ಸಾಹಿತ್ಯ, ಕಲೆ ಮತ್ತಿತರ ಸಾಂಸ್ಕೃತಿಕ ಕ್ಷೇತ್ರಗಳ ವ್ಯಾಪ್ತಿ ಸದಾ ವಿವಾದಾಸ್ಪದವಾದದ್ದೇ. ಒಂದು ಪ್ರದೇಶದ ಸಾಂಸ್ಕೃತಿಕ-ಸಾಮಾಜಿಕ-ಆಥರ್ಿಕ ಮತ್ತು ರಾಜಕೀಯ ಆಯಾಮಗಳನ್ನು ಅಕ್ಷರ ರೂಪದಲ್ಲಿ ಹಿಡಿದಿಡುವ ಮೂಲಕ ಜನಮಾನಸದ ಮನದಾಳವನ್ನು ಪ್ರವೇಶಿಸುವ ಸಾಹಿತ್ಯದ ಎಲ್ಲ ಪ್ರಕಾರಗಳೂ ಈ ವಿದ್ಯಮಾನಗಳಿಂದ ಯಾವುದೋ ಒಂದು ರೀತಿಯಲ್ಲಿ ಪ್ರಭಾವಿತವಾಗಿರುತ್ತವೆ. ಕವಿಗಳ ಆಂತರ್ಯದಿಂದ ಮೂಡುವ ಕಾವ್ಯಧಾರೆಯಾಗಲೀ, ಕಾದಂಬರಿಗಳಲ್ಲಿ ವ್ಯಕ್ತವಾಗುವ ಸಾಮಾಜಿಕ ಸ್ಥಿತ್ಯಂತರಗಳಾಗಲಿ, ಕಲೆಗಾರರ ಕುಂಚದಿಂದ ಮೂಡುವ ಸುಂದರ ಕಲಾಕೃತಿಗಳಾಗಲೀ ಇವೆಲ್ಲವೂ ಆಯಾ ಪ್ರದೇಶದ ಜನಸಾಮಾನ್ಯರ ಜೀವನದಿಂದ ತಿಳಿದೋ, ತಿಳಿಯದೆಯೋ ಹೆಕ್ಕಿ ತೆಗೆದ ಅಂಶಗಳ ಸಂಕ್ಷಿಪ್ತ ರೂಪವೇ ಆಗಿರುತ್ತದೆ. ಆದರೂ ಇಂದಿಗೂ ಸಹ ಸಾಹಿತ್ಯ ಎಂದರೆ ಸಾಮಾಜಿಕ ವಿದ್ಯಮಾನಗಳಿಂದ ದೂರವೇ ಇರಬೇಕೆಂದು ವಾದಿಸುವ ಪಂಡಿತೋತ್ತಮರು ಇದ್ದಾರೆ. ಇಲ್ಲಿ ಸಾಹಿತ್ಯವನ್ನು ಎರಡು ರೀತಿಯಲ್ಲಿ ನೋಡಬೇಕಾಗುತ್ತದೆ. ಒಂದು ಸಾಹಿತಿ ತನ್ನ ಆತ್ಮತೃಪ್ತಿಗಾಗಿ, ತನ್ನ ಅಂತರಂಗದ ಭಾವನೆಗಳ ಅಭಿವ್ಯಕ್ತಿಗಾಗಿ ಸಾಹಿತ್ಯವನ್ನು ಸೃಷ್ಟಿಸುವುದು, ಮತ್ತೊಂದು ತನ್ನ ಸುತ್ತಲಿನ ಸಮಾಜದಲ್ಲಿ ಸಂಭವಿಸುವ ಘಟನೆಗಳ, ವಿದ್ಯಮಾನಗಳ ಹಿನ್ನೆಲೆಯಲ್ಲಿ ಒಂದು ಸಂದೇಶಾತ್ಮಕ ಸಾಹಿತ್ಯ ರಚಿಸುವುದು.
ಈ ಎರಡೂ ಪ್ರಕಾರಗಳು ಪರಸ್ಪರ ವಿರುದ್ಧವಾಗಿಯೇ ಕಂಡುಬಂದರೂ, ಎರಡರ ಮೂಲ ಮಾತ್ರ ಸುತ್ತಲಿನ ಸಮಾಜವೇ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳನ್ನೇ ಕೇಂದ್ರೀಕರಿಸಿ ರಚಿಸುವ ಸಾಹಿತ್ಯ ಒಂದು ಸ್ಥಾಪಿತ ವ್ಯವಸ್ಥೆಯನ್ನೇ ಪರಿವತರ್ಿಸುವ ಮಟ್ಟಿಗೆ ಪ್ರಭಾವ ಬೀರುವುದನ್ನು ಮಾನವ ಇತಿಹಾಸ ದಾಖಲಿಸಿದೆ. ತಮ್ಮ ಆತ್ಮತೃಪ್ತಿಗಾಗಿ ಸಾಹಿತ್ಯವನ್ನು ರಚಿಸುತ್ತೇವೆಂದು ಹೇಳುವ ಪಂಡಿತೋತ್ತಮರು ಈ ವ್ಯವಸ್ಥೆಯ ಪರಿವರ್ತನೆ ಎಂಬ ಮಾತನ್ನೇ ಒಪ್ಪದಿದ್ದರೂ, ಎಲ್ಲೋ ಒಂದು ಕಡೆ ಸಮಾಜದ ಆಗುಹೋಗುಗಳಿಂದ ಪ್ರಭಾವಿತರಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗಾಗಿ ಸಾಹಿತ್ಯ ಪ್ರಕಾರ ಯಾವುದೇ ಆಗಲಿ, ಸಾಹಿತ್ಯದಲ್ಲಿ ಬಿಂಬಿತವಾಗುವ ಪ್ರತಿಪಾದನೆಗಳು ಹೇಗೇ ಇರಲಿ, ಒಂದು ಪ್ರದೇಶದ ಜನಜೀವನ-ರಾಜಕೀಯ-ಸಂಸ್ಕೃತಿ ಮತ್ತು ಸಾಮಾಜಿಕ ಸ್ಥಿತ್ಯಂತರಗಳು ತಮ್ಮದೇ ಆದ ಪ್ರಭಾವ ಬೀರುವುದಂತೂ ಸತ್ಯ.
ಹೀಗಿರುವಾಗ ಕನ್ನಡ ಸಾಹಿತ್ಯದ ತೇರನ್ನು ಎಳೆದೊಯ್ಯಲು ವರ್ಷಕ್ಕೊಮ್ಮೆ ಆಚರಿಸಲಾಗುವ ಸಾಹಿತ್ಯ ಸಮ್ಮೇಳನ ರಾಜಕೀಯ ಸ್ಥಿತ್ಯಂತರಗಳಿಂದ ವಿಮುಖವಾಗಿರಲು ಸಾಧ್ಯವೇ ? ಈ ಪ್ರಶ್ನೆಯ ಮೂಲಕವೇ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರ ಪ್ರಹಾರವನ್ನು ಎದುರಿಸಬೇಕಾಗಿದೆ. ಸಾಹಿತಿಗಳು ರಾಜಕಾರಣಿಗಳನ್ನು ಟೀಕಿಸುವಂತಿಲ್ಲ ಏಕೆಂದರೆ ಅವರಿಗಾಗಿ ನಡೆಸುವ ಸಮ್ಮೇಳನಕ್ಕೆ ಸಕರ್ಾರ ಅನುದಾನ ನೀಡುತ್ತದೆ. ಇದು ಕಾರಜೋಳ ಅವರ ಕಾನರ್್ಮಿಕ್ಸ್ ಹೇಳಿಕೆ. ಬಹುಶಃ ಕಾರಜೋಳ ಯಾವುದೋ ಒಂದು ರಾಜಮನೆತನದಿಂದ ಬಂದವರಾಗಿರಬೇಕು. ಏಕೆಂದರೆ ಸಾಹಿತ್ಯ-ಕಲೆ-ಸಾಹಿತಿ ಮತ್ತು ಕಲಾವಿದರನ್ನು ತಮ್ಮ ಅಧಿಪತ್ಯದ ಚೌಕಟ್ಟಿನಲ್ಲಿ ಬಂಧಿಸಿ, ಅವರಿಗೆ ರಾಜಪ್ರಭುತ್ವದ ಸಕಲ ಗೌರವ ಮಯರ್ಾದೆಗಳನ್ನೂ ನೀಡಿ, ಪಂಜರದ ಗಿಣಿಗಳಂತೆ ಸಲಹುತ್ತಿದ್ದ ರಾಜಪ್ರಭುತ್ವದ ಪ್ರತಿನಿಧಿಗಳು ಮಾತ್ರ, 21ನೆಯ ಶತಮಾನದಲ್ಲೂ ಈ ರೀತಿಯ ಮಾತುಗಳನ್ನಾಡಲು ಸಾಧ್ಯ.
ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದು ಕನ್ನಡ ಸಾಹಿತ್ಯ ಪ್ರೇಮಿಗಳಿಗಾಗಿ ಮಾತ್ರವೇ ಅಲ್ಲ. ಸಮಸ್ತ ಕನ್ನಡಿಗರ, ಅಂದರೆ ಕನರ್ಾಟಕದಲ್ಲಿ ವಾಸಿಸುವ ಸಮಸ್ತ ಜನತೆಯ ಆಶೋತ್ತರಗಳನ್ನು, ಕನಸುಗಳನ್ನು, ಆಶಯಗಳನ್ನು ಸಾಹಿತ್ಯದ ದೃಷ್ಟಿಕೋನದಿಂದ ಹೇಗೆ ನೋಡಬಹುದು ಎಂದು ನಿರೂಪಿಸುವ ಒಂದು ವೇದಿಕೆಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತದೆ. ಅಥವಾ ನಡೆಯಬೇಕು . ಇಲ್ಲಿ ವೈಫಲ್ಯಗಳಿರಬಹುದು, ನ್ಯೂನತೆಗಳಿರಬಹುದು, ಲೋಪಗಳೂ ಇರಬಹುದು. ಸಮ್ಮೇಳನಗಳು ಜಾತ್ರೆಯಾಗಿರಬಹುದು. ಆದರೆ ಅಲ್ಲಿ ಒಂದು ಆಶಯವಿರುತ್ತದೆ, ಕನಸು ಇರುತ್ತದೆ. ಕನ್ನಡ ಜನತೆಯ ಏಳಿಗೆಗೆ ಶ್ರಮಿಸಲು ಕರೆ ನೀಡುವ ಒಂದು ಹಪಹಪಿ ಅಲ್ಲಿರುತ್ತದೆ. ಈ ಸಮ್ಮೇಳನಕ್ಕೆ ಸಕರ್ಾರ ಅನುದಾನ ನೀಡಿದ್ದರೂ ಅದು ಕನ್ನಡ ಜನತೆಗೆ ಸಲ್ಲಬೇಕಾದ ಹಣವೇ ಹೊರತು, ಅಧಿಕಾರರೂಢ ಪಕ್ಷಗಳ ಪರಿಶ್ರಮದಿಂದ ಗಳಿಸಿದ ಹಣವಲ್ಲ. ಈ ಅನುದಾನ ಇಲ್ಲದೆಯೂ ಸಮ್ಮೇಳನವನ್ನು ನಡೆಸುವ ಸಾಮಥ್ರ್ಯ ಜನಸಾಮಾನ್ಯರಿಗಿದೆ ಎಂದು ಸಕರ್ಾರ ಅರಿಯಬೇಕಿದೆ.
ಕನರ್ಾಟಕದ ಜನಸಾಮಾನ್ಯರ ಮುಖ್ಯ ಆಕ್ಷೇಪ ಎಂದರೆ ಕನ್ನಡದ ಬಹುತೇಕ ಸಾಹಿತಿಗಳು ರಾಜಕೀಯ-ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎನ್ನುವುದು. ಇದು ಭಾಗಶಃ ಸತ್ಯ. ಸಾಮಾಜಿಕ ಸಮಸ್ಯೆಗಳು, ಸಮಾಜವನ್ನು ಕಾಡುವ ಕ್ರೌರ್ಯ, ಮೂಢನಂಬಿಕೆ ಮತ್ತಿತರ ಅನಿಷ್ಠಗಳ ಬಗ್ಗೆ ಸಾಹಿತ್ಯ ರಚಿಸುವುದೆಂದರೆ ಇಸಂಗಳಿಗೆ ಗಂಟುಬಿದ್ದಂತೆಯೇ ಎಂದು ಪರಿಗಣಿಸುವ ಸಾಹಿತಿಗಳೂ ನಮ್ಮಲ್ಲಿದ್ದಾರೆ. ಆದರೆ ಸಮಾಜದ ಎಲ್ಲ ರೀತಿಯ ಸಮಸ್ಯೆಗಳನ್ನೂ ತಮ್ಮ ಸಾಹಿತ್ಯಕ ಪರಿಕಲ್ಪನೆಯಲ್ಲಿ ಅಳವಡಿಸಿಕೊಂಡು ಸಾಮಾಜಿಕ ಅನಿಷ್ಠಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಹಿತ್ಯ ರಚಿಸುವವರೂ ಇದ್ದಾರೆ. ಇಲ್ಲಿ ಇಸಂಗಳ ಪ್ರಶ್ನೆಗಿಂತಲೂ ಸಾಹಿತ್ಯ ಲೋಕದ ಉತ್ತರದಾಯಿತ್ವ ಮತ್ತು ಜನಪರ ಕಾಳಜಿಗಳು ಹೆಚ್ಚು ಪ್ರಸ್ತುತ ಎನಿಸುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಕನರ್ಾಟಕದ ಸಾರಸ್ವತ ಲೋಕದಲ್ಲಿ ಇಸಂಗಳಿಗೆ ಗಂಟುಬೀಳದೆಯೇ ತಮ್ಮ ಜನಪರ ಕಾಳಜಿಯನ್ನು ವ್ಯಕ್ತಪಡಿಸುವ ಸಾಹಿತಿಗಳ ಸಂಖ್ಯೆ ಹೇರಳವಾಗಿದೆ.
ಹಾಗಾಗಿಯೇ ಪ್ರತಿಯೊಂದು ಸಾಹಿತ್ಯ ಸಮ್ಮೇಳನದಲ್ಲೂ ರಾಜ್ಯವನ್ನು ಕಾಡುತ್ತಿರುವ ಸಮಸ್ತ ಸಮಸ್ಯೆಗಳ ಬಗ್ಗೆ ಚಚರ್ೆಯಾಗುತ್ತದೆ. ಈ ಚಚರ್ೆಗಳು ಶುಷ್ಕವಾಗಿರುತ್ತವೆ, ಚಚರ್ೆಯ ವಿಸ್ತರಣೆಯಾಗುವುದಿಲ್ಲ, ನಿರ್ಣಯಗಳು ನಿಣರ್ಾಯಕ ಅಂತ್ಯ ಕಾಣುವುದಿಲ್ಲ ಈ ಎಲ್ಲಾ ಆಪಾದನೆಗಳ ನಡುವೆಯೇ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳು ಜನಸಾಮಾನ್ಯರ ಆಶಯಗಳನ್ನು ಬಿಂಬಿಸುವ ರೀತಿಯಲ್ಲಿ ನಡೆಯುತ್ತವೆ. ಪ್ರಸ್ತುತ ಸಂದರ್ಭದಲ್ಲೇ ನೋಡುವುದಾದರೆ ಸಮಸ್ತ ಕನ್ನಡಿಗರನ್ನು ಪ್ರತಿನಿಧಿಸುವ ಸಾಹಿತ್ಯ ಸಮ್ಮೇಳನದಲ್ಲಿ ಯಾವ ರೀತಿಯ ಚಚರ್ೆಗಳು ನಡೆಯಬೇಕು ಎಂಬ ಪ್ರಶ್ನೆ ಎದುರಾದಾಗ, ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಕಂಡುಬರುವ ಎಲ್ಲ ಗಂಭೀರ ಸಮಸ್ಯೆಗಳೂ ಧುತ್ತೆಂದು ಎದುರಾಗುತ್ತವೆ. ಇದರ ಒಂದು ಛಾಯೆಯನ್ನು ಕೊಪ್ಪಳ ಸಾಹಿತ್ಯ ಸಮ್ಮೇಳನದಲ್ಲಿ ಕಂಡಿದ್ದೇವೆ. ಮೌಲ್ಯಾಧಾರಿತ ರಾಜಕಾರಣಕ್ಕೆ ಮೂಲ ಭಾಷ್ಯ ಬರೆದ ಕನರ್ಾಟಕವನ್ನು ಭ್ರಷ್ಟಾಚಾರದಲ್ಲಿ ಪ್ರಥಮ ಸ್ಥಾನ ಪಡೆಯುವ ಹಂತಕ್ಕೆ ತಲುಪಿಸಿರುವ ರಾಜಕೀಯ ಪಕ್ಷಗಳನ್ನು ಈ ಸಂದರ್ಭದಲ್ಲಿ ಟೀಕಿಸಿದರೆ ತಪ್ಪೇನಿದೆ ? ಕಾರಜೋಳ ಅವರೇ ಉತ್ತರಿಸಬೇಕು.
ಸಮ್ಮೇಳನಾಧ್ಯಕ್ಷರಾಗಿದ್ದ ಸಿಪಿಕೆ ಹೇಳಿದಂತೆ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳು ಕೇವಲ ಆಥರ್ಿಕ ಕ್ಷೇತ್ರವನ್ನು ಆವರಿಸಿಲ್ಲ, ಸಾಂಸ್ಕೃತಿಕ ಕ್ಷೇತ್ರವನ್ನೂ ಆವರಿಸಿದೆ. ಇದು ಚಿಂತನಾರ್ಹ ವಿಚಾರವಲ್ಲವೇ ? ಇಂದು ಕನರ್ಾಟಕದಲ್ಲಿ ರೈತರ ಆತ್ಮಹತ್ಯೆ, ಶಿಕ್ಷಕರ ಸಮಸ್ಯೆ, ನಿರುದ್ಯೋಗ, ಭ್ರಷ್ಟಾಚಾರ, ಭೂಹಗರಣ, ಮಾಫಿಯಾ ಹಾವಳಿ, ರಿಯಲ್ ಎಸ್ಟೇಟ್ ಹಾವಳಿ ಇವೆಲ್ಲವೂ ಪರಾಕಾಷ್ಠೆ ತಲುಪಿದ್ದರೆ ಅದಕ್ಕೆ ಕಾರಣ ಯಾರು ? ರಾಜ್ಯವನ್ನು ಆಳುವ ಹೊಣೆಗಾರಿಕೆ ಹೊತ್ತಿರುವ ರಾಜಕಾರಣಿಗಳೇ ಅಲ್ಲವೇ ? ಸಕರ್ಾರಿ ಶಾಲೆಗಳನ್ನು ಮುಚ್ಚುವ ನಿಧರ್ಾರ ಕೈಗೊಂಡಿರುವುದು, ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿಗೊಳಿಸದಿರುವುದು, ಶಿಕ್ಷಣದ ಖಾಸಗೀಕರಣಕ್ಕೆ ಕಾರಣರಾಗಿರುವುದು ಆಳುವ ಜನಪ್ರತಿನಿಧಿಗಳೇ ಅಲ್ಲವೇ ? ಈ ಎಲ್ಲಾ ಸಮಸ್ಯೆಗಳು ಯಾರನ್ನು ಬಾಧಿಸುತ್ತವೆ ? ಕನರ್ಾಟಕದ ಜನಸ್ತೋಮವನ್ನಲ್ಲವೇ ? ಈ ಜನಸ್ತೋಮದ ಆಶೋತ್ತರಗಳ ಹಿನ್ನೆಲೆಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ, ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣರಾದವರನ್ನು ಟೀಕಿಸದೆ ಮತ್ತೇನು ಮಾಡಬೇಕು ? ಹಾರ ತುರಾಯಿಗಳಿಂದ ಸನ್ಮಾನಿಸಬೇಕೇ ?
ಕನ್ನಡ ಸಾಹಿತಿಗಳು ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡುವುದನ್ನು ಜನತೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾರೆ. ಕಾರಣ ರಾಜ್ಯದಲ್ಲಿ ಕಾಣಲಾಗುತ್ತಿರುವ ಭ್ರಷ್ಟಾತಿಭ್ರಷ್ಟ ರಾಜಕಾರಣದಿಂದ ಜನತೆ ಬೇಸತ್ತಿದ್ದಾರೆ. ಸಾಹಿತಿಗಳು ರಾಜಪ್ರಭುತ್ವದ ಆಸ್ಥಾನ ಕವಿಗಳಂತೆ ಪ್ರಭುತ್ವ ಬಯಸಿದ್ದನ್ನು ಗೀಚುವ ಪಂಜರದ ಗಿಣಿಗಳಲ್ಲ ಎಂಬ ಸತ್ಯವನ್ನು ಕಾರಜೋಳ ಮತ್ತು ಅವರ ರಾಜಕೀಯ ಪಕ್ಷ ಅರಿಯಬೇಕಾಗಿದೆ. ಕನರ್ಾಟಕದ ಜನಮಾನಸದ ಮನದಾಳದ ಆಶಯಗಳನ್ನು, ನೋವು, ಹತಾಶೆ, ನಿರಾಸೆ ಮತ್ತು ಜಿಗುಪ್ಸೆಗಳನ್ನು ತಮ್ಮ ಲೇಖನಿಯ ಮೂಲಕ ಪ್ರತಿಬಿಂಬಿಸುವ ಸಾಹಿತ್ಯಲೋಕದ ದಿಗ್ಗಜರು ಇನ್ನೂ ಪ್ರಖರವಾಗಿ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರತಿಕ್ರಯಿಸುವ ಅಗತ್ಯತೆ ಇಂದು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಸಾಹಿತ್ಯ ಸಮ್ಮೇಳನ ಪ್ರಥಮ ಸೋಪಾನವೆಂದೇ ಪರಿಗಣಿಸೋಣ. ಪ್ರತಿರೋಧದ ದನಿಗಳನ್ನು ಅಡಗಿಸುವ ಪ್ರಭುತ್ವವಾದಿಗಳ ಅಟ್ಟಹಾಸವನ್ನು ಮಟ್ಟ ಹಾಕಲು ಸಾಹಿತಿಗಳು ಮತ್ತಷ್ಟು ಒಗ್ಗಟ್ಟಿನಿಂದ ಪ್ರತಿಭಟಿಸುವುದು ಅಗತ್ಯ.








shuddha saahityada pratipaadakarige eega ellillada mannane doreyuttide.idakke ittechege prajavaniyalli baruttiruva vimarsheyannu udaharisabahudu. i vimarshakana prakaara badukina katu satyagalannu, sudusudu anubhavagalnnu, aa badukina hinnaleyindale banda m s shekhar, aruna jolad kudligi, b peerbhasha, kavigale allavante! i vimarshaka yaaru kavi, yaaru kavi alla embudannu prajavaani mulaka certify maaduttane. mattu eetaninda sampurnavagi kavigalu anta certificate padedukondavaru ganesh hosmane, geeta vasanta, aananda janjaravaada. itana vimarsheyannu kondaaduva mahanubhaavarigenu kadimeyilla.. avara chintaneyannu gamanisabahudu.. anthavara ondu chintane heegide.. krourya sahajavaadaddu..embudu. vichitra nodi hotte tumbidavarinda intha maatugalallade berenu baralu saadhya.. aa krourya omme ivara anubhavakke bandaaga nodabeku ivaru tamma abhipraayakke estu baddharaagiruttaare anta. ivarella kaarajolara chinbtaneya bere roopada pratinidhigalu… aste. bahushaha kannada saahityadalli certify maaduva kelasavannu modala baarige noduttiddeveno.. yaake heege endu prashnisidare saaku baruva uttara bhayaanakavaagide. adu nanna space, naanu enaadaru bareyuttene.. nanna hola nanna bele, enaadaru beledukolluvudu nanna svanta aayke.. ennuttaare i mahaa vimarshakaru. prajaprabhutvada nijavaada moulyavannu tanna anthassatvavaagittukondu samasta kannadigara manodhoranegalannu nirdharisuva patrikeyondu heege yaarado holavaadare enu gati.. idakke uttarisuvavaraaru? idu ivattina saahityada moulyada prashneyu houdu.