ಚಿತ್ರ: ಕಾರ್ತಿಕ್
ಟ್ಯಾಕಾನ್ ಟೆಕ್ನಾಲಜೀಸ್ ಸಂಸ್ಥೆಯಿಂದಾಗಿ ಈ ಬಾರಿಯ ದೀಪಾವಳಿ ಗೆ ಇನ್ನಷ್ಟು ಕಲರ್ ಬಂದಿದೆ. ಇಂಗ್ಲಿಷ್ನಲ್ಲಿ ಗ್ರೀಟಿಂಗ್ಸ್ ಕಳಿಸಿ ಸುಸ್ತಾಗಿದ್ದವರಿಗೆ ಈಗ ಕನ್ನಡದಲ್ಲಿಯೇ ಶುಭಾಷಯ ಕಳಿಸುವ ಅವಕಾಶ.
ಯಾಕೆ-ತಿಪಟೂರಿನ ಸತೀಶ್, ವಿಷ್ಣು ಬಳಗ ದಶಕದ ಹಿಂದೆಯೇ ಇದನ್ನು ಮಾಡಿರಲಿಲ್ಲವಾ? ಅಂತ ಕೇಳುತ್ತೀರಿ ಅಲ್ಲವಾ. ಹೌದು. ಸತೀಶ್, ವಿಷ್ಣು ಮಾಡಿದ ಗ್ರೀಟಿಂಗ್ಸ್ ಒಂದೇ ಏಟಿಗೆ ಕನ್ನಡಿಗರ ಮನಸೂರೆಗೊಂಡಿತ್ತು. ಆದರೆ ಕ್ವಿಲ್ಪ್ಯಾಡ್ ದು ಇನ್ನೂ ಒಂದು ಹೆಜ್ಜೆ ಮುಂದೆ. ಕಾಲಕ್ಕೆ ತಕ್ಕ ಕೋಲ ಅಂತ ಗಾದೆ ಇದೆಯಲ್ಲ ಹಾಗೆ ಇವರು ಮಾಡಿದ್ದು ಆನ್ಲೈನ್ ಕನ್ನಡ ಗ್ರೀಟಿಂಗ್.
ಸೈಟ್ ಗೆ ಹೋಗಿ ಮೂರು ಹಂತದಲ್ಲಿ ನಿಮಗೆ ಬೇಕಾದ ಡಿಸೈನ್ ನೀವೇ ಆಯ್ಕೆ ಮಾಡಿಕೊಂಡು, ನಿಮಗೆ ಬೇಕಾದ ಭಾಷೆಯಲ್ಲಿ, ಬೇಕಾದದ್ದನ್ನು ಬರೆದು ಮೇಲ್ ಮಾಡಬಹುದು. ಹಾಗಂತ ಹೇಳ್ದೋರು ಯಾರು ಅಂತೀರಾ- ಸಂಸ್ಥೆಯ ಸಾಂಸ್ಥಿಕ ವ್ಯವಸ್ಥಾಪಕ ಸಂತೋಷ್ ಅನಂತಪುರ್.
ಅವರು ಹೇಳಿದ್ದು ಹೀಗೆ–
ಕ್ವಿಲ್ ಪ್ಯಾಡ್ ಗ್ರೀಟಿಂಗ್ಸ್ ಮೂಲಕ ಇದೀಗ ಕನ್ನಡದಲ್ಲೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕಳುಹಿಸಬಹುದಾಗಿದೆ. ಇಂಟರ್‌ನೆಟ್ ಮೂಲಕ ಶುಭಾಶಯ ಕಳುಹಿಸಲು ಇಂಗ್ಲಿಷ್‌ನಲ್ಲಿ ವಿಫುಲ ಅವಕಾಶಗಳಿವೆ. ಆದರೆ ಈ ಕೊರತೆಯನ್ನು ಕ್ವಿಲ್ ಪ್ಯಾಡ್ ನೀಗಿಸಿದೆ ಎಂದು ಸಂಸ್ಥೆ ತಿಳಿಸಿದೆ.
ಕ್ವಿಲ್ ಪ್ಯಾಡ್ ತಂತ್ರಜ್ಞಾನ ಬಳಕೆ ಮಾಡುವ ಕ್ವಿಲ್ ಪ್ಯಾಡ್ ಗ್ರೀಟಿಂಗ್ಸ್ ಮೂಲಕ ಕನ್ನಡದಲ್ಲಿ ಸಂದೇಶಗಳನ್ನು ಟೈಪ್ ಮಾಡಬಹುದಾಗಿದೆ. greetings.quillpad.in http://greetings.quillpad.in,ವೆಬ್‌ಸೈಟ್ ನಲ್ಲಿ ನಿಮ್ಮ ಆಯ್ಕೆಯ ಗ್ರೀಟಿಂಗ್ಸ್ ನಲ್ಲಿ ಸಿದ್ಧ ಸಂದೇಶಗಳನ್ನೂ ಸಹ ಆಪ್ತ ಮಿತ್ರರಿಗೆ, kutumbikarige ಇ-ಮೇಲ್ ಮೂಲಕ ಕಳುಹಿಸಿಕೊಡಬಹುದಾಗಿದೆ.
ನೀವು “deepaavali habbada shubhashayagalu” ಎಂದು ಟೈಪ್ ಕ್ವಿಲ್ ತಂತ್ರಜ್ಞಾನ ಅದನ್ನು ‘ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ಪರಿವರ್ತಿಸುತ್ತದೆ. ಈ ತಂತ್ರಜ್ಞಾನ ೯ ಭಾರತೀಯ ಭಾಷೆಗಳಲ್ಲಿ ಲಭ್ಯ. ಪ್ರಮುಖ ಕಂಪೆನಿಗಳ ಮೊಬೈಲ್ ಗಳಲ್ಲೂ ಈ ಸೇವೆ ಶೀಘ್ರವೇ ಲಭ್ಯವಾಗಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ರಾಂಪ್ರಕಾಶ್ .ಎಚ್ ತಿಳಿಸಿದ್ದಾರೆ.





Informative.. thank you.
ಲೇಖನ ಚೆನ್ನಾಗಿದೆ. ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ
deepavali habbada shubhashayagalu