-ನಿಖಿತಾ ದಾಸರ
ಬಿರ್ರನೆ ಬಿಗಿದ ಬೀಗಗಳು
ಬಡವನ ಮನೆಯ ಬಾಗಿಲು ತಟ್ಟಿರುವೆ,
ಆ ಮನೆಯ ಬೀಗ ಕಳೆದುಹೋಗಿದೆಯೆಂದು ಗೊತ್ತಿದ್ದರು
ಹುಡುಕಿ ಸಿಕ್ಕಿರುವ ಬೀಗವನ್ನಾದರು ಹಾಕಬೇಕೆಂದುಕೊಂಡಿವೆ
ಇಲ್ಲವೆಂದು ತಿಳಿದು ಬೇಸರವಾಯಿತು…
ದೇವರನ್ನು ಕಾಣಲು ಹೋಗುವ ಭಕ್ತರು
ನಂಬುವಂತವರೆ? ಅವರನ್ನ ಹೇಗೆ ನಂಬುವುದು?
ಆದರೆ ಕೊಳಗೇರಿಯ ಜೋಪಡಿಗಳು
ಕಾಣದ ದೇವರನ್ನು ಅಲೆದಾಡುತ್ತಿರುವ
ಅವನ ಭಕ್ತರಲ್ಲಿ ಕಂಡರಂತೆ..
ನಮ್ಮವರ ಬದುಕು ಓಡುತ್ತಿರುವ ರೈಲಿನ ಹಾಗೆ
ನಿಂತ ಜಾಗದಲ್ಲಿ ನಿಲ್ಲದೆ ಇರುವುದು..
ಹೊಟ್ಟೆಪಾಡಿಗಾಗಿ ಕೊಳ್ಳಿಗೆ ಜೋತುಬಿದ್ದ ಜೋಳಿಗೆಗಳು
ಜೋಪಡಿಯ ಮೇಲೆ ಹರಿದು ಬಿದ್ದರೂ
ಸೂರ್ಯನೂ ಈ ಕಡೆ ನೋಡದೆ ಮೋಡದಲ್ಲಿ ಮರೆಯಾಗುತ್ತಾನೆ..
ದಿಕ್ಕಿಲ್ಲದೆ ಹೋದ ಬದುಕು ಅಲಗಾಡಿಸಿ ಬಿಟ್ಟಿದೆ
ಬಿಡು ಅಂದರು ಬಿಡುವಂಥದ್ದು ಅಲ್ಲ..
ಕೊಳಗೇರಿಯ ಗೋರಿಗಳೆ ದೇವಾಲಯವಾಗಿದೆ
ನಕ್ಕಾಗ ಹೂ ಅರಳುವ ಹಾಗೆ
ಅತ್ತಾಗ ಮಳೆ ಸುರಿದ ಹಾಗೆ
ಹಾಲು ಬೆಳ್ಳಗೆ ಕಂಡಿತೆಂದು ಸೇವಿಸಿದರು ರುಚಿ ಹಚ್ಚಿದರೆ ನಾಲಿಗೆಗೆ ಸುಗರು ಬಂದಿತಂತೆ..
ಕಂಡ ಕನಸು..ಕನಸಾಗಿಯೇ ಉಳಿದಾಗ
ಸೂರ್ಯ ಚಂದ್ರನನ್ನು ಭೇಟಿಯಾಗದೆ ಹೋದಂಗಾಯ್ತು…
ಹೂದೋಟವಿದ್ದು ಮೊಗ್ಗು ಅರಳದೆ ಹೋಯಿತಲ್ಲ
ಜೇನು ಗೂಡು ಕಟ್ಟಿರುವುದೆಂದು ಕಂಡು ಸಂತೋಷವಾಯಿತು ..
ಮರು ದಿನ ಕಾಣಲು ಹೋದರೆ
ಯಾರೋ ಕದ್ದುದ್ದನ್ನು ಕಂಡು ಅತಿ ಬೇಸರವಾಯಿತು..
ಹೋಗಿ ಬರುವಷ್ಟರಲ್ಲಿ ಜೀವ ಹೋಗಿದ್ದು..
ಸತ್ತಾಗ ದೇಹ ಪರದೇಶಿಯಾಗಿ ಮಣ್ಣಲ್ಲಿ ಮಣ್ಣಾಗಿ ಹೋದುದು ಕೊಳಗೇರಿಯ ಜೋಪಡಿಗಳೆಲ್ಲ
ನಿಮ್ಮ ಖಯಾಲಿಯ ನಾದಕ್ಕೆ ಕರಿಗಿ ಹೋಗಿದ್ದವು






0 Comments