ಆತ್ಮೀಯರೇ,
ನಮಸ್ಕಾರ. ಈ ಮೂಲಕ ಹೊಸದಾಗಿ ಪ್ರಾರಂಭಿಸಿರುವ ನಮ್ಮ ಬನವಾಸಿ ಅಂತರ್ ಜಾಲ ತಾಣದ ಫೇಸ್ ಬುಕ್ ಕೊಂಡಿ ಕಳಿಸುತ್ತಿದ್ದೇವೆ. ನಮ್ಮ ಬನವಾಸಿಯ ಹೊಸ ವಿವರಗಳ ಸೇರ್ಪಡೆಗಳನ್ನು ತಕ್ಷಣದಲ್ಲಿ ಪಡೆಯಲು ಇದಕ್ಕೆ ಸ್ನೇಹಿತರಾಗುವ ಮೂಲಕ ಚಾಲನೆ ನೀಡಬೇಕೆಂದು ಕೇಳಿಕೊಳ್ಳುತ್ತೇವೆ.
ಹಾಗೆ ಈ ಮೂಲಕ ನಾವು ದೇವನೂರ ಮಹಾದೇವ ಅವರ ಕುರಿತು ಪ್ರಾರಂಭಿಸಿರುವ ವೆಬ್ ವಿಳಾಸವನ್ನು ಕಳಿಸುತ್ತಿದ್ದೇವೆ. http://www.nammabanavasi.com/ ಈಗಿನ್ನೂ ಇದು ಹನ್ನೊಂದು ತಿಂಗಳ ಕೂಸು. ಇದು ಇನ್ನೂ ಮೊದಲ ಹೆಜ್ಜೆ. ಇನ್ನಷ್ಟು ವಿವರಗಳನ್ನು ಅಳವಡಿಸುತ್ತಾ ಹೋಗಬೇಕಿದೆ. ಜೊತೆಗೆ ನಾಡಿನ ತವಕ ತಲ್ಲಣ ಕನಸುಗಳಿಗೆ ದನಿಯಾಗುವ ಆಶಯವೂ ಇದಕ್ಕಿದೆ. ನಿಮ್ಮ ಮಿತ್ರ ಬಳಗದೊಂದಿಗೆ ಈ ಹೊಸ ಜಾಲತಾಣದ ಕೊಂಡಿ ಹಂಚಿಕೊಂಡು ಇದರ ವಿಸ್ತಾರ ಹೆಚ್ಚಿಸಿ. ಜೊತೆಗೆ ನಿಮ್ಮ ಸಲಹೆ, ಸಹಕಾರ, ವಿಶ್ವಾಸವೂ ಈ ಜಾಲತಾಣಕ್ಕೆ ಇರಲೆಂಬ ಆಶಯದೊಂದಿಗೆ, ನಿಮ್ಮ ಅಭಿಪ್ರಾಯದ ನಿರೀಕ್ಷೆಯಲ್ಲಿ….
ನಿಮ್ಮ ವಿಶ್ವಾಸಿಗಳಾದ,
ಬನವಾಸಿಗರು





0 Comments