ಇವತ್ತು ನಾನು lasse hollstorm ನಿರ್ದೇಶನದ hachiko ಸಿನಿಮಾ ನೋಡಿದೆ. ಸತ್ತ ತನ್ನೊಡೆಯ ಮತ್ತೆ ಬರುವನೆಂದು ೧೧ ವರ್ಷ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಾ ಕೊನೆಯುಸಿರೆಳದ ನಾಯಿಯ ಸತ್ಯ ಕಥೆಯಿದು.
ನನ್ನ ಕಣ್ಣು ಹನಿಗೂಡಿದೆ. ನನ್ನ ಅಂಗೈಯಲ್ಲಿ ಬೆಳೆದ ’ಚುಕ್ಕಿ’ ಮಕ್ಕಳು ನೆನಪಾದವು.
ಇನ್ನು ೨ ದಿನ ನಾನು ನಾನಾಗಿರಲಾರೆ
HBO ಚಾನಲ್ ನಲ್ಲಿ. hachiko ನಾಯಿ ೧೯೨೩ರಲ್ಲಿ ಹುಟ್ಟಿ ೧೯೩೫ರಲ್ಲಿ ಇಹಲೋಕ ತ್ಯಜಿಸಿತ್ತು. ಅದು ಕಾಯುತ್ತಿದ್ದ ರೈಲ್ವೆ ನಿಲ್ದಾಣದಲ್ಲಿ ಅದು ಬದುಕಿರುವಾಗಲೇ ಸ್ಥಾಪಿಸಿದ್ದ ಅದರ ಮೂರ್ತಿ ೨ನೇ ಮಹಾಯುದ್ಧದಲ್ಲಿ ದ್ವಂಸಗೊಂಡಿತ್ತು. ಅದನ್ನು ನಿರ್ಮಿಸಿದ ಶಿಲ್ಪಿಯ ಮಗನೇ ೧೯೪೮ರಲ್ಲಿ ಕಂಚಿನ ಮೂರ್ತಿಯನ್ನು ಸ್ಥಾಪಿಸಿದ. ಇಂದಿಗೂ ನೂರಾರು ಜನ ಅದರ ಜನ್ಮದಿನದಂದು ಜಪಾನಿನ ಆ ನಿಲ್ದಾಣಕ್ಕೆ ಬಂದು ಅದರ ಮೂರ್ತಿಯ ಮುಂದೆ ಅದಕ್ಕೆ ಇಷ್ಟವಾದ ತಿಂಡಿಯನ್ನಿಟ್ಟು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ
]]>




exelent ‘hachiko’.
-mahipalreddy
Have to see it!!
ಹೆಸರಿಗೆ ಮಾತ್ರ ಮೂಕ ಪ್ರಾಣಿ. ಆದ್ರೆ ಭಾವನೆಗಳಿಗೆ ಭರವಿಲ್ಲ.
ನನಗಂತೂ ದೂರದ ಮನುಷ್ಯ ಸತ್ತಾಗಕ್ಕಿಂತಲೂ ಒಂದು ಪ್ರಾಣಿ ಸತ್ತಾಗ ಆಗುವ ಫೀಲೆಂಗ್ ಬೇರೆಯಾಗಿರುತ್ತೆ. ಹಿಚಿಕೋನ ನಿಷ್ಠೆ ದೊಡ್ಡದು.
wonderful andre tapaguthe. kaledu hogthivi naavu. namagenaagide? naavu enu yaake naaavagila antha yochiso haagagide.
Nanu adhege ee cinema miss madi kondeno gothlla. Nanna obbale magalu maduveyagi hodananthara (adu nanna retirement samaya kooda agitthu), nanna labrador cross nanna bala sangathi. Adillada balannu nanninda kalpilasaloo sadyavilla. Adakku ashte. Nanilladiddare nanna yavudadaroo personal vastugalannu (towel, chappali) tale kelagittukondu nidde maduthe. Nanu sumaru nayi cinemagalannu nodiddne. Chance sikkare MORLEY and ME nodi.
ಒಮ್ಮೆ ಒಬ್ಬರು ತಮ್ಮ ಮಗನನ್ನು ನಾಯಿ, ಕತ್ತೆ- ಎಂದು ಬೈದರು. ಆಗ ಮಗ ಹೇಳಿದ ನಾಯಿ, ಕತ್ತೆ ಎಂದು ಮನುಷ್ಯರನ್ನು ಬೈದು ಆ ಪ್ರಾಣಿಗಳಿಗೆ ಯಾಕೆ ಅವಮಾನ ಮಾಡುತ್ತೀರಿ. ನಾಯಿಯಂತಹ ನಂಬಿಕೆಯ ಗುಣ, ಕತ್ತೆಯಂತಹ ವಿಧೇಯ-ಕಾಯಕನಿಷ್ಟ ಗುಣ ಮನುಷ್ಯನಿಗೆ ಬರಲು ಸಾಧ್ಯವೇ? ಇನ್ನೊಮ್ಮೆ ಹಾಗೆಲ್ಲ ಮನುಷ್ಯರನ್ನು ಪ್ರಾಣಿಗಳನ್ನು ಅವಮಾನಿಸದಿರಿ.
ಇನ್ನೊಂದು ಪ್ರಸಂಗ ಒಬ್ಬ ಆಡಳಿತ ಪಕ್ಷದ ಧುರೀಣರು ತಮ್ಮ ವಿರೋಧಿ-ಸತ್ಯನಿಷ್ಠುರ-ಮಾನವತಾವಾದಿ ರಾಜಕಾರಣಿಯನ್ನು ಪ್ರಶಂಸಿಸಲೇಬೇಕಾದ ಸಂದರ್ಭದಲ್ಲಿ ತಮ್ಮ ಪಕ್ಷದ ಮೇರುಹುದ್ದೆಯ ವ್ಯಕ್ತಿಯನ್ನು ಉದಾಹರಿಸಿ ನೀವೇನು ? ? ? ಅವರಂತಹ ಮಹಾವ್ಯಕ್ತಿಯೇ? ಎಂದು ಮೂದಲಿಸಿದರು.
ಆಗ ಕೆಂಡಾಮಂಡಲರಾದ ಆ ಸಭ್ಯ ರಾಜಕಾರಣಿ ಏನ್ರೀ ನನ್ನನ್ನ ಅವ್ರಿಗ್ಯಾಕೆ ಹೋಲಿಸುತ್ತೀರಿ? ನಾನೇನು ಅವರಂತೆ ಭ್ರಷ್ಟನಾ? ಲಂಚಬಡಕನಾ? ಸ್ವಾರ್ಥ ಸಾಧನೆಗಾಗಿ ದೇಶವನ್ನೇ ಮಾರಾಟ ಮಾಡಲೂ ಹೇಸದ ದುರುಳನಾ? ಯಾರದಾದರೂ ಸ್ವತ್ತು ನುಂಗಿ ಹಾಕಿದ್ದೇನಾ? ಹೋಗಿ ಹೋಗೀ ಅವ್ರಿಗೆ ಹೋಲಿಸುತ್ತಿರಲ್ಲಾ? ಯಾವುದಾದ್ರೂ ನಾಯಿಗೋ ಕತ್ತೆಗೋ ಹಂದಿಗೋ ಹೋಲಿಸಿದ್ರೆ ಸಂತೋಷ ಆಗ್ತಿತ್ತು ಅಂದ್ರಂತೆ.