– ಮಹಿಪಾಲ ರೆಡ್ಡಿ ಮುನ್ನೂರ್
‘ಹರೆಯದಲ್ಲೇ ಮದನಾ ದೊರೆಯ ಹೆಗಲೇರಿ ಕೂತಿದ್ದ ಬಂದೂಕು ಯಾವತ್ತೂ ಬೇಟೆಯನ್ನೇ ಹುಡುಕುತ್ತಿತ್ತು. ಆಂದ್ರಪ್ರದೇಶಕ್ಕೆ ಅಂಟಿಕೊಂಡು ಅಂಗಾತ ಮಲಗಿದ್ದ ಅದೆಷ್ಟೋ ಹೊಲಗಳಲ್ಲಿ ಕಾಡುಹಂದಿಗಳ ಉಪಟಳಕ್ಕೆ ರೈತರು ನೊಂದಿದ್ದರು. ಅವರ ನೋವಿಗೆ ಸ್ಪಂದಿಸಿದ ದೊರೆ, ಬಂದೂಕು ಹಿಡಿದು ರಾತ್ರಿಯೇ ಹೊರಡುತ್ತಿದ್ದರು. ಇದು ಚಂದ್ರಶೇಖರರೆಡ್ಡಿ ದೇಶಮುಖ ಮದನಾ ಅವರ ಬಗ್ಗೆ ಬರೆಯುತ್ತಿರುವ ಬಯೋಗ್ರಾಫಿಯ ಒಂದು ಝಳಕ್’
… ಹೌದು.
ನಾವೆಲ್ಲ ಶ್ರೀ ಚಂದ್ರಶೇಖರರೆಡ್ಡಿ ದೇಶಮುಖ ಮದನಾ ಅವರನ್ನು ಇಷ್ಟಪಡುವುದಕ್ಕೆ ಹಲವಾರು ಕಾರಣಗಳಿವೆ. ಸಹೃದಯರೆಂದು, ಮೌಲ್ಯಾಧಾರಿತ ರಾಜಕಾರಣದಲ್ಲಿ ಪಳಗಿದವರೆಂದೂ, ರಾಜಕೀಯ ಚದುರಂಗದಾಟದಲ್ಲಿ ಮುತ್ಸದ್ಧಿಯೆಂದು ಇಡೀ ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದಾರೆಂದು….. ಇಂಥ ಅನೇಕ ಸಂಗತಿಗಳಿಂದ ಅವರನ್ನು ಇಷ್ಟಪಡುತ್ತೇವೆ.
ಸೇಡಂ ತಾಲೂಕಿನ ಮದನಾ ಎಂಬ ಪುಟ್ಟ ಗ್ರಾಮದ ದೇಶಮುಖರಾಗಿರುವ ಅವರು, ಇಡೀ ಕನರ್ಾಟಕದಲ್ಲಿ ದೊಡ್ಡ ಹೆಸರನ್ನು ಹೊಂದಿದ್ದಾರೆ. ಅಭಿವೃದ್ಧಿಯಲ್ಲಿ ಮುಂದಾಲೋಚನೆ ಹೊಂದಿದ್ದ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ.ವೀರೇಂದ್ರ ಪಾಟೀಲ್ ಅವರ ರಾಜಕೀಯ ಗರಡಿಯಲ್ಲಿ ಬೆಳೆದಿದ್ದಾರೆ. ಪಳಗಿದ್ದಾರೆ.
ಪಂಚಾಯಿತಿಯಿಂದ ಹಿಡಿದು ವಿಧಾನಸಭೆ ಉಪ-ಸಭಾಧ್ಯಕ್ಷರ ಸ್ಥಾನದವರೆಗೆ ಬೆಳೆ ರೀತಿ ಅಭೂತಪೂರ್ವ. ಉರ್ದು ಓದಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಉರ್ದು ಶಿಕ್ಷಣ ಪಡೆದರು. ಆದರೂ ಕನ್ನಡಕ್ಕೆ ಅಪಚಾರವಾಗದಮತೆ ಗಡಿಭಾಗದ ಈ ಸೇಡಂನಲ್ಲಿ ಕನ್ನಡದ ಏಳಿಗೆಗೆ ಶ್ರಮಿಸಿದ್ದಾರೆ. ಮೊದಲ ಬಾರಿಗೆ ಸೇಡಂ ವಿಧಾನಸಭಾ ಮತಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಭೇರಿ ಬಾರಿಸಿ ಶಾಸಕರಾಗಿದ್ದರು. ಎರಡನೇ ಬಾರಿಗೆ ಶಾಸಕರಾಗಿದ್ದ ಸಂದರ್ಭದಲ್ಲಿ, ಆಗ ಮುಖ್ಯಮಂತ್ರಿ ಆಗಿದ್ದ ದಿ. ಜೆ.ಎಚ್.ಪಟೇಲ್ ಅವರ ಸರಕಾರದಲ್ಲಿ ವಿಧಾನಸಭೆಯ ಉಪ ಸಭಾಧ್ಯಕ್ಷ ಹುದ್ದೆಯನ್ನು ಅಲಂಕರಿಸಿದರು.
ಅದೂವರೆಗೆ ಸೇಡಂ ಮತಕ್ಷೇತ್ರದ ಯಾವೊಬ್ಬ ಶಾಸಕರು ಉನ್ನತ ಪದವಿಗೆ ಏರಿದ ಉದಾಹರಣೆ ಇರಲಿಲ್ಲ. ಹೀಗಾಗಿ ಶ್ರೀ ಚಂದ್ರಶೇಖರರೆಡ್ಡಿ ದೇಶಮುಖ ಮದನಾ ಅವರು ಈ ರೀತಿಯ ಕನರ್ಾಟಕ ವಿಧಾನಸಭೆಯಲ್ಲಿ ಉನ್ನತ ಸ್ಥಾನ ಅಲಂಕರಿಸಿದವರಲ್ಲಿ ಮೊದಲಿಗರು. ಇಡೀ ಸೇಡಂ ಪ್ರದೇಶದಲ್ಲಿ `ಮದನಾ ದೊರೆ’ ಎಂದೇ ಪ್ರಖ್ಯಾತಗೊಂಡಿರುವ ಇವರು ಅನೇಕ ಅಭಿವೃದ್ಧಿ ಪರ ಯೋಜನೆಗಳನ್ನು ಕೈಗೊಂಡಿದ್ದಾರೆ. ರೈತರ ನೆರವಿಗಾಗಿ ನೀರಾವರಿ ಯೋಜನೆಗಳ ಕನಸು ಕಟ್ಟಿದ್ದಾರೆ. ಮಾಜಿ ಪ್ರಧಾನಿ ಶ್ರೀ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಧರ್ಮಸಿಂಗ್ಜೀ, ದಿ. ರಾಮಕೃಷ್ಣ ಹೆಗಡೆ, ದಿ.ವೀರೇಂದ್ರ ಪಾಟೀಲ್, ದಿ. ಜೆ.ಎಚ್.ಪಟೇಲ್ ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳಾದ ದಿ.ಎಂ.ಪಿ.ಪ್ರಕಾಶ, ಶ್ರೀ ಸಿದ್ಧರಾಮಯ್ಯ ಸೇರಿದಂತೆ ಅನೇಕ ಗಣ್ಯಮಾನ್ಯರೊಂದಿಗೆ ಅತೀ ಹತ್ತಿರದ ಸ್ನೇಹಿತರಾಗಿದ್ದರು.
ಸರಿ ಸುಮಾರು 45 ವರ್ಷಕ್ಕೂ ಮುಂಚೆಯೇ ವಿದೇಶಗಳಿಗೆ ಹೋಗಿಬಂದಿದ್ದಾರೆ.
ಹಿಂದಿಯ ಗಜಲ್, ಕ್ಲಾಸಿಕಲ್ ಇನ್ಸ್ಟ್ರುಮೆಂಟಲ್ ಹಾಡುಗಳನ್ನು ಕೇಳುತ್ತಾರೆ. ಅದರಲ್ಲೂ ಕೊಳಲುವಾದನ, ಶಹನಾಯಿ, ಸಿತಾರ್, ಸರೋದ್, ಸಾರಂಗಿ ವಾದನ ಎಂದರೆ ದೇಶಮುಖ ಅವರಿಗೆ ಎಲ್ಲಿಲ್ಲದ ಪ್ರೀತಿ.
ಇದಕ್ಕೂ ಹೆಚ್ಚೆಂದರೆ `ಶಿಕಾರಿ’ ಆಡುವುದು.

ಶ್ರೀಮಂತ ಬದುಕಿನ ದೇಶಮುಖ ಅವರ `ಶಿಕಾರಿ’ ಎಂದರೆ ಒಂದು ಥ್ರಿಲ್ಲಿಂಗ್ ಅನುಭವ. ಇದರ ಜೊತೆಯಲ್ಲಿ ಸುಮಾರು 50 ವರ್ಷಗಳ ಕಾಲ ಸಂಭ್ರಮಿಸಿದ್ದಾರೆ. ರೈತರಿಗೆ ತಲೆನೋವಾಗುವ ಕಾಡು ಹಂದಿಗಳ ಉಪಟಳವನ್ನು ತಡೆಯಲೆಂದೇ ಶಿಕಾರಿಗೆ ಹೊರಡುತ್ತಾರೆ. ಇಲ್ಲಿ ಇನ್ನೊಂದು ಮಾತು ಪ್ರಸ್ತಾಪಿಸಲೇಬೇಕು. ಮುದಗಲ್ ಬಳಿ ತೋಳವೊಂದು ನರಭಕ್ಷಕವಾಗಿತ್ತು. ಅದು ಯಾವ ಪರಿ ಹುಡುಗರನ್ನು ಕೊಲ್ಲುತ್ತಿತ್ತು ಎಂದರೆ, ಅದರ ಸುದ್ದಿ ಕನರ್ಾಟಕದ ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿತ್ತು. ಆಗಿನ ಮುಖ್ಯಮಂತ್ರಿಗಳಾಗಿದ್ದ ದಿ. ಆರ್. ಗುಂಡೂರಾವ್ ಅವರ ನಿದ್ದೆಗೆಡಿಸಿತ್ತು. ಅವರಿಗೆ ಮುದಗಲ್ನ ಈ ನರಭಕ್ಷಕದ್ದೇ ಚಿಂತೆಯಾಗಿತ್ತು. ತಕ್ಷಣವೇ ನೆನಪಿಗೆ ಬಂದಿದ್ದೇ ಸೇಡಮ್ನ ಈ ಮದನಾ ದೊರೆ.
ಈಗಿನಂತೆ, ಮೊಬೈಲ್ ಮತ್ತು ಲ್ಯಾಂಡ್ ಫೋನ್ಗಳ ಸೌಲಭ್ಯ ಇಲ್ಲದೇ ಟ್ರಂಕಾಲ್ ವ್ಯವಸ್ಥೆಯಿತ್ತು. ಟೆಲಿಗ್ರಾಂ ಕಳುಹಿಸಿ, ಶ್ರೀ ಚಂದ್ರಶೇಖರರೆಡ್ಡಿ ದೇಶಮುಖ ಮದನಾ ಅವರನ್ನು ಮುದಗಲ್ಗೆ ತೆರಳುವಂತೆ ಮನವಿ ಮಾಡಿತು ಶ್ರೀ ಗುಂಡೂರಾವ್ ಸರಕಾರ. ತಕ್ಷಣವೇ ಮುದಗಲ್ಗೆ ಹೋಗಿ, ಸಾರ್ವಜನಿಕರಿಗೆ ಕಂಟಕವಾಗಿದ್ದ ನರಭಕ್ಷಕವನ್ನು ಕೊಂದು ವಿಧಾನಸಭೆಯ ಗದ್ದಲವನ್ನು ಶಾಂತ ಮಾಡಿದ್ದರು. ಮುಖ್ಯಮಂತ್ರಿ ಶ್ರೀ ಗುಂಡೂರಾವ ಅವರ ತಲೆನೋವನ್ನು ಶಮನ ಮಾಡಿದ್ದರು. ಅದಕ್ಕಿಂತಲೂ ಹೆಚ್ಚು ಎಂದರೆ, ನಾಗರೀಕರ ಬದುಕನ್ನು ರಕ್ಷಣೆ ಮಾಡಿದ್ದರು. ಇಂತಹ ಅನೇಕ ಸಂದರ್ಭಗಳಲ್ಲಿ ರೈತರಿಗೆ ಅನುಕೂಲ ಸಿಂಧುವಾಗಿದ್ದಾರೆ.
ಅಂತಹ ವಿಶಿಷ್ಟ ರಾಜಕಾರಣಿ ಆಗಿರುವ ಮದನಾ ದೊರೆ ಅವರಿಗೆ ಈಗ 82 ರ ಭತರ್ಿ ಸಂಭ್ರಮ.
ಡಿಯರ್ ರೀಡರ್,
ಅಬ್ಬಾ..! ಕೊನೆಗೂ ನಿಟ್ಟುಸಿರುಬಿಟ್ಟೆ ನಾನು. ಅದಕ್ಕೊಂದು ಕಾರಣವೂ ಇದೆ. ಮದನಾ ದೊರೆ ಎಂದೇ ಪ್ರಖ್ಯಾತಗೊಂಡಿರುವ ಶ್ರೀ ಚಂದ್ರಶೇಖರರೆಡ್ಡಿ ದೇಶಮುಖ ಅವರು ತಮ್ಮ ಬಯೋಗ್ರಾಫಿ ಬರೆಯುವುದಕ್ಕೆ ಇವತ್ತು ಅನುಮತಿ ಕೊಡುತ್ತಾರೆ.. ನಾಳೆ ಕೊಡುತ್ತಾರೆ.. ಅಂತ ದಿನಾಲು ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಅನೇಕ ದಿನಗಳಿಂದ ಸತಾಯಿಸಿ ಅಂತೂ ಕೊಟ್ಟರಲ್ಲಾ ಅಂತ ಸಮಾಧಾನವಾಯಿತು.
ಯಾವುದೇ ಓದುಗ ತುದಿಗಾಲ ಮೇಲೆ ನಿಂತು `ಚಂದ್ರಶಿಕಾರಿ’ ಓದಲು ತೊಡಗಬೇಕು. ಓದುಗ ಸಮೂಹವೇ ನಿಬ್ಬೆರಗಾಗಿ ನೋಡಬೇಕು. ಕುತೂಹಲದಿಂದ `ಚಂದ್ರಶಿಕಾರಿ’ ಎಂಬೋ ಈ ಪುಸ್ತಕ ತೆರೆಯಬೇಕು. ಚಂದ್ರಶಿಕಾರಿ ಪುಸ್ತಕವು ಓದುಗರ ಸೋಜಿಗತನವನ್ನು ಕೆರಳಿಸಬೇಕು. ಅದೇನೂ ಹೊಸದಲ್ಲದ ವಿಷಯವೇನಲ್ಲ.. ಎಲ್ಲರಿಗೂ ಗೊತ್ತಿರುವ ಸಂಗತಿಯೇ ಎಂದು ಮೂಗು ಮುರಿಯುವವರಿಗೂ, ವ್ಹಾ.. ಎಷ್ಟು ಚೆಂದಾಗಿದೆ ಬರಹ ಎನ್ನುವ ಕ್ರೆಡಿಟ್ ಪಡೆದುಕೊಳ್ಳಬೇಕೂ ಈ `ಚಂದ್ರಶಿಕಾರಿ’.
ಕಲಬುರ್ಗಿ ಎಂಬ ವಿಶಾಲವಾದ ಜಿಲ್ಲೆಯ ಸೇಡಂ ತಾಲೂಕಿನ ಅದ್ಯಾವುದೋ ಸಣ್ಣ ಪುಟ್ಟ ಕಾಡಲ್ಲಿ ಅಲೆಯುತ್ತ ಮೃಗ ಕಂಡ ಕೂಡಲೇ, ಎಡ ಹೆಗಲ ಬಳಿ ಬಂದೂಕನ್ನು ಇಟ್ಟುಕೊಂಡು ಬಲಗೈಯನ ಬೆರಳುಗಳಿಂದ ಟ್ರಿಗರ್ ಒತ್ತಿದರೆ ದೂರದಲ್ಲಿದ್ದ `ಬೇಟೆ’ಯೊಂದು ಮಟಾಷ್. ನಿಂತಲ್ಲಿಯೇ ಆ `ಬೇಟೆ’ ಬಂದೂಕಿನ ಗುರಿಗೆ ಜೀವ ಕೊಟ್ಟಿರಬೇಕು. ಅಂಥಾ ಗುರಿಯನ್ನು ತಮ್ಮ ಬೆರಳ ತುದಿಯಲಿಟ್ಟುಕೊಂಡು `ಬ್ಯಾಟಿ’ ಆಡುತ್ತಿದ್ದರು ಅವರು. ಬ್ಯಾಟಿ ಆಡೋದು ಅಂದ್ರ ಅವರಿಗೆ ತುಂಬಾ ಇಷ್ಟ. ಸರಿ ಸುಮಾರು ಹರೆಯದ ವಯಸ್ಸಿದ್ದಾಗ ಅದೆಷ್ಟು `ಬ್ಯಾಟಿ’ಗಳನ್ನು ಹೊಡೆದಿದ್ದಾರೋ.. ಎಂಬುದಕ್ಕೆ ಲೆಕ್ಕವಿಲ್ಲ.
ತಮ್ಮ ಹಾಬಿಯಾಗಿ `ಬ್ಯಾಟಿ’ ಆಡುವುದನ್ನು ಮುಂದುವರಿಸಿಕೊಂಡಿದ್ದ ಅವರ ಬಂದೂಕಿನ ನಳಿಕೆಯಿಂದ ಚಂಗನೆ ಹಾರಿಹೋಗುವ `ಗುರಿ’ಗೆ ಚಿರತೆಗಳೆಷ್ಟು ಬಲಿಯಾಗಿವೆಯೋ.. ? ಹುಲಿಗಳೆಷ್ಟು ಜೀವ ಕಳೆದುಕೊಂಡಿವೆಯೋ..? ಕಾಡಕಿರುಬಗಳು, ಸಿಂಗ ಮುಂತಾದ ಎಷ್ಟೋ ಪ್ರಾಣಿಗಳು ಇನ್ನಿಲ್ಲದಂತಾಗಿವೆಯೋ.. ಗೊತ್ತಿಲ್ಲ.
ಸದ್ಯ ಅವರಿಗೆ ಎಂಭತ್ತೆರಡು ವಯಸ್ಸು. ಆದರೂ ಜೀವನೋತ್ಸಾಹ ಇನ್ನೂ ಕುಗ್ಗಿಲ್ಲ. ಈಗಲೂ ಅವರ ಜೊತೆ ಕುಳಿತಿದ್ದರೆ, ಅವರು ಹರೆಯದ ಸಂದರ್ಭದಲ್ಲಿ ಆಡಿದ್ದ `ಬ್ಯಾಟಿ’ಯ ಕುರಿತಂತೆ ಹೇಳಲು ತೊಡಗಿದರೆಂದರೆ, ಅದೊಂದು ಮೆಗಾ ಧಾರಾವಾಹಿ.
ಕೇಳುತ್ತಾ ಹೋದಂತೆಲ್ಲಾ ನಮಗೂ ಒಂದು ಕುತೂಹಲದ ಜಗತ್ತು ತೆರೆಯುತ್ತದೆ. ನಾನು ಇಂಥವುಗಳ ಬಗ್ಗೆ ಆಸಕ್ತಿ ಹೊಂದಿದ್ದೇನೆ. ಅದನ್ನು ಓದುಗ ದೊರೆಗಳಿಗೆ ಕೊಟ್ಟರೆ ಹೇಗೆ ಎಂದು ಅನ್ನಿಸಿದ್ದರಿಂದಲೇ ಈ `ಚಂದ್ರಶಿಕಾರಿ’.
ರಾಜ ಮನೆತನದಂತೆ ಇದ್ದು, ಯುವರಾಜನಾಗಿ ಆರಾಮ ಆಗಿರಬೇಕಾಗಿದ್ದ ಹರೆಯದ ವಯಸ್ಸಿನಲ್ಲಿ ಕಾಡುಗಳಲ್ಲಿ ಅಲೆದು ಕಾಡುಮೃಗಗಳ ಬೇಟೆಯಾಡುವ ಹಾಬಿಯನ್ನು ಇಟ್ಟುಕೊಂಡಿದ್ದವರು ಬೇರೆ ಯಾರೂ ಅಲ್ಲ.
ಚಂದ್ರಶೇಖರರೆಡ್ಡಿ ದೇಶಮುಖ ಮದನಾ. 1995ರ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಶ್ರೀ ಎಚ್.ಡಿ.ದೇವೇಗೌಡ ಅವರು ಭಾರತದ ಪ್ರಧಾನಮಂತ್ರಿ ಆಗುವ ಸುದೈವ ಒದಗಿಬಂತು. ಆಗ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದು ದಿ. ಜೆ.ಎಚ್.ಪಟೇಲ್ ಅವರು. ಪಟೇಲ್ ಮತ್ತು ದೇಶಮುಖ ಅವರಿಗೆ ನಡುವೆ ಇದ್ದ ಗೆಳೆತನವಿತ್ತು. ಮುಖ್ಯಮಂತ್ರಿ ಪಟೇಲ್ ಅವರು ದೇಶಮುಖ ಅವರಿಗೆ ಗೆಳೆಯನಿಗೆ ಕೊಟ್ಟ ಕೊಡುಗೆಯೆಂದರೆ, ವಿಧಾನಸಭೆಯ ಉಪ ಸಭಾಧ್ಯಕ್ಷನ ಸ್ಥಾನ.
ಅವರಿಂದ ಕುತೂಹಲದ ಸಂಗತಿಗಳನ್ನು ಕಳೆದ ಹಲವಾರು ದಿನಗಳಿಂದ ಕೇಳಿಸಿಕೊಂಡಿದ್ದೇನೆ. ಜೊತೆಗೆ ಸಂಗ್ರಹಿಸಿದ್ದೇನೆ. ಅದರ ಪ್ರತಿಫಲವೇ ಇದೆಲ್ಲ.
ಅಂದಿನ ದಿನಗಳ ರೋಚಕ ಕತೆ, ಅನುಭವಗಳು, ಬೇಟೆಯಾಡಿದ ಪ್ರಸಂಗಗಳು, ನಿಗೂಢತೆಯ ಬೆನ್ನು ಹತ್ತಿ ಕತ್ತಲ ರಾತ್ರಿಯ ನೀರವ ಮೌನದಲ್ಲಿ ಬಂದೂಕಿನ ನಳಿಕೆಗೆ ಸಿಗಬೇಕಲ್ಲ ಮೃಗ, ಬೇಟೆಯಾಡುವ ಮುನ್ನ ಅನುಸರಿಸಬೇಕಾದ ತಂತ್ರಗಾರಿಕೆ, ಬೇಟೆಯಾಡಿದ ರೀತಿ, ಪ್ರಾಣ ಕೊಡಲು ಮುಂದೆ ಬರುವಂತೆ ಎದೆಯೊಡ್ಡಿ ಬಂದು ಬಂದೂಕಿನ ನಳಿಕೆಗೆ ಅಣಿಯಾಗುವ ಪ್ರಾಣಿಗಳ ಪರಿ.. ಮುಂತಾದವುಗಳ ರೋಚಕ ಕ್ಷಣಗಳು ನಿಮ್ಮದಾಗಲಿ ಎಂಬುದಕ್ಕಾಗಿಯೇ ಮದನಾ ದೊರೆಯ ಬಯೋಗ್ರಾಫಿಯನ್ನು ಬರೆಯುವುದಕ್ಕೆ ಮನಸ್ಸು ಮಾಡಿದ್ದೇನೆ.
ಅದೊಂದು ನೀರವ ರಾತ್ರಿಯಲ್ಲಿ ಬಂದೂಕಿನ ನಳಿಕೆಯಲ್ಲಿ ಕಂಡಿತ್ತು ಹುಲಿ. ಬೇಟೆಯಾಡಿದರಾ..? ಶಿಕಾರಿ ಆಡುವ ಸಂದರ್ಭದಲ್ಲಿ ದೇಶಮುಖ ಅವರ ಜೊತೆಯಲ್ಲಿ ಯಾರ್ಯಾರು ಹೋಗುತ್ತಿದ್ದರು. ಹೈದ್ರಾಬಾದ್ ಸಂಸ್ಥಾನದ ದೊರೆ ನಿಜಾಮನ ವಂಶಸ್ಥರು ಕೂಡ ಈ ಬೇಟೆಯಲ್ಲಿ ಭಾಗವಹಿಸುತ್ತಿದ್ದರು ಎಂಬ ಸಂಗತಿ ಇದೆ.
ಇದು ನಿಜವಾ..?
ಸೇಡಂ ತಾಲೂಕಿನ ಮದನಾ ಎಂಬುದೊಂದು ಪುಟ್ಟ ಹಳ್ಳಿ. ಅಲ್ಲಿನ ಜನರ ಬಾಯಲ್ಲಿ, ಮನಸ್ಸಲ್ಲೆಲ್ಲಾ `ದೊರಿ’ಯಾಗಿರುವ ಚಂದ್ರಶೇಖರರೆಡ್ಡಿ ದೇಶಮುಖ ಮದನಾ ಅವರ ಹುಲಿ ಬೇಟೆಯ, ಚಿರತೆ ಬೇಟೆಯ, ಕಾಡು ಹಂದಿಗಳ ಬೇಟೆಯ ಕ್ಷಣಗಳನ್ನು ಕಟ್ಟಿಕೊಡುತ್ತಿದ್ದೇನೆ. ಚಂದ್ರಶಿಕಾರಿ ಹೊಸ ಹೊಳಹು ನಿಮಗೆ ನೀಡುತ್ತದೆ. ಹಾಗಂತ ಆತ್ಮವಿಶ್ವಾಸದಿಂದ ಹೇಳಬಲ್ಲೆ.
`ಆ’ ಕಾಲದ ಫೋಟೋಗಳಿವೆ. ಸಹಜ ಕುತೂಹಲ ಇದೆ. ರೋಮಾಂಚನಗೊಳ್ಳುವ ಕಥನವಿದೆ. `ಬೇಟೆ’ಯಾಡಿದ `ಹುಲಿ’ಗಳೊಂದಿಗೆ ಬಂದೂಕಿನ ಫಳಫಳಿಕೆ ಇದೆ. ಅದರ ಬೆನ್ನ ಹಿಂದೆ ನಿಂತು ಫೋಟೋ ಕ್ಕಿಕ್ಕಿಸಿಕೊಂಡವರ ಪೈಕಿ ಹೈದರಾಬಾದಿನ ನಿಜಾಮ ರಾಜಮನೆತನದ ವಂಶಸ್ಥರ ಹೆಣ್ಣುಮಗಳೊಬ್ಬಳಿದ್ದಾಳೆ. ಇಂಥ ಅನೇಕ ಕೌತುಕ ಎನಿಸಬಹುದಾದ ಆ ಕಾಲದ ಫೋಟೋಗಳನ್ನು ಚಂದ್ರ ಶಿಕಾರಿ ಓದುಗ ದೊರೆಗಳಿಗೆ ಕೊಡುವ ಭಾಗ್ಯ ಸಿಕ್ಕಿದ್ದು ನನ್ನ ಸೌಭಾಗ್ಯ.
ಇನ್ನೊಂದು ಮಾತು,
ರೈತರ ಬೆಳೆಗಳನ್ನೆಲ್ಲಾ ಹಾಳು ಮಾಡುತ್ತಿರುವ ಕಾಡುಹಂದಿಗಳ ಕಾಟ ಇನ್ನಿಲ್ಲದಂತೆ ಸಾಕು ಮಾಡಿದೆ. ರೈತ ಬಿತ್ತಿದ್ದ ಬೀಜಗಳ ಬುಡಕ್ಕೆ ಮೂತಿ ಸಿಕ್ಕಿಸಿ, ಬೀಜ ತಿನ್ನುವ ಕಾಡುಹಂದಿಗಳ `ಮಂದೆ’ ರೈತ ಸಮೂಹಕ್ಕೆ ಪರಮಕ್ರೂರಿ ಹಂತಕನಂತೆ ಕಾಣಿಸುತ್ತದೆ. ಇವುಗಳನ್ನು `ಬೇಟೆ’ಯಾಡಲೆಂದೇ ರೈತ ಸಂಕುಲ `ಇವರನ್ನು’ ಸಾಕಷ್ಟು ಬಾರಿ ಮನವಿ ಮಾಡಿಕೊಳ್ಳುತ್ತದೆ. ಈ ಮನವಿಗೆ ಸ್ಪಂದಿಸುವ ಬೇಟೆಗಾರರು ಬರೋಬ್ಬರಿ ಒಂದೇ ರಾತ್ರಿ ಹತ್ತಕ್ಕೂ ಹೆಚ್ಚು ಕಾಡುಹಂದಿಗಳನ್ನು ಬೇಟೆಯಾಡಿ ರೈತನ ಮೊಗಲ್ಲಿ ನಗು ಅರಳಿಸುತ್ತಾರೆ.
ಪಕ್ಕದಲ್ಲಿಯ ಆಂಧ್ರ ಪ್ರದೇಶಕ್ಕೆ ಅಂಟಿಕೊಂಡು ಅಂಗಾತ ಮಲಗಿರುವ ಹೊಲಗಳಲ್ಲಿ ಬಿತ್ತಿದ್ದ ಲಕ್ಷಾಂತರ ಶೇಂಗಾ ಬೀಜಗಳನ್ನು ಉಳಿಸಬೇಕಾಗುತ್ತದೆ. ಪರಮಕ್ರೂರಿ ಕಾಡುಹಂದಿಗಳ ಉಪಟಳದಿಂದ ಬೀಜಗಳನ್ನು ರಕ್ಷಿಸಬೇಕಾಗಿದೆ. ಉಳ್ಳಾಗಡ್ಡಿಯ ಬೆಳೆಯನ್ನೇ ನಾಶ ಮಾಡುವ ಅವುಗಳನ್ನು ಬೇಟೆಯಾಡಬೇಕು. ಆ ಮೂಲಕ ರೈತರನ್ನು ಉಳಿಸಬೇಕಾಗಿದೆ.
ಕಾಡುಹಂದಿಗಳನ್ನು ಮಣಿಸಲಿಕ್ಕೆ, ಅದರ ಕಾಟ ತಪ್ಪಿಸಲಿಕ್ಕೆ, ಬಂದೂಕಿನ ಬೈನಾಕೂಲರ್ನಲ್ಲಿ ನೋಡಿ ಸ್ಟ್ರಿಗರ್ ಒತ್ತಲಿಕ್ಕೆ, ಅದರೊಳಗಿನಿಂದ ಮಹಾಸ್ಪೀಡ್ನಲ್ಲಿ ಕಾಡತೂಸು ಹಾರುವುದಿಕ್ಕೆ, ರೈತ ಸಂಕುಲಕ್ಕೆ ಪೀಡಕವಾಗಿರುವ ಕಾಡುಹಂದಿಗಳ ಎದೆಯ ಭಾಗವನ್ನು ಸೀಳಿಕೊಂಡು ಹೋಗುವುದಕ್ಕೆ, ಕಾಡತೂಸುವಿನ ಹೊಡೆತಕ್ಕೆ ಪ್ರಾಣ ಕಳೆದುಕೊಂಡು ನಿಂತ ಜಾಗದಲ್ಲಿಯೇ ಬಿದ್ದಿರುವ ಕಾಡುಹಂದಿಯನ್ನೊಮ್ಮೆ ನೋಡೋದಿಕ್ಕೆ, ಎಳೆದು ಹಾಕೋದಿಕ್ಕೆ, ಮೊದಲ ಹೊಡೆತಕ್ಕೆ ಬೇಟೆ ಬಲಿಯಾಯಿತಲ್ಲಾ ಎಂದು ಮನಸಾರೆ ಕುಣಿಯೋದಿಕ್ಕೆ, ಇಂಥವುಗಳಲ್ಲಿಯೇ ಆವತ್ತು ಬೆಳದಿಂಗಳ ರಾತ್ರಿಯ ಮಹಾಕೂಟದಲ್ಲಿ ನಾನೂ ಮೈಮರೆತಿದ್ದೆ.
ನಟ್ಟ ನಡುರಾತ್ರಿಯ ನಡುವೆ ಕೈಯಲ್ಲಿ ಬಂದೂಕು ಹಿಡಿದು ಹೊರಟರೆ, ನಮಗೊಂದು ಕುತೂಹಲ. ಈ ಬಟಾ ಬಯಲಲ್ಲಿ ನಡುರಾತ್ರಿಯ ಬೆಳದಿಂಗಳ ಹಾಸಿಗೆಯಲ್ಲಿ ಪರಮಕ್ರೂರಿ ಹಂತಕನಂತೆ ರೈತರನ್ನು ಕಾಣುವ ಈ ಕಾಡು ಮೃಗಗಳನ್ನು ಹುಡುಕುತ್ತ ಅಲೆಯುವುದೆಂದರೆ ಸುಮ್ಮನೆ ಮಾತಲ್ಲ. `ಬೇಟೆ’ ಸಿಗಬಹುದು, ಅಥವಾ ಸಿಗಲಿಕ್ಕಿಲ್ಲ. ಮಹಾ ವೋಲ್ಟೇಜಿನ ಟಾಚರ್್ ಬೆಳಕಿಗೆ ಪೊದೆಗಳಿಂದ ಈಚೆ ಬಾರದೇ ಇರಬಹುದು. ಬಂದೂಕಿನ ಸ್ಪೋಟಕ ಸದ್ದಿಗೆ ತನ್ನ ಮಕ್ಕಳನ್ನು ಬಿಡದೇ ಇರಬಹುದು. ಅದು `ಬೇಟೆ’ಯ ಬದುಕು. ತನ್ನ ಸಂತತಿಯನ್ನು ಕಾಪಾಡುವ ಪರಿ. ಇಷ್ಟೆಲ್ಲದರ ನಡುವೆಯೂ ಶಿಕಾರಿಯ ಸಂದರ್ಭದಲ್ಲಿ ಬಂದೂಕಿನ ನಳಿಕೆಯಿಂದ ಹಾರಿಹೋಗುವ ಕಾಡತೂಸುವಿನ ರಭಸಕ್ಕೆ ಸಿಕ್ಕು ಪ್ರಾಣ ಕಳೆದುಕೊಂಡ ಬೇಟೆಗಳ ಲೆಕ್ಕವೇ ಇಲ್ಲ.







Many more thanks to Respected Mr.Mahipal reddy sir, for publishing our godfathers life story , but from my knowledge it wont covers complete history of their story.
Bheteya hesarinalli kaadu praanigala hatyegaidu avugala alivige kaaranaraadavarannu jailigattabeku.