-ಸರಸ್ವತಿ ಕೆ ನಾಗರಾಜ್
ಆತ್ಮವಿಶ್ವಾಸ
ನಾನು ಯಾರು ಎಂಬ ಪ್ರಶ್ನೆಗೆ
ಇನ್ನೊಬ್ಬರ ಉತ್ತರ ಬೇಕಿಲ್ಲ,
ನನ್ನ ಹೆಜ್ಜೆಗಳ ಧ್ವನಿಯೇ
ನನ್ನ ಅಸ್ತಿತ್ವದ ಸಾಕ್ಷಿ.
ಬೀಳುವೆನು, ಎದ್ದುಕೊಳ್ಳುವೆನು
ಅಲ್ಲಿ ನಿಲ್ಲುವೆನು ಎಂದೇ ಇಲ್ಲ,
ಸೋಲಿನ ನೆರಳಲ್ಲೂ
ನನ್ನ ನಂಬಿಕೆಯ ಬೆಳಕು ಜೀವಂತ.
ಕಣ್ಣುಗಳಲ್ಲಿ ಕನಸುಗಳ ಬೆಂಕಿ,
ಮನಸ್ಸಿನಲ್ಲಿ ಗುರಿಯ ಧೈರ್ಯ,
ನನ್ನ ಮೇಲೆ ನಾನು ನಂಬಿಕೆ ಇಟ್ಟ ದಿನದಿಂದ
ಭಯಗಳಿಗೆ ವಿದಾಯ ಹೇಳಿದೆ.
ನಾನು ನಡೆಯುವ ದಾರಿ ಕಠಿಣವಾದರೂ
ನನ್ನ ಮನಸ್ಸು ಗಟ್ಟಿಯಾಗಿದೆ,
ಏಕೆಂದರೆ ಆತ್ಮವಿಶ್ವಾಸವೇ
ನನ್ನ ಗೆಲುವಿನ ಮೊದಲ ಹೆಜ್ಜೆ.






0 Comments