ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂದಿಯವರೇ, ಭೃಷ್ಟಾಚಾರ ಒಂದು ಜಾತ್ಯಾತೀತವಾದ ಖಯಾಲಿ

-ಡಾ.ಎಸ್.ಬಿ.ಜೋಗುರ

ನಮ್ಮ ಮಾತು ಮನಸಿನ ಕನ್ನಡಿ. ಎಲ್ಲೋ ಒಂದು ಕಡೆ ಅಂತರ್ಯದಲ್ಲಿ ಅದುಮಿಟ್ಟುಕೊಂಡ ಭಾವನೆಗಳು ಯಾವುದೋ ಒಂದು ಗಳಿಗೆಯಲ್ಲಿ ಬಯಲಾಗಿಬಿಡುತ್ತವೆ. ಮಾತು ಆಡಿದರೆ ಹೋಯ್ತು.. ಎನ್ನುವಂತೆ ಹಾಗೆ ಮೂಡಿದ ಮಾತು ಅಲ್ಲಿರುವ ಕೇಳುಗರೆಲ್ಲರಿಗೂ ಹಿತಕಾರಿಯಾಗಿದ್ದರೆ ಸೈ, ಇಲ್ಲದಿದ್ದರೆ ಅಸಹ್ಯವಾಗಿ ಬರುವ ಪ್ರತಿಕ್ರಿಯೆ ಮತ್ತು ಮೂದಲಿಕೆಗಳಿಗಳಿಗೆ ಮೊದಲಾಗಬೇಕಾಗುತ್ತದೆ. ಯಾವುನೋ ಒಬ್ಬ ಅಜ್ಞಾನಿ, ವಿದ್ಯಮಾನಗಳ ಬಗ್ಗೆ ಅರಿವಿರದವನು ಏನೋ ಒಂದನ್ನು ಅತಾಕರ್ಿಕವಾಗಿ ಮಾತನಾಡಿದರೆ ಹೋಗಲಿ ಬಿಡಿ ಅವನ ಸಾಮಥ್ರ್ಯವೇ ಅಷ್ಟು ಎಂದು ಸುಮ್ಮನುಳಿಯಬಹುದು, ಇಲ್ಲವೇ ಉದಾಸೀನಮಾಡಬಹುದು.

ಕಾನರ್ೆಗಿ ಫéಾರೆನ್ ಪಾಲಿಸಿ ಪತ್ರಿಕೆ ಇಡೀ ವಿಶ್ವದ 100 ಜನ ಪ್ರಚಂಡ ಪಂಡಿತರ ಸಾಲಲ್ಲಿ ಆಶಿಸ್ ನಂದಿ ಒಬ್ಬರು ಎಂದು ಗುರುತಿಸಿದೆ. ಹೀಗೆ ಗುರುತಿಸಿಕೊಂಡಾತನ ಮನಸಿನ ಮಾತು ನಾಲಿಗೆಯ ಮೇಲೆ ಮೂಡಿದ್ದೇಯಾದರೆೆ ಬರಬಹುದಾದ ಪ್ರತಿಕ್ರೆಯೆಗಳಿಗೆ ಆತ ಸಿದ್ಧನಾಗಿರಬೇಕು. ಮನ:ಶಾಸ್ತ್ರಜ್ಞ ಮತ್ತು ಸಮಾಜಶಾಸ್ತ್ರಜ್ಞನಾಗಿರುವ ಆಶಿಸ್ ನಾಂದಿ ನೆನ್ನೆಯಷ್ಟೇ ಒಂದು ಸಂದರ್ಭದಲ್ಲಿ ಮಾತನಾಡುತ್ತಾ ಈ ದೇಶದ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಜನಾಂಗಗಳ ಜನ ಹೆಚ್ಚು ಭ್ರಷ್ಟರು ಎಂದು ಹೇಳಿಕೆ ನೀಡಿ, ಎಫé್.ಆಯ್.ಆರ್ ದಾಖಲಾಗಿ ನಾನು ಹಾಗೆ ಹೇಳಲಿಲ್ಲ, ನನ್ನ ಉದ್ದೇಶ ಅದಾಗಿರಲಿಲ್ಲ ಎಂದು ತಡವರಿಸುವ ಸನ್ನಿವೇಶ ಎದುರಾದದ್ದು ವಿಷಾದನಿಯ.

ಅಷ್ಟಕ್ಕೂ ಈ ಸಮಾಜಶಾಸ್ತ್ರಜ್ಞನಿಗೆ ಅಪಾರ ಪಾಂಡಿತ್ಯವಿದೆ. ವಿದ್ವತ್ ವಲಯದಲ್ಲಿ ಒಳ್ಳೆಯ ಹೆಸರಿದೆ. ಅನೇಕ ಶ್ರೇಷ್ಟವಾದ ಕೃತಿಗಳನ್ನು ಬರೆದು ಹೆಸರು ಮಾಡಿರುವದಿದೆ. ಇಡೀ ದೇಶದ ಸಾಮಾಜಿಕ ವ್ಯವಸ್ಥೆಯ ಅರಿವೂ ಇದೆ. ಇವಾವವೂ ಇಲ್ಲ ಎನ್ನುವಂತೆ ಒಬ್ಬ ಜನಸಾಮಾನ್ಯನ ಹಾಗೆ ಮಾತನಾಡಿ ವಿವಾದಕ್ಕೆ ಸಿಲುಕಿಕೊಂಡದ್ದು ಅಚ್ಚರಿ ಹಾಗೂ ಸತ್ಯ. ಸ್ವಾತಂತ್ರ್ಯಪೂರ್ವದ ಸನ್ನಿವೇಶ ಬಿಡಿ, ಸ್ವಾತಂತ್ರ್ಯೋತ್ತರ ಭಾರತದಲ್ಲಿಯೂ ಯಾವ ಯಾವ ಜಾತಿಯ ಜನ ಆಯಕಟ್ಟಿನ ಪ್ರಬಲ ಹುದ್ದೆಗಳಲ್ಲಿದ್ದಾರೆ ಮತ್ತು ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿ ದಾಖಲಾದವರ ಪ್ರಮಾಣವನ್ನು, ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಮಾತನಾಡದೇ ಹೀಗೆ ಮನದ ಮೂಲೆಯಲಿರುವ ಪೂವರ್ಾಗ್ರಹವನ್ನು ಬಹಿರಂಗಗೊಳಿಸಿರುವದು ಸರಿಯಲ್ಲ.

ಅಷ್ಟಕ್ಕೂ ಈ ದೇಶದ ಪ್ರಮುಖ ಮತ್ತು ಅಧಿಕಾರ ಕೇಂದ್ರಿತ ಹುದ್ದೆಗಳನ್ನು ಹೆಚ್ಚಾಗಿ ಇವತ್ತಿನವರೆಗೂ ಅನುಭವಿಸುತ್ತಾ ಬಂದವರು ಮೇಲ್ಜಾತಿಗಳೇ.. ಇದನ್ನೂ ಕೂಡಾ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ನಂದಿಯವರು ನೋಡಬೇಕಿತ್ತು. ನಂದಿಯವರು ಹಾಗೆ ಮಾತನಾಡಿದ್ದು ಖಂಡಿತವಾಗಿಯೂ ತಪ್ಪು. ಯಾಕೆಂದರೆ ಭೃಷ್ಟಾಚಾರ ಎನ್ನುವದು ಪಕ್ಕಾ ಜಾತ್ಯಾತೀತ ಗುಣ. ಅದಕ್ಕೆ ಜಾತಿ, ಧರ್ಮ, ಜನಾಂಗ, ಪ್ರದೇಶಗಳ ಹಂಗಿಲ್ಲ. ಹೆಚ್ಚಂದರೆ ಪ್ರಮಾಣದಲ್ಲಿ ವೈಪರೀತ್ಯಗಳಿರಬಹುದು. ತೆಹೆಲ್ಕಾ ಪತ್ರಿಕೆಯ ತರುಣ ತೇಜಪಾಲ್ ಮಾತಿಗೆ ಪ್ರತಿಕ್ರಿಯಿಸಲು ಹಾಗೆ ಹೇಳಿದೆ ಎನ್ನುವ ಆಶಿಸ್ ನಂದಿಯವರ ಮಾತು ಸಮರ್ಥನೀಯವಲ್ಲ. ಕೋಲ್ಕತ್ತಾದ ಉದಾಹರಣೆಯನ್ನು ಎತ್ತಿಕೊಂಡು ಅಲ್ಲಿ ಕಮ್ಯುನಿಷ್ಟ ಸರಕಾರ ಇರುವ ನೂರು ವರ್ಷದ ಅವಧಿಯಲ್ಲಿ ಕೆಳಜಾತಿಯವರು ಬಹುತೇಕವಾಗಿ ಅಧಿಕಾರದಲ್ಲಿ ಇರಲಿಲ್ಲ. ಹೀಗಾಗಿ ಅಲ್ಲಿ ಒಟ್ಟಾರೆ ಭೃಷ್ಟಾಚಾರವಿರಲಿಲ್ಲ ಎನ್ನುವ ಮಾತಿಗೂ ಈಗ ಅವರು ಹೇಳಿದ ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡದ ಜನ ಹೆಚ್ಚು ಭೃಷ್ಟಾಚಾರಿಗಳಾಗಿರುತ್ತಾರೆ ಎನ್ನಲಿಕ್ಕೂ ಯಾವುದೇ ತಾಕರ್ಿಕವಾದ ಆಧಾರಗಳಿಲ್ಲ.

18 ನೇ ಶತಮಾನದಲ್ಲಿ ಫé್ರೆಂಚ್ ದೇಶದಲ್ಲಿ ಪ್ರೌಧಾನ್ ಎನ್ನುವ ಒಬ್ಬ ಚಿಂತಕನಿದ್ದ. ಅವನ ಮಾತು ಮಾಕ್ಸರ್್ ರಂತಹ ಚಿಂತಕರ ಮೇಲೆ ನೇರವಾಗಿ ಪ್ರಭಾವಬೀರಿರುವದಿತ್ತು. ಪ್ರೌಧಾನ್ ಮತ್ತೆ ಮತ್ತೆ ‘ಎಲ್ಲ ಸಂಪತ್ತು ಕಳುವಿನ ಸ್ವತ್ತು’ ಎಂದು ಹೇಳುತ್ತಿದ್ದ. ಒಂದರ್ಥದಲ್ಲಿ ಅದು ನಿಜವಿರಬಹುದು. ಆದರೆ ಜಾತಿಯನ್ನಿಟ್ಟುಕೊಂಡು ಭ್ರಷ್ಟಾಚಾರವನ್ನು ಅಳೆಯಹೊರಟ ನಂದಿಯವರ ಮನ:ಸ್ಥಿತಿಯ ಬಗ್ಗೆ ಮರುಕವೆನಿಸುತ್ತದೆ. ನಂದಿಯವರು ತಮ್ಮ ‘ಇಂಟಿಮೇಟ್ ಎನಿಮಿ’ ಎನ್ನುವ ಕೃತಿಯೊಂದರಲ್ಲಿ ವಸಾಹತುಶಾಹಿ ಹೇಗೆ ಭಾರತೀಯ ಸಮಾಜವನ್ನು ಬೇರೆ ಬೇರೆ ರೀತಿಯಿಂದ ಬೆಂಡಾಗಿಸುತ್ತಾ ಬಂತು ಎನ್ನುವದನ್ನು ಹೇಳುತ್ತಾರೆ. ಹಾಗೆಯೇ ಒಂದು ಕೃತಿಯ ಲೇಖಕನ ಮಾತನ್ನು ಯಾರೂ ನಂಬುವ ಅವಶ್ಯಕತೆಯಿಲ್ಲ. ಕೇಳುತ್ತಾ ಹೊರಟರೆ ನನ್ನ ಕೃತಿ ಹಾಗಿದೆ..ಹೀಗಿದೆ.. ಅದನ್ನು ಬರೆಯುವಾಗ ಹೀಗಾಯ್ತು.. ಹಾಗಾಯ್ತು ಎಂದೆಲ್ಲಾ ಹೇಳುತ್ತಾ ಹೋಗುತ್ತಾರೆ. ವಸ್ತು ಸ್ಥಿತಿ ಏನೆಂದರೆ ಒಂದು ಕೃತಿ ತನ್ನಷ್ಟಕ್ಕೆ್ಕೆ ತಾನೇ ಕಾಲು ಭಾಗ ಬರೆಯಿಸಿಕೊಂಡಿರುತ್ತದೆ ಎನ್ನುವಷ್ಟು ಖರೆ ಖರೆ ಮಾತನಾಡಿರುವ ಆಶಿಸ್ ನಂದಿ ಈ ಭೃಷ್ಟಾಚಾರದ ಬಗ್ಗೆ ಮಾತನಾಡುವಾಗ ಮಾತ್ರ ಯಾಕೆ ಹೀಗೆ ಅರಾಮ ಖುಚರ್ಿಯ ತತ್ವಜ್ಞಾನಿಯ ಹಾಗೆ ಹೇಳಿಕೆಯನ್ನು ಕೊಟ್ಟ..? ಎನ್ನುವದೇ ಒಂದು ದೊಡ್ಡ ಜಿಜ್ಞಾಸೆ.
ಸಾವಿರಾರು ವರ್ಷಗಳಿಂದ ಶೋಷಿತ ಸಮುದಾಯಗಳಾಗಿ ಗುರುತಿಸಿಕೊಂಡ ಜಾತಿಗಳು ಮಿಕ್ಕೆಲ್ಲ ಜಾತಿಗಳಿಗಿಂತ ಭ್ರಷ್ಟರಾಗುವದು ಸಾಧ್ಯವೇ ಇಲ್ಲ. ಹೆಚ್ಚೆಂದರೆ ಸಾಮಾಜಿಕ ಅಂತಸ್ತಿನ ಹಂಬಲದಲ್ಲಿ, ಜಾತಿಯ ಏಣಿ ಶ್ರೇಣಿಯಲ್ಲಿ ತಾವೂ ಸಂಚಲನೆ ಹೊಂದಬೇಕೆಂಬ ಬಯಕೆಯಿಂದ ಮೇಲಿನ ಜಾತಿಗಳ ಧಾಮರ್ಿಕ ಆಚರಣೆಗಳನ್ನು ಅನುಸರಿಸುವ ಮೂಲಕ, ಸಂಸ್ಕೃತಾನುಕರಣಗೊಳ್ಳ್ಲಬಹುದೇ ಹೊರತು ಭ್ರಷ್ಟರಾಗಲಾರರು. ಈಗಾಗಲೇ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿ ಜೈಲಲ್ಲಿರುವವರು, ಮತ್ತು ಆರೋಪವನ್ನು ಎದುರಿಸುತ್ತಿರುವವರ ಅಂಕಿ ಅಂಶಗಳನ್ನು ನಂದಿಯವರು ಕಲೆ ಹಾಕಿ ಯಾವ ಯಾವ ಜಾತಿಯ ಜನ ಎಷ್ಟೆಷ್ಟು ಭ್ರಷ್ಟಾಚಾರದ ಆಪಾದನೆಯಲ್ಲಿ ಸಿಲುಕಿದ್ದಾರೆ ಎನ್ನುವದನ್ನು ಮುಂದಿಟ್ಟುಕೊಂಡು ಮಾತನಾಡಿದರೆ ಅದು ಬೇರೆ.
ಹೀಗೆ ಸಾರಾಸಗಟಾಗಿ ಯಾವದೋ ಒಂದಷ್ಟು ಜಾತಿಗಳನ್ನು ಆರೋಪಿಸಿ ಮಾತನಾಡಿರುವದು ಸರಿಯಲ್ಲ. ದೇಶದ ಅಭಿವೃದ್ಧಿಯ ಹಣವನ್ನು ಲೂಟಿ ಮಾಡಿ, ವಿದೇಶದ ಬ್ಯಾಂಕುಗಳಲ್ಲಿ ಕಪ್ಪು ಹಣ ಇಟ್ಟವರ ಸಾಲಲ್ಲಿ ಬಹುಷ: ನಂದಿಯವರು ಹೆಳುವ ಜಾತಿಗಳು ಬರಲಿಕ್ಕಿಲ್ಲ. ಸುಮಾರು 25 ಲಕ್ಷ ಕೋಟಿ ಕಪ್ಪು ಹಣ ವಿದೇಶದ ಬ್ಯಾಂಕುಗಳಲ್ಲಿ ಕೊಳೆಯುತ್ತಿರುವ ಬಗ್ಗೆ ಚಚರ್ೆಗಳು ನಿರಂತರವಾಗಿವೆ. ಅವುಗಳ ಮೂಲವನ್ನು ಶೋಧಿಸಿ ಅವು ಯಾರಿಗೆ ಸಂಬಂಧಿಸಿವೆ ಎನ್ನುವ ಮಾಹಿತಿಯನ್ನು ನಂದಿಯವರು ಕಲೆಹಾಕಬೇಕು. ಹಾಗೆಯೇ ಈಗಾಗಲೇ ಭ್ರಷ್ಟಾಚಾರದಲ್ಲಿ ಸಿಲುಕಿ ಚಾಚರ್್ ಸೀಟ್ ಆದವರ ಜಾತಿಯನ್ನು ಸಮಗ್ರವಾಗಿ ಸಮೀಕ್ಷೆ ಮಾಡಿ ಯಾವ ಜಾತಿಯವರು ಎಷ್ಟು ಪ್ರಮಾಣದ ಭೃಷ್ಟಾಚಾರ ಎಸಗಿದ್ದಾರೆ ಎನ್ನುವದನ್ನು ನಂದಿಯವರು ಖಚಿತವಾಗಿ ಮಾತನಾಡಬೇಕಿತ್ತು. ಊಹೆ, ತರ್ಕಗಳು ಅಂತಿಮ ಸತ್ಯಗಳಲ್ಲ.

‍ಲೇಖಕರು G

28 January, 2013

3 Comments

  1. Dr.kiran.m gajanur

    ಪುಸ್ತಕದಲ್ಲಿ ಮುದ್ರಿತವಾಗಿರುವ ಮೇಲ್ವರ್ಗದ ಆಲೋಚನೆಗಳನ್ನು ನಮ್ಮ ಸಮಾಜದ ವಾಸ್ತವ ಅಂದುಕೊಂಡಿರುವ ಇ ಮೇಲ್ವರ್ಗದ ವಿ.ವಿ ಗಳಲ್ಲಿ ಕಲಿತ ಮತ್ತು ಕಲಿಸುತ್ತಿರುವ ಅದ್ಯಾಪಕರ ಮಾನಸಿಕ ಸ್ಥಿತಿ ಹಿಗೆಯೇ ಇದೆ ಆಶೀಶ್ ನಂದಿಯಂಥವರ ಹೇಳಿಕೆಗಳಿಗೆ ಮತ್ತು ಅವರ ಮಾನಸಿಕ ಸ್ಥಿತಿಗೆ ಒಂದು ಸಂತಾಪ ಸೋಚಿಸಿ ನಕ್ಕು ಮುಂದೆ ಹೋಗಬಹುದೇ ಹೊರತು ಇನ್ನೇನು ಮಾಡಲಾಗದು ಇಂಥಹ ಸಣ್ಣ ಮನಸ್ಸಿನ ಹೇಳಿಕೆಗಳನ್ನು ಒಂದು ಬಹಳ ದೊಡ್ಡ ಬೌದ್ದಿಕ ವಾದದ ರೀತಿ ಬೆಳೆಸುತ್ತಿರುವ್ವವರಿಗೆ ನನ್ನ ಧಿಕ್ಕಾರ . . . .

  2. ಸಿ ಪಿ ನಾಗರಾಜ

    “ಆಶೀಶ್ ನಂದಿಯಂಥವರ ಹೇಳಿಕೆಗಳಿಗೆ ಮತ್ತು ಅವರ ಮಾನಸಿಕ ಸ್ಥಿತಿಗೆ ಒಂದು ಸಂತಾಪ ಸೋಚಿಸಿ ನಕ್ಕು ಮುಂದೆ ಹೋಗಬಹುದೇ ಹೊರತು ಇನ್ನೇನು ಮಾಡಲಾಗದು ” ಕಿರಣ್ ಎಂ ಗಾಜನೂರ್ ಅವರ ಪ್ರತಿಕ್ರಿಯೆ ಓದಿ , ಅಚ್ಚರಿಗಿಂತ ಹೆಚ್ಚಾಗಿ ಆತಂಕವಾಯಿತು . ಹಿಂದುಳಿದ ಮತ್ತು ದಲಿತ ಸಮುದಾಯಗಳ ಆತ್ಮಗೌರವಕ್ಕೆ ಹಾನಿಯನ್ನುಂಟು ಮಾಡುವ ಈ ಬಗೆಯ ಹೇಳಿಕೆಯನ್ನು ಓದಿದಾಗ ಇಲ್ಲವೇ ಕೇಳಿದಾಗ ನಕ್ಕು ಸುಮ್ಮನಾಗುವುದಾದರೇ , ನಾವು ಓದುವ , ಚಿಂತಿಸುವ , ಬರೆಯುವ , ಮಾತನಾಡುವ ಕೆಲಸಗಳನ್ನೇಕೆ ಮಾಡಬೇಕು .
    “ಬಹಳ ದೊಡ್ಡ ಬೌದ್ದಿಕ ವಾದದ ರೀತಿ ಬೆಳೆಸುತ್ತಿರುವ್ವವರಿಗೆ ನನ್ನ ಧಿಕ್ಕಾರ . . . .” ಎಂಬ ಈ ಬಗೆಯ ಪ್ರತಿಕ್ರಿಯೆಯಂತೂ ಆಶಿಷ್ ನಂದಿಯವರ ಮಾತುಗಳಿಗಿಂತಲೂ ಕ್ರೂರವಾಗಿವೆ . ಇತರರ ವಿಚಾರಗಳನ್ನೇ ತಿಳಿಯಲು ನಿರಾಕರಿಸುವ ಕಿರಣ್ ಎಂ ಗಾಜನೂರ್ ಅವರು “ಎಲ್ಲರೂ ಮೌನದಿಂದಿರಬೇಕೆಂದು ” ಆಜ್ಞಾಪಿಸುವಂತಿದೆ .
    ಸಿ ಪಿ ನಾಗರಾಜ
    ಬೆಂಗಳೂರು .

  3. Dr.kiran.m gajanur

    ಸಿ ಪಿ ನಾಗರಾಜ ಅವರೆ ನಿಮ್ಮ ಪ್ರತಿಕ್ರೀಯೇಗೆ ಧನ್ಯವಾದಗಳು ಇ ದೇಶದ ದಲಿತರಿಗೆ ಅವಮಾನ ಎಂಬುದು ಇಂದು ನಿನ್ನೆಯದಲ್ಲ ನನ್ನ ಹೇಳಿಕೆಯ ಉದ್ದೇಶ ನಂದಿಯಂತವರ ಮನಸ್ಥಿತಿಯವರ ಹೇಳಿಕೆಗಳನ್ನು ಬಹಳ ಗಂಭಿರವಾಗಿ ಪರಿಗಣಿಸಿ ಅದಕ್ಕೆ ಪ್ರತಿಕ್ರೀಯೆ ನೀಡುತ್ತಾ ಕುಳಿತರೆ ಯಾವ ಪ್ರಯೋಜನವು ಇಲ್ಲ ದಲಿತರನ್ನು ಉದ್ಧರಿಸಲು ಈ ವಾದಗಳು ಯಾವ ರೀತಿಯಲ್ಲಿಯು ಸಹಕರಿಸುವುದಿಲ್ಲ ಇದರ ಬದಲಾಗಿ ದಲಿತರ ಎಳಿಗೆಗೆ ಅವರ ಸ್ವಾಭಿಮಾನಯುತ ಬದುಕುವ ವಾತವರಣ ನಿರ್ಮಾಣಕ್ಕೆ ನಾವು ಮಾಡಬೇಕಾದ ಕೆಲಸ ಬಹಳಷ್ಷಿದೆ ಅದರ ಕುರಿತು ಗಮನ ಹರಿಸುವ ಅಸ್ಷೆ ಹಾಗೆ ನೋಡುವುದಾದೆ ಭ್ರಾಹ್ಮಣರ, ಬ್ರಾಹ್ಮಣಶಾಹಿಯ ಕುರಿತು ತೇಗಳುವ ನೊರು ಹೇಳಿಕೆಗಳು ದಿನನಿತ್ಯ ದಾಖಲಾಗುತ್ತವೆ ಅದನ್ನು ಅವರು ಗಂಬಿರಾಗಿ ಪರಿಗಣಿಸುವುದು ಇಲ್ಲ ಪ್ರತಿಕ್ರೀಯಿಸುವುದು ಇಲ್ಲ. . . ನಮಗೆ ಮಾಡಲು ಬೇಕಾದಷ್ಷು ಕೆಲಸವಿದ್ದಾಗ ಯಾಕೆ ಈ ಮಾದರಿಯ ಹೇಳಿಕೆಗಳಿಗೆ ಪ್ರತಿಕ್ರೀಯಿಸಿ ಕೆಲಸಕ್ಕೆ ಬಾರದ ಹೇಳಿಕೆಗೆ ಒಂದು ಘನ ಭೌಧ್ಧಿಕ ಸ್ಶಾನ ನೀಡುತ್ತಿದ್ಧೇವೆ ಎಂಬುದಷ್ಟೆ ನನ್ನ ಉದ್ದೇಶ ಅಲ್ಲದೆ ಮೌನವು ಮಾತಿಗಿಂತ ಬಹಳ ಒಂದು ದೊಡ್ಡ ಅಸ್ತ್ರ ಎಂಬುದನ್ನು ನಾವು ಮರೆಯಬಾರದು ಅಲ್ಲವೆ. . . ಶಬ್ದಗಳ ನಡುವಿನ ಮೌನವೇ ಆ ಶಬ್ದಗಳಿಗೆ ನಿಜವಾದ ಶಕ್ತಿ ತುಂಬುವುದು ಅನ್ನುವುದ ನನ್ನ ನಂಬಿಕೆ. . . .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading