ಒಂದು ಹಾಡು
– ದಿವ್ಯಾ ಹೆಗಡೆ
ಮನಸಿನ ಮಾತುಗಳು
ಮೊನ್ನೆ ಮನೆಗೆ ಹೋದಾಗ ಹಳೆ ಕ್ಯಾಸೆಟ್ ಗಳನ್ನು ಸರಿಯಾಗಿ ಜೋಡಿಸುತ್ತಿದ್ದಾಗ ಈ ಕ್ಯಾಸೆಟ್ ಕಣ್ಣಿಗೆ ಬಿತ್ತು. ಇದೊಂದು ಜನಪದ ಗೀತೆ. ಚಿಕ್ಕಂದಿನಲ್ಲಿ ಕೇಳುತ್ತಿದ್ದ ಹಾಡು. ನನ್ನನ್ನು ತುಂಬಾ ಹೊತ್ತು ಕಾಡಿಸಿದ ಹಾಡು ಇದು.ಕ್ಯಾಸೆಟ್ ಮಾತ್ರ ಇದ್ದು ಹೊದಿಕೆ ಇಲ್ಲದ್ದರಿಂದ ಹಾಡಿದವರು ಯಾರು? ಸಾಹಿತ್ಯ ಯಾರಿದ್ದು ಅಂತ ಗೊತ್ತಾಗಲಿಲ್ಲ ನನಗೆ.ನಿಮಗೆ ಗೊತ್ತಿದ್ದರೆ ನನಗೆ ತಿಳಿಸತಕ್ಕದ್ದು.(ಇರಬೇಕು ,ಇರಬಹುದೇನೋ ಅಂತ ಹೇಳೋದಾದ್ರೆ ಬೇಡ.ನಿಖರವಾಗಿ ಗೊತ್ತಿದ್ದರಷ್ಟೇ ಹೇಳಿ !..:-)).
ಹಳ್ಳಿ ಜೀವನಕ್ಕೆ ಮೂಗು ಮುರಿದು ಪೇಟೆಯ ಜೀವನದ ಸೆಳೆತಕ್ಕೆ ಒಳಗಾಗುವ ಜನರ ಕುರಿತು ವ್ಯಂಗ್ಯ ಮಾಡಿದ್ದಾರೆ. ಹೆತ್ತ ಅಪ್ಪ ಅಮ್ಮನ ಕಡೆಗಣಿಸುವ ಮಕ್ಕಳ ಕುರಿತಾಗಿಯೂ ಇದೆ ಈ ಹಾಡು. ಕೆಲವರಿಗೆ ಪೇಟೆ ಜೀವನ “ಇಷ್ಟ” ಆದರೆ ಇನ್ನು ಕೆಲವರಿಗೆ “ಅನಿವಾರ್ಯ” .ಏನೇ ಇರಲಿ.ಅದರ ಚರ್ಚೆ ಇಲ್ಲಿ ಬೇಡ.
ಹಾಡು ನಿಮಗಾಗಿ.ಓದಿ ಆನಂದಿಸಿ…:-)
=========
ಜನ ಹಳ್ಳಿ ಹಳ್ಳಿ ಎಂದು ಮೂಗ ಮುರಿಯುತಾರ
ಪ್ಯಾಟಿಗೇಳಿ ಮೆರಿತಾರ,
ತನ್ನ ಹುಟ್ಟಿದೂರ ಮರಿತಾರ
ತಂದೆ ತಾಯಿ ಬಿಟ್ಟು ಮೆರಿತಾರ (ಪ)
–
ಕಲಿತವರೆಲ್ಲ ಜಾಣ್ಯಾರಲ್ಲ
ಸೀಳಿದರಕ್ಷರ ಇಲ್ಲ
ಎದಿ ಸೀಳಿದರಕ್ಷರ ಇಲ್ಲ
ಕಿಸೆದಾಗ ಐದರ ಪೈಸೆ ಇಲ್ಲ
ಕೈವಡ್ಡಿ ಬೇಡ್ಯಾರಲ್ಲ
ಲಂಚ ತಿಂದು ಬದುಕುತಾರಲ್ಲ
ಲಂಚ ತಿಂದು ಬದುಕುತಾರಲ್ಲ (೧)
–
ಜನ ಹಳ್ಳಿ ಹಳ್ಳಿ ಎಂದು ಮೂಗ ಮುರಿಯುತಾರ
ಪ್ಯಾಟಿಗೇಳಿ ಮೆರಿತಾರ,
ತನ್ನ ಹುಟ್ಟಿದೂರ ಮರಿತಾರ
ತಂದೆ ತಾಯಿ ಬಿಟ್ಟು ಮೆರಿತಾರ (ಪ)
–
ಸಾಹೇಬ ಸುಬೇದಾರ ಆಗಿ ಪ್ಯಾಟೆಯ ಹೆಣ್ಣ ಮದುವಿ ಆಗತಾರ
ಹೆತ್ತವರನು ತುಳಿತಾರ
ಹಡೆದಪ್ಪ ಮಗನ ನೋಡಾಕ ಬಂದರ
ಮನಿ ಆಳ್ ಅಂತ ಹೇಳತಾರ
ಮಂದ್ಯಾಗ ಮಾನ ಕಳಿತಾರ
ಸಂಧ್ಯಾಗ ಕಾಲ ಹಿಡಿತಾರ (೨)
–
ಜನ ಹಳ್ಳಿ ಹಳ್ಳಿ ಎಂದು ಮೂಗ ಮುರಿಯುತಾರ
ಪ್ಯಾಟಿಗೇಳಿ ಮೆರಿತಾರ,
ತನ್ನ ಹುಟ್ಟಿದೂರ ಮರಿತಾರ
ತಂದೆ ತಾಯಿ ಬಿಟ್ಟು ಮೆರಿತಾರ (ಪ)]]>
ದಿವ್ಯಾ ಹೆಗಡೆ ಕೇಳುತ್ತಾರೆ: ಈ ಹಾಡು ಹುಡುಕಿಕೊಡಿ
ನಿಮಗೆ ಇವೂ ಇಷ್ಟವಾಗಬಹುದು…




Heartful thanks to Avadhi…:-) 🙂
idu janapada geeteyaaddarinda yaara rachane endu helalaagavudilla. innu haadu kelade yaaru haadiddu endu hege taane helalu saadhya divayaa avare?
kanam