-ರೇಶ್ಮಾ ಗುಳೇದಗುಡ್ಡಾಕರ್
ಟಂಕಸಾಲೆ
ನನ್ನೊಳಗಿನ ಯುದ್ಧವ ಗೆಲ್ಲಲ್ಲೊ ?
ಹೊರಗಿನ ನಿತ್ಯ ಯುದ್ದಕ್ಕೆ ನನ್ನ ಕಿವಿ ನೀಡಲೋ ?
ತಿಂಗಳು ಕೊನೆಗೆ
ಸದ್ದಿಲ್ಲದೆ ಕರಗುತ್ತಿರುವ ಕಿರಾಣಿ ,ಮತ್ತೊಂದೆಡೆ ಮಗನಿಗೆ
ಕೂದಲಿನ ವಿನ್ಯಾಸದ ಚಿಂತೆ , ಮಗಳಿಗೆ ವಿವಿಧ ಕೋರ್ಸ್ಗಳ ಜೊತೆ
ಮದುವೆಯ ಕನಸಂತೆ ..
ಪತಿಮಹಾಶಯ ತರಾವರಿ ನ್ಯೂಸ್ ಗಳನ್ನು
ನೋಡುವ ಜೊತೆಗೆ ಆಗಾಗ ವಿವಿಧ ಪೇಪರ್ ಗಳ
ಜೊತೆ ಸಾಮಾಜಿಕ ಹರಟೆಯ ಅಂಗಳದಲ್ಲಿ ಮೈಮರೆವರಂತೆ
ಹಿರಿಯರು ಯಾರಿದ್ದರು
ಏನಾದರೂ ಗುಳಗೀ ಪಟ್ಟಿ ನೀಡುವದು ಮಾಸದ ಮೊದಲ ಆದ್ಯತೆ .
ಹಳೆಬೇರು- ಹೊಸಚಿಗುರು , ಇರುವ ಮನೆ ಒಂದೇ !
ಮಾಡಿ ಹಾಕುವ ಕೈಗಳು ಎರಡೇ …
ಆದರೆ ಒಬ್ಬರದು ,ಒಂದೊಂದು ದಾರಿ ….
ನಿರ್ಮಿಸಿದೆ ಅಳಿಯದ ಗೋಡೆಯನ್ನು ಮನದಲ್ಲಿ,
ಮನೆಯಲ್ಲಿ !…….
ಒದ್ದಾಟ, ತಿಕ್ಕಾಟ ಜೀವನದ ಪ್ರತಿ ಕ್ಷಣದ ಊಟ
ಯಾವ ಹೆಣ್ಣದರೇನು ? ಹೇಗಿದ್ದರೇನು ? ಸಂದರ್ಭಕ್ಕೆ ತಕ್ಕಂತೆ
ಹೊಂದಿಕೊಂಡು ನಮ್ಮನ್ನು ನಾವೇ ಸಾಂತ್ವಾನಗೊಂಡು
ರೂಪಾಂತರ ಮಾಡಿಕೊಂಡು ಬಾಳಲು ಅಣಿ ಮಾಡುವ ಈ
ಬದುಕು ಯಾವ ಟಂಕಸಾಲೆಗೊ ಮಿಗಿಲೇನು ?






0 Comments