ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇಶ ಸರ್ಕಸ್ ಕಂಪೆನಿಯ ಹಾಗೆ ಕಾಣ್ತಿದೆ…!!

 

ಪಲ್ಲವಿ ಐದೂರು

ನಮ್ಮೂರಲ್ಲಿ ನಾವು ಚಿಕ್ಕವರಿದ್ದಾಗ ಅಕ್ಕ ಪಕ್ಕದ ಮನೆಗಳಲ್ಲಿ ಮಳೆಗಾಲದಲ್ಲಿ ಹುರುಳಿಕಾಳು ಕೆಜಿಗಟ್ಟಲೆ ಬೇಯಿಸ್ತಿದ್ದರು.. ಎತ್ತುಗಳಿಗೆ ಅಂತ… ನಮ್ಮನೇಲಿ ಅದರ ಕಟ್ಟು ಸ್ವಲ್ಪ ತರಿಸಿಕೊಂಡು ಹುರುಳಿ ಕಟ್ಟಿನ ಸಾರು ಮಾಡ್ತಿದ್ದರು.. ನಾನು ಕೇಳ್ತಿದ್ದೆ, ಹುರುಳಿಕಟ್ಟಿನ ಸಾರು ತಿನ್ನೋಕೆ ನಾವೇನು ಎತ್ತು ಕೋಣನಾ? ಮನುಷ್ಯರು ಅಂತ…!

ಯಾಕೆ ನೆನಪಾಯ್ತು ಅಂದರೆ, ಉತ್ತರ ಪ್ರದೇಶದ 50 ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷದಿಂದ ಬರಗಾಲವಂತೆ.. ಈಗ ಅದು ಯಾವ ಹಂತಕ್ಕೆ ತಲುಪಿದೆ ಅಂದರೆ, ಅಲ್ಲಿನ ಜನ ಹಸುಗಳು ತಿನ್ನುವ ಹುಲ್ಲನ್ನು ಕುಟ್ಟಿ ಪುಡಿಮಾಡಿ ರೊಟ್ಟಿ ಮಾಡ್ಕೊಂಡು ತಿಂತಿದ್ದಾರಂತೆ…!!

ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿ ಹೊಂದಿರುವ ಪ್ರಧಾನ ಮಂತ್ರಿಯನ್ನು ಆರಿಸಿದ ರಾಜ್ಯ ಅದು…!! ಇವತ್ತು ದಿನ ಪತ್ರಿಕೆಯ ಮುಖಪುಟ ನೋಡಿದರೆ ಬರೀ ವಿದೇಶೀ ಬಂಡವಾಳದ ಸುದ್ದಿ… ಒಳಪುಟದಲ್ಲಿ ನೋಡಿದರೆ ಅತಿವೃಷ್ಟಿ ಅನಾವೃಷ್ಟಿ ಬಡತನ ಹಸಿವು ಅನಕ್ಷರತೆ…!!! ದೇಶದ ಉತ್ತರ ತುದಿಯಲ್ಲಿ ಮಳೆಯಿಲ್ಲದ ನೋವು .. ದಕ್ಷಿಣ ತುದಿಯಲ್ಲಿ ಮಳೆಯಿಂದ ನೋವು…!!

ಮಿಕ್ಕಿದ್ದೆಲ್ಲವೂ ಬದಿಗಿಟ್ಟು ತುರ್ತಾಗಿ ನಮ್ಮ ಜನರಿಗೆ ಅಕ್ಷರ ಜ್ಞಾನ ಕೊಡಬೇಕಿದೆ.. ಕೊನೇ ಪಕ್ಷ ಸರ್ಕಾರ ಕೊಡುವ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿಯಾದರೂ…!!! ದೇಶ ಸರ್ಕಸ್ ಕಂಪೆನಿಯ ಹಾಗೆ ಕಾಣ್ತಿದೆ…!!

ಟಿಕೆಟ್ ತಗೊಂಡು ಶೋ ನೋಡಿದರೆ ನಾಯಿಗೂ ಚಮಕ್ ಚಮಕ್ ಬಟ್ಟೆ… ಒಳಗೆಲ್ಲ ಲೊಳಲೊಟ್ಟೆ …!!!

‍ಲೇಖಕರು admin

9 December, 2015

1 Comment

  1. ಶಮ, ನಂದಿಬೆಟ್ಟ

    ಚೆಂದ ಬರೆದಿದ್ದೀ ಕಣೆ… ಸಂವೇದನೆ ವೇದನೆ ಎರಡೂ ಸ್ಪಷ್ಟ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading