ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಕ್ಷತ್ರಗಳಿಗೂ ಒಂದು ಕಾಲ

ನಕ್ಷತ್ರಗಳನ್ನು ಕನಸಿದ ಹುಡುಗಿ ರಾಜಲಕ್ಷ್ಮಿ. ದಕ್ಷಿಣ ಕನ್ನಡದ ಕೋಡಿಬೆಟ್ಟು ಈಕೆಯ ನೆಲ. ಕಥೆಗೆ ಕಸುವು ಕೊಟ್ಟ ಜಾಗ. ಕನ್ನಡ ಟೈಮ್ಸ್ ಆಫ್ ಇಂಡಿಯಾದಲ್ಲಿ ಪತ್ರಕರ್ತೆ.
ಕರಾವಳಿಯ ಜಗತ್ತೇ ಹಾಗೆ. ಅಗಾಧ ಕನಸುಗಳನ್ನು ಮುಷ್ಟಿಯಲ್ಲಿಡುತ್ತದೆ. ಅದನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ನಡೆದ ರಾಜಲಕ್ಷ್ಮಿ ಈಗ ‘ಒಂದು ಮುಷ್ಟಿ ನಕ್ಷತ್ರ’ ವನ್ನು ನಮ್ಮ ಕೈಗಿತ್ತಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಮನ್ನಣೆ ಗಳಿಸಿದ ಈ ಕೃತಿಯನ್ನು ಅಭಿನವ ಪ್ರಕಟಿಸಿದೆ.
ಪತ್ರಿಕೋದ್ಯಮವೆಂಬ ಗಿರಣಿಯಲ್ಲಿ ಸಿಕ್ಕಿಹಾಕಿಕೊಂಡ ಬರಹಗಾರರು ಸದ್ದಿಲ್ಲದಂತಾಗಿದ್ದಾರೆ. ಆದರೆ ರಾಜಲಕ್ಷ್ಮಿ ಆ ಗಿರಿಣಿಯ ಮಧ್ಯೆಯೂ ‘ಶಬ್ಧದ ಲಜ್ಜೆ’ಯನ್ನು ಅರಿತಿರುವುದು ಅವರ ಈ ಕೃತಿಯಲ್ಲಿ ಭಿನ್ನವಾಗಿಸಿದೆ.
ರಾಜಲಕ್ಷ್ಮಿ ಕೋಡಿಬೆಟ್ಟುವಿಗೆ ಶುಭಾಷಯ ಹೇಳುತ್ತಾ ಎಲ್ಲರೂ ಈ ಭಾನುವಾರ ಅವರ ಕಥಾ ಸಂಕಲನ ಬಿಡುಗಡೆಗೆ ಹಾಜರಿರೋಣ. ಏಕೆಂದರೆ ಅಂದು ಚಂದ್ರಶೇಖರ ಕಂಬಾರ, ಅಬ್ದುಲ್ ರಶೀದ್, ಎಸ್ ದಿವಾಕರ್ ಅಲ್ಲಿ ಮಾತಿನ ಮಂಟಪ ಕಟ್ಟಲಿದ್ದಾರೆ.
ta-1

‍ಲೇಖಕರು avadhi

1 May, 2009

1 Comment

  1. Kirankumari

    ರಾಜಲಕ್ಶ್ಮಿ ಅವರೆ
    ನಿಮ್ಮ ಕಥಾ ಸ೦ಕಲನದ ಶೀರ್ಷಿಕೆಯ ಅದ್ಬುತವಾಗಿದೆ. ನಿಮ್ಮ ಆಹ್ವಾನಪತ್ರ ನೋಡಿಯೇ ಖ೦ಡಿತಾ ಭಾಗವಹಿಸಬೇಕು ಅ೦ತ ಅನ್ನಿಸ್ತಿದೆ. ಏನೇ ಅಗಲಿ..ನಿಮ್ಮ ಪ್ರಯತ್ನಕ್ಕೆ ನಮ್ಮ ಹಾರ್ದಿಕ ಶುಭಾಶಯಗಳು. ನಿಮ್ಮ ಸ೦ಭ್ರಮದಲ್ಲಿ ನಾವೆಲ್ಲರೂ ಭಾವನಾತ್ಮಕವಾಗಿ ಮತ್ತುಊ ಮಾನಸಿಕವಾಗಿ..ಜೊತೆಗಿರುತ್ತೇವೆ…
    ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading