎಲ್ಲಾ ಪ್ರಶ್ನೆಗಳಿಗೆ ‘ಎ’ ಗೆ, ಕೆಮಿಸ್ಟ್ರಿಗೆ ‘ಬಿ’ಗೆ, ಮ್ಯಾಥ್ಸ್ಗೆ ಸಿ ಮತ್ತು ಬಯೋಲಜಿಗೆ ‘ಡಿ’ ಉತ್ತರಕ್ಕೆ ರೌಂಡ್ ಸುತ್ತಿದ್ದೇನೆ. ಎಲ್ಲದ್ರಲ್ಲೂ ಆವರೇಜು ಹದಿನೈದು ಮಾಕ್ಸರ್್ಗಂತೂ ಮೋಸ ಇಲ್ಲ. ಅದೃಷ್ಟ ಇದ್ರೆ ಜಾಸ್ತೀನೂ ಸಿಗ್ಬೋದು’ ಎಂದ.
‘ನೀನಪ್ಪ ನಾಗ’? ಎಂದೆ.
ನಮ್ಮವ್ವ ಮನೆದೇವ್ರು ಪೂಜೆ ಮಾಡಿಸಿ ಕೈಗೆ ದಾರ ಕಟ್ಟಿದ್ರು ಕಣ್ಮುಚ್ಚಿ ಮನೆದೇವ್ರು ಧ್ಯಾನ ಮಾಡಿ ಪೆನ್ನು ಯಾವುದನ್ನು ತಾಕುತ್ತೊ ಅದಕ್ಕೆ ಗುರುತು ಹಾಕಿ ಬಂದಿದ್ದೇನೆ. ಎಂದ.
ಸಾರ್, ನಾನಂತು ಮೊದಲ 15ನೇ ಪ್ರಶ್ನೆಗೆ ‘ಎ’ ನಂತರ 15 ಪ್ರಶ್ನೆಗೆ ‘ಬಿ’ ಮುಂದಿನ 15 ಪ್ರಶ್ನೆಗಳಿಗೆ ‘ಸಿ’ ಕೊನೆ ಹದಿನೈದು ಪ್ರಶ್ನೆಗಳಿಗೆ ‘ಡಿ’ ಅಂಥ ಗುರುತು ಹಾಕಿದ್ದೀನಿ. ನೋಡ್ಬೇಕು ಎಷ್ಟು ಸಕ್ಸಸ್ ಆಗುತ್ತೆ ಅಂಥ’ ಅಂದ ಪ್ರಕಾಶ.
‘ನಿಂದೇನು ಸಮಾಚಾರ ಗುರು’? ಎಂದೆ. ಇದ್ದವರಲ್ಲಿ ಅವನು ಕೊಂಚ ಬುದ್ಧಿವಂತ ಹಾಗೂ ಕಷ್ಟಪಟ್ಟು ಓದಿದವ.
‘ನಾನಂತು ಸರಿಯಾಗಿ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆದೆ ನಂತರ ಕೆಲವು ಪ್ರಶ್ನೆಗಳಿಗೆ ಇದ್ದ ಉತ್ತರದಲ್ಲಿ ಮೇಲಿನ ಮೂರು ಉತ್ತರಗಳು ಸರಿ ಎಂಬ ಉತ್ತರಕ್ಕೆ ಟಿಕ್ ಹಾಕಿದೀನಿ. ಏಕೆಂದರೆ ಆ ಮೂರು ಉತ್ತರಗಳು ಸರಿ ಇದ್ದರೆ ನಾಲ್ಕನೇ ಉತ್ತರ ಖಂಡಿತ ಸರಿ ಇರುತ್ತೆ. ಕೊನೆಗೆ ನೋಡ್ದೆ. ಸುಮಾರು ಮೂವತ್ತು ಪ್ರಶ್ನೆಗಳಿಗೆ ಸರಿ ಉತ್ತರ ಇತ್ತು. ಅದರಲ್ಲಿ ಯಾವ ಉತ್ತರಕ್ಕೆ ಕಡಿಮೆ ಟಿಕ್ ಹಾಕಿದ್ದೆ ಎಂದು ನೋಡಿದೆ. ಉದಾಹರಣೆಗೆ ಮ್ಯಾಥ್ಸ್ನಲ್ಲಿ ‘ಸಿ’ ಉತ್ತರಕ್ಕೆ ಕಡಿಮೆ ಟಿಕ್ ಹಾಕಿದ್ದೆ. ಸರಿ ಅಂತ ಉಳಿದ ಮೂವತ್ತು ಉತ್ತರಗಳಿಗೆ ‘ಸಿ’ ಅಂಥ ಗುತರ್ು ಹಾಕ್ದೆ. ಅದೇ ರೀತಿ ಇತರೆ ಪೇಪರ್ಗೂ ಹಾಕಿದ್ದೀನಿ. ಆ ರೀತಿ ಕನಿಷ್ಠ ಏಳೆಂಟು ಅಂಕಗಳಂತೂ ಸಿಕ್ಕೆ ಸಿಗುತ್ತೆ’ ಎಂದ ಗುರು.
‘ನಿಜ. ಚುನಾವಣೆ ಗೆಲ್ಲಲು ರಾಜಕಾರಣಿಗಳು ನೂರೆಂಟು ಪ್ಲಾನ್ಗಳನ್ನು ಮಾಡುತ್ತಿರುವಾಗ ಸಿ.ಇ.ಟಿ ಪಾಸಾಗಲು ಇಂಥ ಹತ್ತಾರು ಟ್ರಿಕ್ಸ್ಗಳನ್ನು ಬಳಸುವುದು ಸಹಜ’ ಎಂದೆ ನಾನು.
 
 

‍ಲೇಖಕರು G

14 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading