ಈಗ ಇದು ‘ಮೀಡಿಯಾ ಮೈಂಡ್’

Fullscreen capture 02-10-09 08.45.47.bmp

‘ಮೀಡಿಯಾ ಮಿರ್ಚಿ’ ಹೀಗೆ ಎಲ್ಲಾ ಮೀಡಿಯಾ ಬರಹಗಳ ವೇದಿಕೆಯಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ‘ವಿಜಯ ಕರ್ನಾಟಕ’ ದೈನಿಕಕ್ಕೆ ‘ಮೀಡಿಯಾ ಮಿರ್ಚಿ’ ಅಂಕಣ ವನ್ನು ಬರೆಯಲು ಆರಂಭಿಸಿದ ನಾನು ಅದರ ಕುರಿತು ಬಂದ ಪ್ರತಿಕ್ರಿಯೆ, ಟೀಕೆ, ವಿಮರ್ಶೆ ಎಲ್ಲಕ್ಕೂ ಒಂದು ವೇದಿಕೆ ಇರಲಿ ಎಂದು ಮೀಡಿಯಾ ಮಿರ್ಚಿ ಹೆಸರಿನಲ್ಲಿ ಅಂಕಣ ಆರಂಭಿಸಿದೆ.

ಈ ಮಧ್ಯೆ ಮೀಡಿಯಾ ಕುರಿತು ಸಾಕಷ್ಟು ಉತ್ಸಾಹಿ ಪತ್ರಕರ್ತರೂ ತಮ್ಮ ಬ್ಲಾಗ್ ನಲ್ಲಿ ಬರೆಯಲು ಆರಂಭಿಸಿದ್ದರು. ನನ್ನ ಸಹೋದ್ಯೋಗಿಗಲಾಗಿದ್ದ ಎಂ ಬಿ ಶ್ರೀನಿವಾಸ ಗೌಡ ‘ಖಾಸಗಿ ಡೈರಿ’ ಹಾಗೂ ಸುಘೋಷ್ ಎಸ್ ನಿಗಳೆ ‘Cautious Mind’ ಬ್ಲಾಗ್ ಆರಂಭಿಸಿದ್ದರು. ಇವರ ಬರಹಗಳು ಭಿನ್ನವಾಗಿತ್ತು. ಹಾಗೂ ಯಾವುದೇ ಎಗ್ಗಿಲ್ಲದೆ ತಮ್ಮದೇ ಶೈಲಿಯಲ್ಲಿ ಮೀಡಿಯಾ ದುನಿಯಾವನ್ನು ಬಿಚ್ಚಿಡುತ್ತಿತ್ತು. ಆ ಕಾರಣದಿಂದ ನನಗೆ ಮೆಚ್ಚಿಗೆಯಾದ ಬರಹಗಳೂ ಇದರಲ್ಲಿ ಸೇರಿದವು. ನಾನು ತುಂಬಾ ಗೌರವಿಸುವ ಖಾದ್ರಿ ಎಸ್ ಅಚ್ಚುತನ್ ಅವರು ಸಂಯುಕ್ತ ಕರ್ನಾಟಕ ಕ್ಕೆ ‘ಹದ್ದಿನ ಕಣ್ಣು’ ಅಂಕಣ ಬರೆಯಲು ಆರಂಭಿಸಿದರು. ಆ ಅಂಕಣವೂ ಮೀಡಿಯಾ ಮಿರ್ಚಿ ಬ್ಲಾಗ್ ನಲ್ಲಿ ಕಾಣಿಸಿಕೊಂಡಿತು.

ಈ ಮಧ್ಯೆ Mid-Day ಪತ್ರಿಕೆಯ ಸಂಪಾದಕ ಹಾಗೂ ಗೆಳೆಯ ಎಸ ಆರ್ ರಾಮಕೃಷ್ಣ ಹಾಗೂ Outlook ಸಾಪ್ತಾಹಿಕದ Associate Editor ಸುಗತ ಶ್ರೀನಿವಾಸರಾಜು ಅವರು ತಮ್ಮ ಪತ್ರಿಕೆಗಳಿಕೆ ನಿಯತವಾಗಿ ಬರೆಯುತ್ತಿದ್ದ ಅಂಕಣವನ್ನು ಮೇಲ್ ಮಾಡುತ್ತಿದ್ದರು. ಹೌದಲ್ಲಾ! ಇದನ್ನೂ ಏಕೆ ಹಂಚಿಕೊಳ್ಳಬಾರದು ಅನಿಸಿ ಅವೂ ಸಹಾ ‘ಮೀಡಿಯಾ ಮಿರ್ಚಿ’ ಬ್ಲಾಗ್ ಅಂಗಳ ಪ್ರವೇಶಿಸಿದೆ.

ಇನ್ನು ಮುಂದೆ ಇದು ಕೇವಲ ನನ್ನ ಅಂಕಣದ ಅಂಗಳ ಮಾತ್ರವಾಗಿರುವುದಿಲ್ಲ. ಇದು ತಾನೇ ತಾನಾಗಿ ಬೆಳೆದು ಉತ್ತಮ ಮೀಡಿಯಾ ಬರಹಗಳನ್ನು ಸಂಕಲಿಸುವ, ಓದಲು ಒಂದೇ ಕಡೆ ಸಿಕ್ಕುವ ವೇದಿಕೆಯಾಗಿಬಿಟ್ಟಿದೆ. ಇಷ್ಟಲ್ಲದೆ ಅಮ್ಮು ಜೋಸೆಫ್, ‘ದಿ ಹಿಂದೂ’ ಪತ್ರಿಕೆಯ ಕಲ್ಪನಾ ಶರ್ಮಾ, ನಾಗೇಶ್ ಹೆಗಡೆ ಅವರ ಅಂಕಣಗಳನ್ನೂ ಒಳಗೊಳ್ಳುವ ಯೋಚನೆಯಿದೆ. ಹಾಗಾಗಿ ಹೊಸ ಹೆಸರು, ಹೊಸ ಹೂರಣ ಹೊತ್ತು ಈ ಬ್ಲಾಗ್ ನಿಮ್ಮ ಮುಂದೆ ಬರುತ್ತಿದೆ. ‘ಮೀಡಿಯಾ ಮಿರ್ಚಿ’ ಇನ್ನು ಮುಂದೆ ‘Media Mind. ಹೆಸರು ಮಾತ್ರ ಬದಲಾಗಿವೆ. ಆದರೆ ಅಡ್ರೆಸ್ (url)ಅದೇ ಇದೆ. ಇನ್ನು ಮುಂದೆ ಮೀಡಿಯಾ ಮಿರ್ಚಿ ಬರಹಗಳೂ ಈ ಬ್ಲಾಗ್ ನ ಒಂದು ಭಾಗವಾಗಿ ಕಾಣಿಸಿಕೊಳ್ಳುತ್ತದೆ.

‍ಲೇಖಕರು avadhi

September 1, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

Sugata recommends..

Sugata recommends..

3 ಪ್ರತಿಕ್ರಿಯೆಗಳು

  1. Santhosh Ananthapura

    ಎಲ್ಲಾ ಬರಹಗಳನ್ನು ಒಂದೇ ವೇದಿಕೆಯಡಿ ತಂದು ಎಲ್ಲರಿಗೂ ಸುಲಭವಾಗಿ ಓದಿಕೊಳ್ಳುವಂತೆ ಮಾಡಿದ್ದೀರಿ. ಧನ್ಯವಾದಗಳು.
    Thank you very much….

    ಪ್ರತಿಕ್ರಿಯೆ
  2. ಜಯದೇವ

    ಬಹಳ ಒಳ್ಳೆಯದು. ಮೀಡಿಯಾದ ಬಗ್ಗೆಗಿನ ಎಲ್ಲಾ ಕ್ಲಿಪ್ಪಿಂಗ್ಸ್ ‘Single Windows’ ಮೂಲಕ!
    [email protected]

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: