ದುಬೈನಲ್ಲೊಂದು ಕನ್ನಡ ನಾಟಕ. ‘ಅವಧಿ’ಯನ್ನು ಆರಂಭದಿಂದಲೂ ಪ್ರೀತಿಯಿಂದ ಓದುತ್ತಿರುವ ಪ್ರಕಾಶ್ ಪಯ್ಯಾರ್ ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರು ನಿರ್ದೇಶನಕ್ಕಾಗಿ ಕೈಗೆತ್ತಿಕೊಂಡಿರುವುದು ಗಿರೀಶ್ ಕಾರ್ನಾಡ್ ಅವರ ‘ಹಯವದನ’ವನ್ನು.
ಧ್ವನಿ ಪ್ರತಿಷ್ಠಾನ ಈ ನಾಟಕವನ್ನು ಅಭಿನಯಿಸಲಿದೆ. ಇಂಡಿಯನ್ ಕಾನ್ಸ್ಯುಲೇಟ್ ಸಭಾಂಗಣದಲ್ಲಿ ನಾಟಕದ ಪ್ರದರ್ಶನ. ಈ ಹಿಂದೆ ‘ನಾಗಮಂಡಲ’ವನ್ನೂ ನಿರ್ದೇಶಿಸಿದ್ದ ಪಯ್ಯಾರ್ ಅವರು ಮೂಡಬಿದ್ರೆಯಿಂದ ರಂಗದ ಆಸಕ್ತಿಯನ್ನು ಬೆಳೆಸಿಕೊಂಡವರು. ಮಹಾವೀರ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ‘ಅಕ್ಕ ತಂಗಿಯರೇ, ಅಣ್ಣ ತಮ್ಮಂದಿರೆ’ ನಾಟಕವನ್ನು ನಿರ್ದೇಶಿಸಿದರು. ಅಲ್ಲಿಂದ ಇಲ್ಲಿಯವರೆಗೆ ಸುಮಾರು ೨೫ ನಾಟಕಗಳನ್ನು ರಂಗಕ್ಕೆ ತಂದಿದ್ದಾರೆ.
ಪಯ್ಯಾರ್ ಅವರ ಈ ನೂತನ ನಾಟಕ ಸಾಹಸಕೆ ಶುಭ ಹಾರೈಸಿ: prakashpayyar@yahoo.com
ಪಯ್ಯಾರ್ ಅವರ ಬಗ್ಗೆ ಇನ್ನೊ ಹೆಚ್ಚಿನ ಮಾಹಿತಿ ಇಲ್ಲಿದೆ 





0 Comments