ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಪ್ರೀತಿಯ ಬಿಸಿ, ನಿನ್ನ ಬೆರಳು ಸುಟ್ಟೀತು

9_smallLogoಇಂದು ಅಮೃತಾ ಪ್ರೀತಂ ಜನ್ಮ ದಿನ. ಕವಿತೆ ಯೊಂದನ್ನು ಅನುವಾದಿಸಲು ಕೂತು, ಸೋತು ಸುಮ್ಮನಾದೆ. ಅನುವಾದಿಸಲು ಎತ್ತಿಕೊಂಡ “ಸಿಗರೇಟ್” ಎಂಬ ಪದ್ಯದ ನಾಲ್ಕು ಸಾಲುಗಳು ಹೀಗಿವೆ..

-ಅಂತರ್ಮುಖಿ

ಒಳಗೂ… ಹೊರಗೂ

ಆಯುಸ್ಸಿನ ಸಿಗರೇಟು ಸುಟ್ಟಾಯಿತು

ನನ್ನ ಪ್ರೀತಿ ವಾಸನೆ ಈಗ

ಒಂದಿಷ್ಟು ನಿನ್ನ ಉಸಿರಿನಲ್ಲಿ

ಇನ್ನೊಂದಿಷ್ಟು ಗಾಳಿಯಲ್ಲಿ

**

ಅದೇ ಕಡೆಯ ತುಂಡು

ಬೆರಳ ತುದಿಯಿಂದ ಜಾರಿಸಿ ಬಿಡು

ನನ್ನ ಪ್ರೀತಿಯ ಬಿಸಿ

ನಿನ್ನ ಬೆರಳು ಸುಟ್ಟೀತು.

**

ಹಿಂದೆಯೂ ಮೂರ್ನಾಲ್ಕು ಪೋಸ್ಟ್ ಗಳನ್ನು ಬರೆದಿದ್ದೇನೆ. ಅಮೃತಾ ಪ್ರೀತಂ ಅವರ ನಾಲ್ಕಾರು ಪದ್ಯಗಳನ್ನು ಅನುವಾದಿಸಿ ಪ್ರಕಟಿಸಿದ್ದೇನೆ. ಅವರ ಜನ್ಮ ದಿನದ ನೆನಪಿನಲ್ಲಿ ಅವುಗಳ ಲಿಂಕ್ ಗಳನ್ನು ಇಲ್ಲಿ ಮತ್ತೆ ಪ್ರಕಟಿಸುತ್ತಿದ್ದೇನೆ.

ನನ್ನ ವಿಳಾಸ

ಇವತ್ತು ನನ್ನ ಮನೆಯ ನಂಬರ್
ಅಳಿಸಿ ಹಾಕಿದ್ದೇನೆ.
ಗಲ್ಲಿಗೆ ಹಾಕಿದ್ದ
ಹೆಸರಿನ ಹಣೆಪಟ್ಟಿ ಕಿತ್ತೊಗೆದಿದ್ದೇನೆ.
ಮತ್ತೆ;
ಎಲ್ಲ ರಸ್ತೆಗಳ ಮೇಲಿದ್ದ
ದಾರಿಗಳ ಹೆಸರು ಒರೆಸಿದ್ದೇನೆ,
ನಿಮಗೇನಾದರೂ
ನನ್ನನ್ನು ಪಡೆಯಬೇಕಿದ್ದರೆ,
ಪ್ರತಿ ದೇಶದ, ಪ್ರತಿಯೊಂದು ನಗರದ
ಎಲ್ಲ ಗಲ್ಲಿಗಳ ಬಾಗಿಲು ಬಡಿಯಿರಿ.
ಇದು ಶಾಪ, ಇದು ವರ.
ಎಲ್ಲಾದರೊಂದು ಸ್ವತಂತ್ರ
ರೂಹಿನ ದರ್ಶನವಾದರೆ
ಅದೇ ನನ್ನ ಮನೆಯೆಂದು ತಿಳಿಯಿರಿ.

ಅಮೃತಾ ಪ್ರೀತಂ


‍ಲೇಖಕರು avadhi

31 August, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading