ನಸ್ರಿನ್ ಬಾನು
ನಿಮ್ಮ 3ನೆ ಮಗಳಿಗೆ ಮದುವೆ ನಿಶ್ಚಯವಾಯಿತಂತೆ ಗಂಡು ದುಬಾಯಿಯಲ್ಲಿದ್ದಾನಂತೆ ಅವಳ ಅದೃಷ್ಟ ಕುಲಾಯಿಸಿತು ಬಿಡಿ. ಅವಳು ಪುಣ್ಯ ಮಾಡಿದಾಳೆ, ಅವಳ ಅಕ್ಕಂದಿರು ಪಾಪ ಅವರಿಗೆ ಚಿಕ್ಕ ವ್ಯಾಪಾರಿಗಳ ಜೊತೆ ಅಲ್ಲವೆ ಮದುವೆ ಮಾಡಿದ್ದು ಹೋಗ್ಲಿ ಬಿಡಿ ಎಲ್ಲಾದಕ್ಕು ಪಡ್ಕೊಂಡ್ ಬಂದಿರ್ಬೇಕು. ಎಂದು ನನ್ನ ಅಕ್ಕ ಪಕ್ಕದ ಮನೆಯ ಹೆಂಗಸರು ಹೇಳುವಾಗ ನನ್ನ ಮನಸಲ್ಲೇನೋ ಒಂದು ಬಗೆಯ ಗರ್ವ ಎನಿಸುತಿತ್ತು. ಈ ದುಬಾಯಿ ಗಂಡು ತನಗೆ ದೇವರ ಕಾಣಿಕೆ ಇರಬೇಕು ಎಂದುಕೊಂಡೆ.
ತನ್ನ ಅಕ್ಕಂದಿರ ಜೀವನ ಶೈಲಿಯನ್ನು ನೋಡಿ ತನಗೂ ಇವರಂತೆ ಒಂದು ಬಾಳು ಸಿಕ್ಕರೆ ಸಾಕೆನಿಸುತಿತ್ತು. ಆದರೆ ತನಗೆ ದುಬಾಯಿ ಗಂಡಿನ ಜೊತೆ ಮದುವೆ ನಿಶ್ಚಯವಾದ ಮೇಲೆ ಇದು ನನಗೆ ಬಯಸದೆ ಬಂದ ಭಾಗ್ಯ ಎಂದುಕೊಂಡೆ. ವರದಕ್ಷಿಣೆಯು ತೆಗೆದುಕೊಳ್ಳದೆ ಮದುವೆ ಮಾಡ್ಕೊತಾರಂತೆ ಎಂದು ತಿಳಿದು ಮನಸು ಧನ್ಯತೆಯಿಂದ ಕಣ್ಣೀರು ಹರಿಸಿತ್ತು.
ಮದುವೆ ಅದ್ದೂರಿಯಿಂದ ನೆರವೇರಿತು ತನ್ನ ಹೆತ್ತವರು ತಮ್ಮ ಕರ್ತವ್ಯ ಮುಗಿಯಿತೆಂದು ತಲೆ ತೊಳೆದುಕೊಂಡರು. ನನಗೆ ನನ್ನ ಗಂದನ ಮನೆಯವರು ಭಾರಿ ಆಭರಣಗಳನ್ನು, ವಸ್ತ್ರಗಳನ್ನು ತಂದಿದ್ದರು. ಎಷ್ಟೆ ಆಗಲಿ ದುಬಾಯಿ ಗಂಡನಲ್ಲವೆ, ಇವೆಲ್ಲವು ನನ್ನನ್ನು ಒಂದು ಹೊಸ ಪ್ರಪಂಚಕ್ಕೆ ಕೊಂಡೊಯ್ಯಿತು.
ನನ್ನ ಗಂಡ ದೇವರಂತಾ ಮನುಷ್ಯ, ಅವನ ಗುಣ, ಸ್ವಭಾವದಲ್ಲಿ ಬೇರೆ ಮಾತಿಲ್ಲ. ಮದುವೆಯಾದ ಒಂದು ತಿಂಗಳು ಜೊತೆಯಲ್ಲಿದ್ದ. ಅವನು ನನ್ನ ಜೊತೆಯಲ್ಲಿದ್ದಷ್ಟು ದಿನ ನನ್ನಂತ ಸುಖಪುರುಷಿ ಬೇರೆ ಯಾರು ಇಲ್ಲವೇನೊ ಅನಿಸಿತ್ತು. ಆದರೆ ಏನು ಮಾಡುವುದು ಅವನ ಕೆಲಸ ದುಬಾಯಿಯಲ್ಲಿ, ಅವನು ಹೋಗಲೆ ಬೇಕು. ವಲ್ಲದ ಮನಸಿನಿಂದ ಬೀಳ್ಕೊಟ್ಟೆ.

ಅವನು ತಿರಿಗಿ ಬರುವ ದಿನಗಳಿಗೊಸ್ಕರ ಅಂದು ಕಾಯುತ್ತಾ ಕುಳಿತವಳು, ಅದು ಇಂದಿಗೂ ಮುಂದುವರೆದಿದೆ. ಅವನು ನನ್ನನ್ನು ವರಿಸಿ 5 ವರ್ಷವಾಯಿತು. ಇಲ್ಲ ಅವನು ಇಲ್ಲಿಯವರೆಗೂ ಬಂದಿಲ್ಲ. ನಾನು ಕಾಯುವುದನ್ನು ಬಿಟ್ಟಿಲ್ಲ. ಕಾಯುತಿದ್ದೇ್ದೆನೆ, ಕಾಯುತ್ತಲೆ ಇದ್ದೆನೆ. ಅವನು ಐದಾರು ತಿಂಗಳಿಗೊಮ್ಮೆ ಬರೆಯುವ ಪತ್ರಗಳನ್ನು ಜೊತೆಯಲ್ಲಿಟ್ಟುಕೊಂಡು ಅದನ್ನು ದಿನಕ್ಕೆ ಐದಾರು ಬಾರಿ ಓದುತ್ತಾ ಕಾಯಿತಿದ್ದೇನೆ. ಅವನೊಂದಿಗೆ ಕಳೆದ 1 ತಿಂಗಳಿನ ಅನುಭವವನ್ನು ಪ್ರತಿ ಕ್ಷಣವು ನೆನೆಯುತ್ತಾ ಕಾಯುತಿದ್ದೇ್ದೆನೆ. ಅವನು ಅಪರೂಪಕ್ಕೊಮ್ಮೆ ಮಾಡುವ ಕರೆಗಾಗಿ ಅವನ ಧ್ವನಿ ಕೇಳುವ ತವಕದಲ್ಲಿ ಫೋನಿನ ಬಳಿಯೆ ಕೂತಿ ಕಾಯುತಿದ್ದೇನೆ. ಬಂದಿಲ್ಲ ಅವನು ಈಗಲೂ ಬಂದಿಲ್ಲ.
ತಿಂಗಳಿಗೊಮ್ಮೆ ಭಾರಿ ಮೊತ್ತದ ಆಭರಣವನ್ನು ಹಣವನ್ನು ಮಾತ್ರ ಆತ ಕಳಿಸುತ್ತಾನೆ. ಅವನ ದೃಷ್ಟಿಯಲ್ಲಿ ಅದೆ ಪ್ರೀತಿ ಇರಬಹುದು. ಅಪರೂಪಕ್ಕೆ ಕರೆ ಮಾಡಿ ಮಾತನಾಡುವಾಗ ನಾನು ಬಯಸುವುದು ಅವನ ಸಾಂತ್ವನದ ಮಾತನ್ನ. ಆದರೆ ಅವನು ಕೇಳುವುದು ಹಣ ಕಳಿಸಲೆ ಒಡವೆ ಕಳಿಸಲೆ ಎಂದು.
ಇಲ್ಲ ಕಂಡಿತಾ ನಾ ಬಯಸಿದ್ದು ಇಂತಹ ಗಂಡನಲ್ಲ ಹಣದಿಂದಲೆ ಸಂಬಂದವನ್ನು ಅಳೆಯುವ ಗಂಡ ನನಗೆ ಬೇಕಾಗಿಲ್ಲ. ಅನಾರೋಗ್ಯದಿಂದ ಬಳಲುವ ನನಗೆ ನನ್ನ ಗಂಡನ ಸಾತ್ವಾನ ಏನು ಗೊತ್ತೇ? ಎಷ್ಟ ಹಣ ಕಳಿಸಲಿ ನಿನ್ನ ಚಿಕಿತ್ಸೆಗೆ ಎಂದು. ತನ್ನ ಬಳಿ ಕುಳಿತು ನಿನಗೆ ಏನು ಆಗುವುದಿಲ್ಲ ನಿನ್ನಜೊತೆಯಲ್ಲಿ ನಾನಿದ್ದೇನೆ ಎಂದರೆ ಸಾಕು ನನ್ನ ಕಾಯಿಲೆ ವಾಸಿಯಾಗಿಬಿಡಬಹುದಿತ್ತೇನೊ. ನಾನು ಬಯಸಿದ್ದು ಪ್ರೀತಿಯಿಂದ ಒಂದು ಮೊಳ ಹೂ ತಂದು ಕೊಡುವ ಗಂಡನನ್ನೆ ಹೊರತು, ಎಲ್ಲೊ ಇದ್ದುಕೊಂಡು ಪ್ರೀತಿ ಹೆಸರಿನಲ್ಲಿ ಆಭರಣ, ರೇಸಿಮೆ ಸೀರೆ ಕಳಿಸುವ ಗಂಡನನಲ್ಲ. ನನ್ನ ತವರು ಮನೆಗೆ ನಾನು ಕಾರಿನಲ್ಲಿ ಅದ್ದೂರಿ ಆಭರಣ, ವಸ್ರ್ತ ಧರಿಸಿ ಕಾರಿನಲ್ಲಿ ಹೋಗುತೇನೆ, ಆದರೆ ಒಬ್ಬಂಟಿಯಾಗಿ. ನನ್ನಕ್ಕಂದಿರು ಮಾಮೂಲಿಯಾಗಿ ತಮ್ಮ ಗಂಡ ಮಕ್ಕಳೊಂದಿಗೆ ಬಸ್ಸಿನಲ್ಲಿ ಬರುತ್ತಾರೆ. ನಿಜವಾದ ಸುಖ ಯಾವುದು?
ಹೌದು. ನಿಜವಾಧ ಸುಖ ಬಡತನದಲ್ಲಿ ಹೊಂದಾಣಿಕೆಯ ಬದುಕನ್ನು ನಡೆಸಿ ಹೆಂಡತಿಯ ಭಾವನೆಗಳಿಗೆ ಸ್ಪಂದಿಸಿ, ಮಕ್ಕಳೊಂದಿಗೆ ಸಂತೋಷವಾಗಿರುವುದರಲ್ಲಿದೆಯೊ ಹೊರತು ದುಬಾರಿಯಾದ ದುಬಾಯಿ ಗಂಡನಲ್ಲಿ ಖಂಡಿತಾ ಇಲ್ಲ…
(ಸತ್ಯ ಘಟನೆಯೊಂದರ ಆಧಾರದ ಮೇಲೆ)






channagi barediddeeri. idu kevala dubai gandanadobbanade katheyalla, ulidavarallu heegeye. hendatiyobbalade alla, tandetaayigaladu ide kathe.
Nice writeup. A real image a really stark reality.
Nasreen, You have good handle on the language and narration, please consider taking writing more seriously and use it for opening up many such absurdities in our society and also take care not to get lost in all the hypes.
ಇ೦ಥಾ ವ್ಯಥೆಗಳ ನಡುವೆ ಬಾಳುವವರನ್ನು ಹತ್ತಿರದಿ೦ದ ನೋಡಿದ್ದೇನೆ.:(