ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ನಟರಂಗ್” ಮರಾಠಿ ಚಿತ್ರ ಪ್ರದರ್ಶನ ಮತ್ತು ಸಂವಾದ

“ನಟರಂಗ್” ಮರಾಠಿ ಚಿತ್ರ ಪ್ರದರ್ಶನ ಮತ್ತು ಸಂವಾದ

ಕನ್ನಡಿಗರಿಗೆ ಹೊಸತೇ ಎನಿಸುವಂಥಹ ಸಿನಿಮಾ ಕುರಿತ ಕಾರ್ಯಕ್ರಮಗಳನ್ನು ವಿನ್ಯಾಸ ಮಾಡಿ ನಿರ್ವಹಿಸಿರುವ ‘ಸಂವಾದ ಡಾಟ್ ಕಾಂ’ (www.samvaada.com ), ಮರಾಠಿ ಚಿತ್ರ “ನಟರಂಗ” ಪ್ರದರ್ಶನ, ಪ್ರಾದೇಶಿಕ ಸಿನಿಮಾಗಳೆಡೆಗೆ ಕುತೂಹಲ, ಪ್ರೀತಿ ಮೂಡಿಸಬಹುದಾದ ಚರ್ಚಾ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.

ಪ್ರಾದೇಶಿಕತೆ ಹಿನ್ನೆಲೆಯ ಸಿನಿಮಾ ಪ್ರದರ್ಶನ ಸರಣಿಯ ಚಿತ್ರ

ರವಿ ಜಾದವ್ ನಿರ್ದೇಶನದ ಮರಾಠಿ ಚಿತ್ರ ‘ನಟರಂಗ’ (subtitleನೊಂದಿಗೆ)

NATARANG – The film depicts the journey a young artiste in overcoming hurdles in the form of family, friends, and society and to finally realise the unthinkable dream.

ನಟರಂಗ್, ನಾಟಕ, ನೃತ್ಯದ ಅತ್ಯಾಸಕ್ತಿ ಹೊಂದಿದ ಯುವಕನೊಬ್ಬ ತನ್ನದೇ ತಂಡವನ್ನು ಕಟ್ಟಿಕೊಂಡು ಅಸಾಧಾರಣ ಕಷ್ಟಗಳ ನಡುವೆಯೂ ಹೋರಾಡುತ್ತಾ, ತನ್ನನ್ನು ತಾನು ಸಂಭಾಳಿಸಿಕೊಂಡು ಗೆಲ್ಲುವ ಕತೆ. ನಾಟಕ, ನೃತ್ಯ ಇತ್ಯಾದಿಗಳು ಕಥೆಯ ಹಿನ್ನೆಲೆಗೆ ಸಮರ್ಥವಾದ ಹಂದರವನ್ನೊದಗಿಸಿವೆ. ನಾಯಕ ಅತುಲ್ ಕುಲಕರ್ಣಿ ಮತ್ತು ನಾಯಕಿ ಸೊನಾಲಿ ಕುಲಕರ್ಣಿ ಜೋಡಿಯ ನಟನೆ ಗಮನ ಸೆಳೆಯುತ್ತದೆ. ೨೦೧೦ರಲ್ಲಿ ಭಾರೀ ಯಶಸ್ವಿಯಾಗಿ ಜನಮನ್ನಣೆ ಪಡೆದ ಚಿತ್ರ.

ಚಿತ್ರ ಪ್ರದರ್ಶನ ಮತ್ತು ಸಂವಾದಕ್ಕೆ ಮುಂಚಿತವಾಗಿ ಪಾಸ್ ಪಡೆಯುವುದು ಕಡ್ಡಾಯ.

ಪಾಸ್ ಪಡೆಯಲು ಸಂಪರ್ಕಿಸಿ : 99004 39930, 97317 55966

ದಿನಾಂಕ: 14-10-2012, ಭಾನುವಾರ

ಚಿತ್ರ ಪ್ರದರ್ಶನ ಸಮಯ: ಮಧ್ಯಾಹ್ನ 3.00ರಿಂದ

ಸ್ಥಳ: ಔರಾ ಮಾಂಟೆಸ್ಸರಿ ಸಭಾಂಗಣ, ನಂ 49, 1ನೇ ತಿರುವು, ಜೆ ಪಿ ನಗರ 7ನೇ ಹಂತ, ಬೆಂಗಳೂರು – 78

ಗುರುತು: Next to Brigade Millennium and Behind Ever fine Super Market

ಚರ್ಚೆಯಲ್ಲಿ ನಮ್ಮೊಂದಿಗೆ

ಜಯಲಕ್ಷ್ಮಿ ಪಾಟೀಲ್, ಸಿನಿಮಾ, ಕಿರುತೆರೆ ಮತ್ತು ರಂಗಭೂಮಿ ನಟಿ, ಕನ್ನಡ ಮತ್ತು ಮರಾಠಿ

ಸರಸ್ವತಿ, ಲೇಖಕಿ, ಕನ್ನಡ ಮತ್ತು ಮರಾಠಿ

ಶೇಖರಪೂರ್ಣ, ಪತ್ರಕರ್ತರು, ಸಿನಿಮಾ ವಿಮರ್ಶಕರು

ಸಹಯೋಗ: PC Clinic (http://www.facebook.com/theindianpcclinic)

http://www.facebook.com/samvaada

http://www.samvaada.com/

 

‍ಲೇಖಕರು G

13 October, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading