ಛೋಟೀ ಸಿ ಬಾತ್…
ದಿಲಾವರ್ ರಾಮದುರ್ಗ
ನಿನ್ನೆ ಬಸ್ ನಲ್ಲಿ ಖುಷವಂತ್ ಸಿಂಗ್ ಪುಸ್ತಕ ಓದ್ತಾ ಕುಳಿತಿದ್ದೆ. ಗೆಳೆಯರೊಬ್ಬರು ಬೆಳಿಗ್ಗೆ ದೊಡ್ಡ ಚಾಕೊಲೇಟ್ (ಮಿಲ್ಕ್ ಬಾರ್) ಕೊಟ್ಟಿದ್ದರು. ಬಸ್ ಹಿಡಿಯುವ ಅವಸರದಲ್ಲಿ ಜೇಬಿಗಿಟ್ಟುಕೊಂಡಿದ್ದೆ, ನೆನಪಾಯ್ತು. ಅಷ್ಟು ದೊಡ್ಡ ಚಾಕೊಲೇಟ್ ಒಬ್ಬನೇ ತಿನ್ನೋದಾ? ಅಂದ್ಕೊತಿದ್ದೆ. ಹಿರಿಯ ಕಂಡಕ್ಟರ್ ಜೀವವೊಂದು ಪಕ್ಕದಲ್ಲೇ ನಿಂತಿತ್ತು. ಸರ್ ಎಂದು ಚಾಕೊಲೇಟ್ ನ ಒಂದು ತುಂಡನ್ನು ಕೊಟ್ಟೆ. ಆತ ಅದನ್ನು ಕೈಯಲ್ಲಿ ಹಿಡಿದುಕೊಂಡೇ ಪ್ರಯಾಣಿಕರನ್ನು ಸರಿಸುತ್ತ ಮುಂದೆ ಹೊರಟರು. ಅಯ್ಯೋ ಪಾಪ ಅವರಿಗಿದು ಇಷ್ಟವಾಗಲಿಲ್ಲವೋ ಏನೋ ಎಂದು ಬೇಸರಪಟ್ಟುಕೊಳ್ಳುತ್ತಿದ್ದೆ. ನೋಡನೋಡುತ್ತಿದ್ದಂತೆ ಆತ ಡ್ರೈವರ್ ಹತ್ತಿರ ಹೋಗಿ ಆ ತುಂಡು ಚಾಕೊಲೇಟ್ ನಲ್ಲಿ ಒಂದು ತುಂಡನ್ನು ಆತನ ಬಾಯಿಗಿಟ್ಟು ತಾನೊಂದು ಬಾಯಿಗೆ ಹಾಕಿಕೊಂಡ.
ಚಾಕೊಲೇಟ್ ಮತ್ತಷ್ಟು ರುಚಿ ಎನಿಸತೊಡಗಿತು.







Nice Observation and ya small acts really transforms !!
Thanks
ರುಚಿಯಾದ ಬರಹ.