ಸ್ವಲ್ಪ ತಮಾಷೆ ಅನ್ನಿಸಿದರೂ ನನ್ನ ಮದುವೆಗೆ ನನಗೆ ನಾನೇ ಉಡುಗೊರೆ ಕೊಟ್ಟ್ಕೊಬೇಕು ಅಂತ ನಿನ್ನೆ ನಮ್ಮ ಮಂಗಳೂರಿನ ಸಿಟಿಸೆಂಟರ್ ಪಕ್ಕದ ನವಕರ್ನಾಟಕ ಪುಸ್ತಕ ಮಳಿಗೆಗೆ ಹೋಗಿದ್ದೆ. ಅಲ್ಲಿ ಕೆಲಸ ಮಾಡುವ ಗೆಳೆಯ ವಿಶ್ವನಾಥ್ ಯಾವಾಗ ಹೋದರೂ ಹೊಸತು ಪುಸ್ತಕದ ಬಗ್ಗೆ ಮಾಹಿತಿ ಕೊಡುತ್ತಾರೆ.
ಹಾಗೆ ಹುಡುಕಿದಾಗ ಈ ಸಲವಂತೂ ಭರ್ಜರಿಯಾಗೇ ಆಯ್ತು.
ಎಂದಿನಿಂದಲೋ ಹುಡುಕುತ್ತಿದ್ದ ಮನೋಹರ ಗ್ರಂಥ ಮಾಲೆಯ ಪ್ರಯೋಗ ಫಲ 12 ಜನ ಸೇರಿ ಬರೆದ ‘ಖೋ’
ಎಮ್.ಆರ್.ದತ್ತಾತ್ರಿ ಅವರ ಅಂಕಣ ಬರಹಗಳ ‘ಪೂರ್ವ ಪಶ್ಚಿಮ’
ಚಲಂ ನ ಮೈದಾನ
ರಾಹುಲ್ ಸಾಂಕೃತ್ಯಾಯನರ ‘ವೋಲ್ಗಾ ಗಂಗಾ’
ಶಂಕರ ಮೊಕಾಶಿಯವರ ‘ಗಂಗವ್ವ ಗಂಗಾಮಾಯಿ’
ಜಯಂತ್ ಕಾಯ್ಕಿಣಿಯವರ ‘ಚಾರ್ ಮಿನಾರ್’
ಮಿತ್ರಾ ವೆಂಕಟ್ರಾಜರ ‘ಪಾಚಿ ಕಟ್ಟಿದ ಪಾಗಾರ’
ಹೀಗೆ ಇನ್ನೂ ಕೆಲವು.
ನನ್ನೊಳಗಿನ ಓದುಗನಂತೂ ಫುಲ್ ಖುಷ್!!






ಚಲಂ ನ ಮೈದಾನ , need this book how to go about this please advise -balu 98455 19387