ವೈಶಾಲಿ ಹೆಗಡೆ
ಎ ಥೌಸಂಡ್ ಸ್ಪ್ಲೆಂಡಿಡ್ ಸನ್ಸ್
ಎದೆಯಲೊಂದು ಹುಗಿದ ಗೂಟ. ಸುತ್ತ ಬಿಗಿದ ನರಗಳೆಲ್ಲ ಹೊಟ್ಟೆಯೊಳಗಿಂದ ಎಳಕೊಂಡು ಬಂದರೆ ಏಳುವ ನೋವನ್ನು ಮರೆಸುವ ಮಂತ್ರವೇನಾದರೂ ಇದ್ದೀತಾ?
ಆಫ್ಘಾನಿನ ಬೀದಿಗಳಲ್ಲಿ ಮುಸುಕು ಹೊದ್ದು ನಡೆಯುವ ಮಹಿಳೆಯರ ಕಣ್ಣಲ್ಲಿನ ನೋವು ಯಾಕೋ ನನಗರ್ಥವಾಗುತ್ತೆ ಎನಿಸುತ್ತಿದೆ. ಎಂತೆಂತ ನೋವನ್ನಾದರೂ ಸಹಿಸಿಕೊಂಡುಬಿಡುವ ಆತ್ಮ ಹೆಣ್ಣಿಗೆ ಮಾತ್ರ ಯಾಕೆ ಕೊಟ್ಟನೋ ಭಗವಂತ. ಮೋಸ, ದೌರ್ಜನ್ಯ, ದಬ್ಬಾಳಿಕೆಗಳೆಲ್ಲ ಭಾರೀ ಪದಗಳಾಗಲೇಬೇಕೆಂದಿಲ್ಲ. ಯಾವ ಹೊತ್ತಲ್ಲಿ ಅದು ಯಾರ ಪಾಲೋ!
ಹೂವ ಹಾದಿಯ ಹುಲ್ಲುಹಾಸಿನ ಮೆತ್ತೆಯ ಮೇಲೆ ಅಡಿಯಿಟ್ಟು ಬೆಳೆದ ಮರಿಯಂ, ಲೈಲಾ ಜೀವನಾನುಭಾವದಲ್ಲಿ ಕಲ್ಲೆದೆಯ ಯುವತಿಯಾರಾದರೂ ಕನಸ ಕಳೆದುಕೊಳ್ಳದೆ ಬದುಕುವ ಪಾತ್ರಗಳು ಬರೀ ಕಲ್ಪನೆ ಎಂಬುದು ಖಂಡಿತ ಸುಳ್ಳು. ಅವರೆಲ್ಲ ನನ್ನದೊಂದು ತುಣುಕು, ನನ್ನ ಸುತ್ತಲಿನದೊಂದು ತುಣುಕು ಎಂಬಷ್ಟು ನನ್ನಲ್ಲಿ ಉಳಿದು ಹೋಗಿದ್ದಾರೆ. ಅಯ್ಯೋ ಇದಕ್ಕೆಲ್ಲ ಹೆದರುತ್ತೀಯೇನೆ ಹುಡುಗಿ, ಇಷ್ಟಕ್ಕೆಲ್ಲ ಬೇಸರಿಸಿಕೊಂಡರೆ ಹೇಗೆ ಮಳ್ಳಿ ಎಂದು ಪಿಸುಗುಡುತ್ತಾರೆ.
ವರ್ಷ ಮುಗಿದು ದಶಕ ಕಳೆದರೂ ಇವರು ಮಾತ್ರ ಖಂಡಿತ ನನ್ನ ಜೊತೆ ಇರುವಂತೆ ಮಾಡಿದ ಪುಸ್ತಕ “ಎ ಥೌಸಂಡ್ ಸ್ಪ್ಲೆಂಡಿಡ್ ಸನ್ಸ್”. ಖಾಲಿದ್ ಹೊಸೆನಿಯವರ ಈ ಕಾದಂಬರಿ ಹೆಂಗಸರ ನೋವಿಗೊಂದು ಹೊಸ ಪರಿಭಾಷೆಯನ್ನೇ ಬರೆದಿದೆ. ಈ ಜಗತ್ತಿನ ಶಾಪವಿಮೋಚನೆಯಾಗಲು ಇನ್ನೂ ಪ್ರಳಯವೊಂದು ಬಾಕಿಯಿದೆ.
ಹೆಚ್ಚೇನೂ ಹೇಳಲಾರೆ, ಕಥೆಯ ಬಿಟ್ಟುಕೊಟ್ಟರೆ .




0 Comments