ಮಿಣುಕುಗಳು
ಶ್ರೀಧರ ನಾಯಕ

1
ಹಗಲಲ್ಲಿ
ಕಾಣದ
ನಕ್ಷತ್ರಗಳು
ರಾತ್ರಿಯಲ್ಲಿ
ಮಿನುಗುತ್ತವೆ.
2
ಸೂರ್ಯ
ಕತ್ತಲೆಗೆ
ಹೆದರುತ್ತಾನೆ
ಅದಕ್ಕಾಗಿಯೇ
ರಾತ್ರಿ
ಅವಿತುಕೊಳ್ಳುತ್ತಾನೆ.
ನಕ್ಷತ್ರಗಳಿಗೆ
ಕತ್ತಲೆಯ
ಭಯವಿಲ್ಲ
ಅದಕ್ಕೆಂದೇ
ರಾತ್ರಿ
ಮಿನುಗುತ್ತವೆ
3
ಯಾರು ಹೆಚ್ಚು?
ಕತ್ತಲೆಯಲ್ಲಿ
ಮಿನುಗುವ
ನಕ್ಷತ್ರ
ಯಾ
ಬೆಳಕಲ್ಲಿ
ಉರಿಯುವ
ಸೂರ್ಯ.





ಸುಂದರವಾದ ಸಾಲುಗಳು ಶ್ರೀಧರ….ಸಾಗುತ್ತಿರಲಿ ಹೀಗೆ ಸಾಳುಗಲಾ ಕೃಷಿ ನಿರಂತರ