ಕಾಡುವ ಕವನ
ರವಿವರ್ಮ ಹೊಸಪೇಟೆ
ಸದಾ ಕುಡಿದಿರು ….
ಬೋದಿಲೇರ್
ಅನುವಾದ ಪಿ. ಲಂಕೇಶ್
ಮನುಸ್ಯ ಸದಾ ಕುಡಿದ ಸ್ತಿತಿಯಲ್ಲ್ಲಿರಬೇಕು …ಅದೊಂದೇ…ಒಂದೇ ಪರಿಹಾರ ಸಮಸ್ಯೆಗೆ;
ಕಾಲದ ಅಸಹ್ಯ ಭಾರ ನಿನ್ನ ಭುಜಗಳನ್ನು ಮುರಿಯದಂತೆ, ನಿನ್ನ ತಲೆಯನ್ನು ತಗ್ಗಿಸದಂತೆ
ನೋಡಿಕೊಲ್ಲುವುದಕ್ಕಾಗಿ, ಬಿಡದೆ ಸುಮ್ಮನೆ ಕುಡಿಯುತ್ತಿರು .
ಏನನ್ನು ಕುಡಿಯುವುದು ? ವೈನ್ ,ಕಾವ್ಯ ಋಜುತ್ವ,ಯಾವುದನ್ನಾದರೂ …. ಕುಡಿಯಬೇಕು ಮಾತ್ರ.
ಕುಡಿದು ಎಚ್ಚರಗೊಂಡಾಗ, ಅರಮನೆಯಮೆಟ್ಟಿಲಮೇಲೆ, ಹೊಂಡದ ಹಸಿರು ದಡದ ಮೇಲೆ, ದರಿದ್ರ
ಒಬ್ಬಂಟಿತನದ ನಿನ್ನ ರೂಮಲ್ಲಿ, ನಿನಗೆ ಎಚ್ಚರವಾದಾಗ ಕೇಳು—ಕೇಳು, ಗಾಳಿಯನ್ನ, ಅಲೆಗಳನ್ನ,
ನಕ್ಷತ್ರಗಳನ್ನ, ಹಕ್ಕಿಗಳನ್ನ, ಗಡಿಯಾರಗಳನ್ನ, ಸದ್ದುಮಾಡುವ, ಕೂಗಾಡುವ, ನಡೆದಾಡುವ, ಹಾಡುವ ಎಲ್ಲದನ್ನು ಕೇಳು
ಆಗ ವೇಳೆ ಎಸ್ಟೆಂದು ಕೇಳು ; ಗಾಳಿ, ಅಲೆ ನಕ್ಷತ್ರ, ಹಕ್ಕಿ, ಗಡಿಯಾರ ಇವೆಲ್ಲ ಆಗ ಉತ್ತರಿಸುತ್ತವೆ ;
“ಇದು ಕುಡಿಯುವ ವೇಳೆ ಕಾಲಕ್ಕೆ ಅನ್ಯಾಯವಾಗಿ ಹುತಾತ್ಮ ನಾಗುವ ಬದಲು .
ಕುಡಿ, ಬಿಡದೆ ಕುಡೀ ವೈನ್, ಕಾವ್ಯ, ಋಜುತ್ವ ನಿನಗೆ ಇಷ್ಟ ಬಂದದ್ದನ್ನು ಕುಡಿ ”
ರವಿವಾರ ಎಲ್ಲ ಪುಸ್ತಿಕೆ ಜೋಡಿಸಲು ಕೂತಾಗ ಲಂಕೇಶ್ ಅವರು ಅನುವಾದಿಸಿದ ಪಾಪದ ಹೂವುಗಳು ನೆಲಮನೆ ಪ್ರಕಾಶನ ಮೈಸೂರು
ಪ್ರಕಟಿಸಿದ ಪುಸ್ತಿಕೆ ಸಿಕ್ಕಿತು ಎಂದೋ ಓದಿದ್ದ ಪುಸ್ತಿಕೆ ಮತ್ತೊಮ್ಮೆ ಓದಿದೆ .ಲಂಕೇಶ್ ಅವರು ಆ ಪುಸ್ತಿಕೆಯ ಮುನ್ನುಡಿ ಹಲವು ಸಾಲುಗಳು ಹೀಗಿವೆ..
ಬೋದಿಲೇರ್ ಯಾಕೆ ?
ಜಡಗೊಂಡ ಓದುಗರನ್ನು ತನ್ನ ಆಭಾವದಿಂದ ಬೆಚ್ಚಿಬ್ಲಿಸದೆ ಇರುವ ಲೇಖಕ ಯೆನ್ತದನ್ನು ಮಾಡಲಾರ ಎಂಬುದು ಬೋದಿಲೇರನ ನಂಬಿಕೆ
ಕೊನೆಪಕ್ಷ ಬೋದಿಲೇರನ ನರಕದಿಂದಲಾದರು ನಮ್ಮ ಪಾತಕರು ಎಚ್ಚರಗೊಳ್ಳಲಿ ಎಂಬುದು ನನ್ನ ಆಶೆ .
ಯಾವ ರೀತಿಯ ಎಚ್ಚರ? ಬದುಕಿನ ಶೂನ್ಯತೆಗೆ ,ಕ್ರೌರ್ಯಕ್ಕೆ ಮನಬಿಚ್ಚುವುದು ಅಷ್ಟು ಕಷ್ಟವಲ್ಲ; ಆದರೆ ಮನಬಿಚ್ಚಿ ಪಾಪದ ಆಳಕ್ಕೆ ಇಳಿದೂ,
ನೈತಿಕ ಎಚ್ಚರ ಉಳಿಸಿ ಕೊಳ್ಳುವುದು ಕಷ್ಟ….
]]>





0 Comments