ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಟರಾಜ್ ನನಗೇಕೆ ಇಷ್ಟ?

phani.jpgಲಂಕೇಶ್ ಪತ್ರಿಕೆ ಕಾಲದಿಂದ ನಟರಾಜನ “ಗಾಳಿ ಬೆಳಕು” ಅಂಕಣವನ್ನು ಇಷ್ಟಪಟ್ಟು ಓದಿಕೊಂಡು ಬಂದವರಲ್ಲಿ ನಾನೂ ಒಬ್ಬ. ವರ್ಷಾಂತರಗಳ ಕಾಲ ನಟರಾಜ್ ಬರೆಯದಿದ್ದಾಗಲೂ, ಅವನ ಪುಸ್ತಕದ ಕೆಲವು ಲೇಖನಗಳನ್ನು ನೆನೆಸಿಕೊಂಡು ಓದುತ್ತಿದ್ದೆ. ಬರಹದ ವಿಷಯದಲ್ಲಿ, ನಮಗೆ ಆ ಕ್ಷಣಕ್ಕೆ ಅನಿಸಿದ್ದನ್ನು ನಿಷ್ಠುರವಾಗಿ ಹೇಳುವುದೇ ಪ್ರಾಮಾಣಿಕತೆ ಎಂಬುದು ನನ್ನ ನಂಬಿಕೆ. ನಟರಾಜನ ಬರಹದ ಬಗ್ಗೆ ಇರುವ ವಾಂಛೆಗೂ ಇದೇ ಕಾರಣವಿರಬಹುದು. ಎರಡನೆಯದು, ಎಂದೂ ಉಡಾಫೆಯಾಗದಂತೆ ಉಕ್ಕುವ ತುಂಟತನ ಮತ್ತು “ಪನ್”. ಮೂರನೆಯದು: ಎಷ್ಟೋ ಸಾರಿ ಸಂವಹನೆಯ ಸುಖಕ್ಕಾಗಿ ವಿಷಯವನ್ನು ಹೃಸ್ವಗೊಳಿಸುತ್ತಾನೆ ಅನ್ನಿಸಿದರೂ, ಇದೇ ವಿಷಯದ ಬಗ್ಗೆ “ಒಂದಿಷ್ಟು ಗಹನವಾಗಿ-ಆದರೆ ಸರಳವಾಗಿ, ಚುರುಕಾಗಿ-ಬರೆಯುವುದಿದ್ದರೆ ಬರಿ ನೋಡೋಣ” ಎನ್ನುವ ಆಸೆ-ಆಹ್ವಾನಗಳನ್ನೂ ಹುಟ್ಟಿಸುತ್ತಾನೆ. ತನ್ನ ಕಾಲದ ಬರಹಗಾರರಿಗೆ ಬರೆಯಬೇಕು ಎನ್ನುವ ಕಿಚ್ಚು ಮೂಡಿಸುವ ಬರಹದ ಶಕ್ತಿ ಕಡಿಮೆಯದಲ್ಲ. ಬರೆಯುವ “ಅದೃಷ್ಟ” ಯಾವತ್ತೂ ನಿನಗಿರಲಿ ಗುರುವೇ.

ಕೆ ಫಣಿರಾಜ್

‍ಲೇಖಕರು avadhi

12 July, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading