ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಸರ ವಿಶೇಷ..


ದಸರಾ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ಖ್ಯಾತ ಚಲನಚಿತ್ರ ಪಾಪ್ ಗಾಯಕ ರಘುದೀಕ್ಷಿತ್ ಪಾಪ್ ಗಾಯನ ಪ್ರಸ್ತುತ ಪಡಿಸಿದರು.
ಶ್ರೀರಂಗಪಟ್ಟಣದ ಶ್ರೀರಂಗ ವೇದಿಕೆಯಲ್ಲಿ ಹೈದರಾಬಾದ್ನ ಹೆಸರಾಂತ ಅಸದ್ ಅಮ್ಜದ್ ಖಾನ್ ವಾಸರ್ಿ ತಂಡ ಸೂಫಿ-ಕವಾಲಿ ಪ್ರಸ್ತುತ ಪಡಿಸಿತು.   ಗಾಂಧೀಜಿಗೆ ಪ್ರಿಯವಾದ ‘ರಘುಪತಿ ರಾಘವ ರಾಜಾರಾಂ’ ಹಾಡಿಗೆ ಪ್ರೇಕ್ಷಕರು ಧನಿಗೂಡಿಸಿದರು.ಸೂಫಿ-ಹಜರತ್ ಖಲಂದರ್ ಹಾಗೂ ಸೂಫಿ ನುಸ್ರತ್ ಫತೇ ಅಲಿ ಅವರ ಹಲವಾರು ಪ್ರಸಿದ್ಧ ಸೂಫಿ ಗೀತೆಗಳನ್ನು ಹಾಡಿದರು. ಹೈದರಾಬಾದ್ನ ಪದ್ಮಶ್ರೀ ಪುರಸ್ಕೃತ ಅಮ್ಜದ್ ಅಜೀಜ್ ಖಾನ್ ವಾಸರ್ಿಗೆ ತಂಡದ ಇತರರು ಸಾಥ್ ನೀಡಿದರು.   ಇದಕ್ಕೂ ಮುನ್ನ ಅಂತರರಾಷ್ಟ್ರೀಯ ಖ್ಯಾತಿಯ ಕೃಪಾಪಡಕೆ ತಂಡದಿಂದ ಕನರ್ಾಟಕ ಕಲಾದೀಪ್ತಿ ನೃತ್ಯ ರೂಪಕ ನಡೆಯಿತು. ಡಿ.ವಿ.ಜಿ ಅವರ ‘ಶ್ರೀಚನ್ನಕೇಶವ ಶೃಂಗಾರ ಭಾವ….’ ಹಾಗೂ ಕುವೆಂಪು ಅವರ ‘ಜೈ ಭಾರತ ಜನನಿಯ ತನುಜಾತೆ’ ಹಾಡಿಗೆ ನೃತ್ಯ ಮಾಡಿತು. ಶಿವಶರಣರ ವಚನಗಳನ್ನು ಈ ತಂಡ ಪ್ರಸ್ತುತಪಡಿಸಿತು.    ಜೊತೆಗೆ ಡಿ.ಎಸ್.ಕಕರ್ಿ ಅವರ ‘ಹಚ್ಚೇವು ಕನ್ನಡದ ದೀಪ’ ಹಾಡಿನ ನೃತ್ಯ ರೂಪಕ ಗಮನಸೆಳೆಯಿತು. ಪ್ರತಿಯೊಂದು ಹಾಡಿಗೂ ಪ್ರೊಜೆಕ್ಟರ್ ಮೂಲಕ ಛಾಯಾ ಚಿತ್ರಗಳನ್ನು ಮೂಡಿಸಿದ್ದರಿಂದ ಕಾರ್ಯಕ್ರಮ ವಿಶಿಷ್ಟವಾಗಿ ಪ್ರೇಷಕರ ಕಣ್ಮನ ಸೆಳೆಯಿತು.
ದಸರಾ ಮಹೋತ್ಸವದ ಅಂಗವಾಗಿ ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯ ಮೈದಾನದಲ್ಲಿ ಮಂಗಳವಾರ ದಸರಾ ಗ್ರಾಮೀಣ ಕ್ರೀಡಾ ಸಂಬ್ರಮದ ಅಂಗವಾಗಿ ಜಾನಪದ ಆಟೋಟಗಳು ನಡೆದವು.ಪ್ರೊ. ಬಿ.ಜಯಪ್ರಕಾಶ್ಗೌಡ ಗ್ರಾಮೀಣ ಕ್ರೀಡಾ ಸಂಬ್ರಮವನ್ನು ಉದ್ಘಾಟಿಸಿ ಮಾತನಾಡಿ ಹಳ್ಳಿಗಾಡಿನ ಆಟೋಟಗಳು ಜನಜೀವನದ ಜತೆ ಅವಿನಾಭಾವ ಸಂಬಂಧ ಹೊಂದಿವೆ. ಅವುಗಳನ್ನು ಉಳಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಹೇಳಿದರು.ಸ್ಪಧರ್ೆಗಳು: ಬಿಲ್ಲುಗಾರಿಕೆ, ಸ್ಲೋ ಸೈಕಲ್, ಎತ್ತಿನ ಬಂಡಿ ಎಳೆಯುವ ಸ್ಪಧರ್ೆಗಳನ್ನು ಪುರುಷರಿಗೆ ಏರ್ಪಡಿಸಲಾಗಿತ್ತು. ಮಹಿಳೆಯರಿಗೆ ರಂಗೋಲಿ, ಕಬ್ಬು ಜಗಿದು ತಿನ್ನುವ ಸ್ಪಧರ್ೆಗಳು ನಡೆದವು.14 ವರ್ಷ ಒಳಗಿನ ಮಕ್ಕಳಿಗೆ, ಆರ್ಚರಿ (ಬಿಲ್ಲು ಬಾಣ) ಸ್ಪಧರ್ೆ, ಸಂಗೀತ ಕುಚರ್ಿ ಸ್ಪಧರ್ೆ ನಡೆದವು. 8 ವರ್ಷ ಒಳಗಿನ ಮಕ್ಕಳು ಕಪ್ಪೆ ಜಿಗಿತದ ಸ್ಪಧರ್ೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಈ ಸ್ಪಧರ್ೆಯಲ್ಲಿ ಭರತ್ ಪ್ರಥಮ, ಕಿಶೋರ್ ದ್ವಿತೀಯ, ಉತ್ತಮ್ ತೃತೀಯ ಹಾಗೂ ಜ್ಞಾನೇಶ್ 4ನೇ ಸ್ಥಾನ ಪಡೆದರು.ಹಿರಿಯ ನಾಗರಿಕರಿಗೆ ವೇಗದ ನಡಿಗೆ ಸಂಗೀತ ಕುಚರ್ಿ ಹಾಗೂ ಸಕರ್ಾರಿ ನೌಕರರಿಗೆ ಗೋಣಿಚೀಲದ ಓಟ, ಹಗ್ಗ ಜಗ್ಗಾಟ, ಮಡಿಕೆ ಹೊಡೆಯುವುದು ಹಾಗೂ ಸಂಗೀತ ಕುಚರ್ಿ ಸ್ಪಧರ್ೆಗಳು ನಡೆದವು. ಪತ್ರಕರ್ತರಿಗೂ ವಿವಿಧ ಸ್ಪಧರ್ೆಗಳನ್ನು ಆಯೋಜಿಸಲಾಗಿತ್ತು.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೆಶಕಿ ಡಾ.ಎಚ್.ಪಿ. ಮಂಜುಳ ಇತರರು ಇದ್ದರು.

‍ಲೇಖಕರು avadhi

5 October, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading