’ನನ್ನೊಳಗಿನ ಹಾಡು ಕ್ಯೂಬ’ ಈಗ ತೆಲುಗಿಗೆ

ಜಿ ಎನ್ ಮೋಹನ್

ಹೌದು.. ಇದು “ನನ್ನೊಳಗಿನ ಹಾಡು ಕ್ಯೂಬಾ”. ಕ್ಯೂಬಾದ ಒಳಗೆ ನಾನು ಬರೀ ಹಾಡನ್ನಲ್ಲ, ಬದುಕಿನ ತುಡಿತ ಕಂಡವನು. ನಾನು ಕಂಡ ಕ್ಯೂಬಾವನ್ನು ಓದುಗರ ಮುಂದಿರಿಸಿದಾಗ ಅವರೂ ಅಷ್ಟೇ ಅದನ್ನು ಪ್ರೀತಿಸಿದ್ದಾರೆ ಕರ್ನಾಟಕದ ಬಹುತೇಕ ವಿಶ್ವವಿದ್ಯಾಲಯಗಳಿಗೆ ಈ ಕೃತಿ ಟೆಕ್ಸ್ಟ್ ಆಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಕೂಡಾ ಇದರ ಬಗ್ಗೆ ಪ್ರೀತಿ ತೋರಿದೆ. ಈ ಕೃತಿಯಿಂದಾಗಿ ನನಗೆ ಅನೇಕ ಹೊಸ ಗೆಳೆಯರು ಧಕ್ಕಿದ್ದಾರೆ ಅದನ್ನು ಹಿರಿಯ ಅಜ್ಜ ಬೃಹಸ್ಪತಿ ಅವರು ತಮಿಳಿಗೆ ಅನುವಾದಿಸಿ ರಾತ್ರೋರಾತ್ರಿ ನನ್ನ ಮುಂದಿಟ್ಟಿದ್ದರು ಈ ತಮಿಳು ಅನುವಾದ ಓದಿ ಎಂ ಕರುಣಾನಿಧಿ ಕವಿತೆಯೊಂದನ್ನ್ನು ಬರೆದರು.

ಈ ಮಧ್ಯೆ ಸೃಜನ್ ಒಂದು ದಿನ ನಿಮ್ಮ ಕೃತಿಯನ್ನು ತೆಲುಗಿಗೆ ಅನುವಾದಿಸಿದ್ದೇನೆ ಎಂದರು ಸೃಜನ್ ಹಾಗೂ ನಾನು ಗಂಟೆಗಟ್ಟಲೆ ಕಾವ್ಯ ಪ್ರೀತಿಯನ್ನು ಹಂಚಿಕೊಂಡವರು. ಹಾಗಾಗಿ ಕ್ಯೂಬಾ ಎನ್ನುವ ಪ್ರೀತಿಯನ್ನೂ ತೆಲುಗಿಗೆ ತಂದಿದ್ದಾರೆ . ಸೃಜನ್ ಅನುವಾದಿಸಿದ ರೀತಿಯ ಬಗ್ಗೆ ನನ್ನ ಗೆಳೆಯರು ಪ್ರೀ ತಿಯ ಮಾತುಗಳನ್ನಾಡಿದ್ದಾರೆ. ಸೃಜನ್ ಅನುವಾದ, ರೇಖೆ, ಅವರ ಮಾತಿನ ನವಿರುತನಕ್ಕೆ ಬೆರಗಾಗಿರುವವನು ನಾನು. ವತ್ಸಲಾ ವಿದ್ಯಾಸಾಗರ್ ಇದನ್ನು ಬೆಳಕು ಕಾಣಿಸಿದ್ದಾರೆ.
ಥ್ಯಾಂಕ್ಸ್ ಸೃಜನ್ ಅನ್ನದೆ ನನಗೆ ಇನ್ನೇನು ಹೇಳಲು ಸಾಧ್ಯ?
 

‍ಲೇಖಕರು G

June 1, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

  1. Hanumanth Ananth Patil

    ವಂದನೆಗಳು ಸರ್‌
    ತಮ್ಮ ಕೃತಿ ತೆಲುಗಿನಲ್ಲೂ ಸಹ ಬೆಳಕು ಕಾಣುತ್ತಿರುವುದು ಸಂತಸ ತಂದಿದೆ. ತಮ್ಮ ಜೀವನ ಗ್ರಹಿಕೆ ಚಿಂತನೆ ಅಭಿವ್ಯಕ್ತಿಗಳು ಆ ಭಾಷೆಗೂ ಪಸರಿಸುತ್ತಿರುವುದು ಹರುಷದ ಸಂಗತಿ. ಈ ಶುಭ ಸಂಧರ್ಭದಲ್ಲಿ ಶುಭ ಹಾರೈಕೆಗಳು.

    ಪ್ರತಿಕ್ರಿಯೆ
  2. mahantesh k

    ಕ್ಯೂಬಾ..ಫಿಡೆಲ್ ಹಾಗೂ ಚೇ..ಇಲ್ಲದ ಜಗತ್ತಿನಲ್ಲಿ ಪ್ರೀತಿ..ಸ್ಪೂರ್ತಿ ಯಾವುದು ಇಲ್ಲ.1959 ರ ಕ್ರಾಂತಿಯ ಮೊದಲು ಹಾಗೂ ನಂತರವೂ ಕ್ಯೂಬಾದ ವಿಭಿನ್ನ ಸಮಾನತೆಯ ಹಾದಿ ಈಗಲೂ ಜಗದಗಲಕ್ಕೂ ಸ್ಪೂರ್ತಿಯೇ..ಇಂತಹ ಕ್ಯೂಬಾದ ಹಾಡು ತೆಲುಗಿನ ಮನದಲ್ಲಿ ಪಾಡಾಗಿ ರೂಪಿತವಾಗಿರುವುದು ಸಂತಸದ ಸಂಗತಿ. ಧನ್ಯವಾದಗಳು

    ಪ್ರತಿಕ್ರಿಯೆ
  3. ಸುಧಾ ಚಿದಾನಂದಗೌಡ

    ಹೃದಯಪೂರ್ವಕ ಅಭಿನಂದನೆಗಳು

    ಪ್ರತಿಕ್ರಿಯೆ
  4. ಹನುಮಂತ ಹಾಲಿಗೇರಿ,

    Abhinandanegalu Sir, nanu ati hechchu ishtapaduva pustaka idu..

    ಪ್ರತಿಕ್ರಿಯೆ
  5. Kariswamy.K

    ಸರ್‌,
    ನಾನು ತುಂಬ ಇಷ್ಟಪಟ್ಟ ಪುಸ್ತಕಗಳಲ್ಲಿ ‘ನನ್ನೊಳಗಿನ ಹಾಡು ಕ್ಯೂಬಾ’ ಕೂಡ ಒಂದು. ನನ್ನ ಅನೇಕ ಗೆಳೆಯರಿಗೆ ಓದುವಂತೆ ಸೂಚಿಸಿ, ಅವರ ಪ್ರತಿಕ್ರಿಯೆಯಿಂದ ಪುಳಕಗೊಂಡಿದ್ದೇನೆ. ಒಮ್ಮೆಗೆ ೧೦ ಪುಸ್ತಗಳನ್ನು ಕೊಂಡು ನನ್ನ ಕೆಲ ಆತ್ಮೀಯರಿಗೆ ಹಂಚಿದ್ದೇನೆ. ಇವತ್ತಿಗೂ ನನ್ನ ಸಂಗ್ರದಲ್ಲಿ ಅದರ ಮೊದಲ ಮುದ್ರಣದ ಪ್ರತಿ ಇದೆ.
    ಗೆಳೆಯ ಸೃಜನ್‌ ಇದನ್ನು ತೆಲುಗಿಗೆ ತುಂಬಾ ಚೆನ್ನಾಗಿಯೇ ಅನುವಾದಿಸಿರುತ್ತಾರೆ. ಇಬ್ಬರಿಗೂ ಆಭಿನಂದನೆಗಳು.

    ಪ್ರತಿಕ್ರಿಯೆ
  6. ಕಾ.ಹು.ಚಾನ್ ಪಾಷ. ಬಂಗಾರಪೇಟೆ.

    ಅಭಿನಂದನೆಗಳು ಸಾರ್.

    ಪ್ರತಿಕ್ರಿಯೆ
  7. Lingaraju BS

    ನನ್ನೊಳಗಿನ ಹಾಡು ಕ್ಯೂಬಾ ಪುಸ್ತಕವನ್ನು ಮೊದಲ ಬಾರಿಗೆ ಓದಿದಾಗಿನ ರೋಮಾಂಚನ, ಪುಳಕ ಇಂದಿಗೂ ಹಾಗೆಯೇ ಇದೆ. 12 ಪುಸ್ತಕಗಳನ್ನು ಕಳೆದುಕೊಂಡಿದ್ದೇನೆ. ಈಗಿರುವುದು 13ನೇಯದು. ಉತ್ತಮ ಪ್ರವಾಸಿ ಪುಸ್ತಕ ಎಂಬ ಗರಿಮೆ ಪಡೆದ ಈ ಪುಸ್ತಕ ಈಗ ನಿಜಕ್ಕೂ ಆವರದೇ ಭಾಷೆಯಲ್ಲಿ ಸ್ಪೂರ್ತಿ ಹಂಚುವ ಪ್ರವಾಸಕ್ಕೆ ಹೊರಟಿರುವುದು ಸಂತಸದಾಯಕ.

    ಪ್ರತಿಕ್ರಿಯೆ
  8. ಗವಿಸಿದ್ಧ ಹೊಸಮನಿ

    ಸರ್, ಅಭಿನಂದನೆಗಳು.. ಕೆಲವು ಕಾರಣಗಳಿಗೆ ಮತ್ತೆ ಮತ್ತೆ ಓದಿಸಿಕೊಳ್ಳುವ ಕೃತಿ ಇದು.ಸಾಹಿತ್ಯವು ಜೀವನದ ಪದಾರ್ಥ ಅಂತಾರೆ ಬೇಂದ್ರೆಯವರು.. ತೆಲುಗು ದೇಶದ ಜನರಿಗೂ ಇದು ಪದಾರ್ಥ ರೀತಿಯಲ್ಲಿ ತಲುಪಿ ಅದನ್ನವರು ಸವಿಯಲಿ..

    ಪ್ರತಿಕ್ರಿಯೆ
  9. Dr H S Eswara

    My dear Mohan,
    Congratulations once more! I have not read it. But I may read it soon. With best wishes, HS Eswara

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: