ಮಂಡ್ಯ ರಮೇಶ್ ಮುತುವರ್ಜಿಯಿಂದ ಕಟ್ಟಿದ ‘ನಟನ’ ಗಟ್ಟಿಯಾಗಿ ನೆಲೆ ನಿಂತಿತು ಎನ್ನುವಾಗಲೇ ಬಂದ ಬಿರುಗಾಳಿ ಬಿರುಗಾಳಿಯಂತ ಸುದ್ದಿ ತಂದಿದೆ. ಮೈಸೂರಿನಲ್ಲಿ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆ, ಗಾಳಿಗೆ ನಟನ ರಂಗ ಮಂಟಪ ತತ್ತರಿಸಿದೆ.
ಮಂಡ್ಯ ರಮೇಶ್ ನಟನದ ಮೂಲಕ ಮಾಡಿದ ಕೆಲಸಗಳು ನಿಮಗೆ ಗೊತ್ತು. ಮೈಸೂರಿನಲ್ಲಿ ಈಗ ಅದೂ ಒಂದು ಹೆಗ್ಗುರುತು. ನಟನ ದ ಸ್ಥಿತಿಯನ್ನು ಬಿಂಬಿಸುವ ಈ ಚಿತ್ರಗಳನ್ನು ರಮೇಶ್ ನೋವಿನಿಂದಲೇ ಕಳಿಸಿಕೊಟ್ಟಿದ್ದಾರೆ.
ನಾವು ಏನು ಮಾಡಬಹುದು ಯೋಚಿಸೋಣ. ನಟನ ಗಟ್ಟಿ ನೆಲೆ ಹೊಂದಲು ನಾವೆಲ್ಲಾ ಕೈ ಜೋಡಿಸಬಹುದು ಅಲ್ಲವೇ?



'ನಟನ'ದ ಹಾಡು ಪಾಡು
ನಿಮಗೆ ಇವೂ ಇಷ್ಟವಾಗಬಹುದು…





thumba bejaraythu photos nodi…. naavu enu madabahudu??
ಸಹೃದಯರೇ, ಸ್ಪಂದನಕ್ಕೆ ಹೃದಯದ ನಮನಗಳು.
`ನಟನ` ಮತ್ತೆ ಕಟ್ಟಲು ನಿಮ್ಮ ಪ್ರತಿಕ್ರಿಯೆ ನಮ್ಮ ಮನಸ್ಸನ್ನು ಮತ್ತಷ್ಟು ಹುರಿದುಂಬಿಸುತ್ತದೆ. `ಅವಧಿ`ಯ ಗೆಳೆಯರಿಗೆ, ಓದುಗರಿಗೆ ಮತ್ತೊಮ್ಮೆ ಧನ್ಯವಾದಗಳು.
ಮಂಡ್ಯ ರಮೇಶ್
ಮತ್ತು
ನಟನ ಬಳಗ