ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಟರಾಜ್ ಬಗ್ಗೆ ಅನಂತಮೂರ್ತಿ

ananthmurthy.jpgಟರಾಜ್ ಹುಳಿಯಾರ್ ಬಗ್ಗೆ ಪ್ರಾಮಾಣಿಕ ಮೆಚ್ಚುಗೆಯ ಮಾತುಗಳನ್ನು ಓದಿ ಸಂತೋಷವಾಯಿತು. ಒಂದು ಹೊಸ ಕವಿತೆ ಓದಿದರೆ ಒಂದು ಹೊಸ ಕಥೆ ಓದಿದರೆ ಅದರ ಬಗ್ಗೆ ಖುಶಿಯಾಗಿ ನಾವೆಲ್ಲರೂ ಹಿಂದೆ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತ ಇದ್ದೆವು. ಜಗಳವಾಡುತ್ತ ಇದ್ದೆವು. ಸಾಹಿತ್ಯ ಜೀವಂತವಾಗಿತ್ತು. ಅದರಲ್ಲಿ ಸಣ್ಣ ಪೊಲಿಟಿಕ್ಸ್ ಇರಲಿಲ್ಲ. ನಟರಾಜ್ ಅದನ್ನು ನಮ್ಮ ಈ ಕಾಲದಲ್ಲಿ ಮಾಡಬಲ್ಲವ ಎಂದು ನನ್ನ ಭಾವನೆ. “ಗಾಳಿ ಬೆಳಕು” ಓದುವೆ. ಇಷ್ಟವಾದಾಗ ಯಾರಿಗಾದರೂ ಹೇಳುವೆ. ಬರೆಯುವ ಸೋಮಾರಿತನ ನನ್ನನ್ನು ಇನ್ನೂ ಬಿಟ್ಟಿಲ್ಲ. ಕಿರಂನಂತೆ ಮಾತಿನಲ್ಲೇ ಎಲ್ಲ ಸುಖ ಕಾಣುವವನು ನಾನು.

ನಿಮ್ಮ ಬ್ಲಾಗ್ ಚೆನ್ನಾಗಿದೆ.

ಸದ್ಯ ನನ್ನ ಚಿಂತೆಯೆಲ್ಲ ಮೈಸೂರಿನ ಹತ್ತಿರದ ಚಾಮಲಾಪುರ ಎಂಬಲ್ಲಿ ಈ ಸರ್ಕಾರ ಸ್ಥಾಪಿಸಬೇಕೆಂದು ಇರುವ ದರಿದ್ರ ಉಷ್ಣ ಸ್ಥಾವರ ಒಂದರ ಬಗ್ಗೆ. ಸುಮಾರು ಸಣ್ಣ ಪುಟ್ಟ ರೈತರಿಗೆ ದುಡ್ಡಿನ ಆಮಿಷ ಒಡ್ಡಿ ಅವರ ಭೂಮಿ ಕೊಂಡು ಹಾರು ಬೂದಿಯಿಂದ ಇಡೀ ಪರಿಸರವನ್ನು ಮಲಿನ ಮಾಡುವ ಆಸೆ ನಮ್ಮ ಸರ್ಕಾರಕ್ಕೆ ಬಂದಿದೆ.

ಏನೇನೋ ಬರೆದೆ. ಥ್ಯಾಂಕ್ಸ್.

ಡಾ. ಯು ಆರ್ ಅನಂತಮೂರ್ತಿ

‍ಲೇಖಕರು avadhi

11 July, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading