ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಬುಕ್: ಸಿ ಎನ್ ಆರ್ ಜೊತೆ ವಿವೇಕ್ ರೈ

 
ಸಿ ಎನ್ ರಾಮಚಂದ್ರನ್ 
ಚಿಲಿಯಲ್ಲಿ ಭೂಕಂಪ: ಹದಿನೆಂಟು ಕಥನಗಳು.  (೨೦೧೫)
ಡಾ. ಬಿ. ಎ. ವಿವೇಕ ರೈ
ತುಳು-ಕನ್ನಡ-ಇಂಗ್ಲೀಷ್ ವಿದ್ವಾಂಸರಾದ  ವಿವೇಕ ರೈ ಆವರ ಇತ್ತೀಚಿನ ಕೃತಿ ಇದು.
ಹೆಸರೇ ಸ್ಪಷ್ಟಪಡಿಸುವಂತೆ  ಈ ಸಂಕಲನದಲ್ಲಿ  ಭಿನ್ನ ಭಿನ್ನ ಸ್ವರೂಪದ ಕಥನಗಳಿವೆ: ಅನುವಾದಿತ ಕಥೆಗಳು, ಅನುಭವ ಕಥನಗಳು, ಜಾನಪದ ಕಥೆಗಳ ಆಧುನಿಕ ರೂಪಗಳು, ಒಗಟುಗಳ ಕಥೆಗಳು, ಇತ್ಯಾದಿ.  ಇವೆಲ್ಲವೂ ಇಂದಿನ ಭಾರತದ ರಾಜಕೀಯ-ಸಾಂಸ್ಕೃತಿಕ ವ್ಯವಸ್ಥೆಗಳ ಬಗ್ಗೆ ಹೊಸ ನೋಟಗಳನ್ನು ಕೊಡುತ್ತವೆ.
ಶೀರ್ಷಿಕೆಯನ್ನು ಒದಗಿಸಿರುವ “ಚಿಲಿಯಲ್ಲಿ ಭೂಕಂಪ” ಜರ್ಮನ್ ಲೇಖಕ ಹೀನ್ರಿಶ್ ಕ್ಲೆಯಿಸ್ಟ್‍ನ  ಕಥೆ ವಿಶ್ವದ ಉತ್ತಮ ಕಥೆಗಳಲ್ಲಿ ಒಂದು.  ಧಾರ್ಮಿಕ ಕ್ರೌರ್ಯ ಮತ್ತು ನೈಸರ್ಗಿಕ ಕ್ರೌರ್ಯ ಇವೆರಡನ್ನೂ ಮುಖಾಮುಖಿಯಾಗಿಸಿ, ಭೂಕಂಪಕ್ಕಿಂತ ಹೆಚ್ಚು ಕ್ರೂರವಾದದ್ದು ಧರ್ಮ ರಕ್ಷಕರ ಕ್ರೌರ್ಯ ಎಂಬುದನ್ನು ಈ ಕಥೆ ಹೃದಯಸ್ಪರ್ಶಿಯಾಗಿ ನಾಟ್ಯೀಕರಿಸುತ್ತದೆ.

‍ಲೇಖಕರು Admin

9 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading