ಇಲ್ಲಿ ‘ರಾಜ’ ಅಂದರೆ ಯಾರು ?
ಪ್ರಜೆ …?
ಪ್ರಭುತ್ವ ?
ಆಡಳಿತಶಾಹಿ ?
ನ್ಯಾಯಾಂಗ ?
ಪೋಲಿಸು ವ್ಯವಸ್ಥೆ ?
ಮಧ್ಯವರ್ತಿಗಳು ?
..ಮಾಧ್ಯಮ ?
………..’ಹುಡುಕಾಟ’ದಲ್ಲಿದ್ದೇವೆ. ಕನ್ನಡ ಸಾಹಿತ್ಯ ಲೋಕದಲ್ಲಿ ಅಪರೂಪದ ಕಥೆ ಎಂದೇ ಬಿಂಬಿತವಾಗಿದ್ದ ,ನಲವತ್ತೊ೦ದು ವರ್ಷಗಳ ಹಿಂದೆಯೇ ರಚಿತವಾಗಿ ಸಂಚಲನ ಮೂಡಿಸಿದ್ದ ಈ ಕಥೆ ಖ್ಯಾತ ಲೇಖಕ ಶ್ರೀ ಎಂ.ಎಸ್. ಕೆ ಪ್ರಭು ಅವರದ್ದು.
ಖ್ಯಾತ ಲೇಖಕಿ ಕುಸುಮ ಆಯರಹಳ್ಳಿ ರಂಗರೂಪಕ್ಕೆ ತಂದಿದ್ದಾರೆ. ಈ ವರುಷದ ಹೊಸ ರಂಗ ವಿದ್ಯಾರ್ಥಿಗಳು ರಂಗಕ್ಕಿಳಿದಿದ್ದಾರೆ.
ಟೀಮ್ ನಟನದ ಈ ಮತ್ತೊಂದು ಪರಿಶ್ರಮಕ್ಕೆ ನೀವು ಬಂದು ನಾಟಕ ನೋಡಿದರೆ, ಮತ್ತಷ್ಟು ಚೈತನ್ಯ.







0 Comments