
ಕೃಷ್ಣ ದೇವಾಂಗಮಠ
ಬಡತನ
ಈತ ತನ್ನ ಬಕಾಸುರ ಉದರ ತುಂಬಿಸಿಕೊಳ್ಳಲು
ಅವನ ಪೀಚಲು ಹೊಟ್ಟೆ ಮೇಲೆ ಹೊಡೆದ ಆತ ಹೆಂಡತಿ ಮಕ್ಕಳ ಮುಖವನ್ನೊಮ್ಮೆ ನೋಡಿ ಆಕಾಶವೇ ತಲೆಯ ಮೇಲೆ ಬಿದ್ದಂತೆ ಕೈ ಹೊತ್ತು ಕುಳಿತ

ನಿಜದ ಸಾವು
ಜನರೆಲ್ಲಾ ಅವಳು ಎಷ್ಟೇ ಹೇಳಿದರೂ ಕೇಳದೆ ಅವಳಿಗೆ ಸೂಳೆ ಪಟ್ಟ ಕಟ್ಟಿದರು ಆದರೀಗ ಅವಳು ನಿಜಕ್ಕೂ ಸೂಳೆಗಾರಿಕೆ ಹೆಂಗಸು ಅದೇ ಜನ ಅವಳನ್ನ ನೋಡಿ ಸಾದ್ವಿ ಎನ್ನುತ್ತದೆ ಅವಳು ಕೇಳಿ ನಕ್ಕು ಸುಮ್ಮನಾಗುತ್ತಾಳೆ
ಪ್ರೀತಿ
ಆ ಹುಡುಗ ಅದೇ ಹುಡುಗಿಯ ಹಿಂದೆ ಬಹಳ ಕಾಲ ಸುತ್ತಿದ ಒಂದು ದಿನ ಪ್ರೇಮ ನಿವೇದನೆಯನ್ನು ಮಾಡಿದ ಆದರೆ ಹುಡುಗಿ ಬೇರೆಯದೆ ಯೋಚನೆ ಇಟ್ಟುಕೊಂಡು ನಿರಾಕರಿಸಿದಳು ಆತ ಸುಮ್ಮನಾಗಿಬಿಟ್ಟ ಆಕೆ ಅವನು ಮತ್ತೆ ಬರುತ್ತಾನೆಂದು ದಾರಿಯಲ್ಲೆಲ್ಲಾ ಆಗಾಗ ಹಿಂದೆ ತಿರುಗಿ ನಿರಾಶೆಗೊಳ್ಳುತ್ತಾಳೆ
ಮುಗ್ಧತೆಯ ಕೊಲೆ
ಹೊರ ಗೇಟಿನ ಬಳಿ ನಿಂತು ಅಪ್ಪನ ಆಗಮನದ ನಿರೀಕ್ಷೆಯ ದಾರಿ ಕಾಯುತ್ತಿದ್ದ ಮಗು ಅಪ್ಪ ಬಂದನೆಂದು ಓಡಿಹೋಗಿ ಹೆದರಿಸಲು ಬಾಗಿಲಿನ ಹಿಂಬದಿ ಅವಿತುಕೊಳ್ಳುತ್ತದೆ ಆದರೆ ಬಂದ ಅಪ್ಪ ಮೊಬೈಲ್ ನಲ್ಲಿ ಮಾತನಾಡುತ್ತಾ ಆಚೆಯಲ್ಲೇ ನಿಂತುಬಿಡುತ್ತಾನೆ ಕಾದು ಕಾದು ಬೇಜಾರಾದ ಮಗು ಸಪ್ಪೆ ಮುಖ ಹಾಕಿ ಬಾಗಿಲಿನಿಂದ ಈಚೆ ಬರುತ್ತದೆ
ಭರವಸೆ
ಮರುಭೂಮಿಯಲ್ಲಿ ಗುರಿ ತೋರದೆ ದಾರಿ ಕಾಣದೆ ತನಗ್ಯಾರು ಇಲ್ಲ ತಾನು ಒಂಟಿ ಪಯನಿಗ ಎಂದು ಕೊರಗುತ್ತಾ ಸಾವರಸುತ್ತಿದ್ದವನು ನಡೆಯುತ್ತಾ ನಡೆಯುತ್ತಾ ಚಂದ್ರ ತನ್ನೊಟ್ಟಿಗೆ ಎಲ್ಲೆಡೆ ಬರುವುದನ್ನು ಕಂಡು ಹುರುಪುಗೊಂಡು ದಾರಿ ಸವೆಯಿಸಹತ್ತಿದವನು ದಡ ಸೇರಿದ ಚಂದ್ರ ಹಾಗೆ ಅವನೊಟ್ಟಿಗಿದ್ದ





0 Comments