ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ದಕ್ಷಿಣಾಯನ'ದ ಹಿಡನ್ ಅಜೆಂಡಾಗಳು

ಪಂಪಾರೆಡ್ಡಿ ಅರಳಹಳ್ಳಿ ಮೂಲಕ-
ದಕ್ಷಿಣಾಯನ ಕರ್ನಾಟಕ ಅಭಿವ್ಯಕ್ತಿ ಸಮಾವೇಶದ
ಹಿಡನ್ ಅಜೆಂಡಾಗಳು
ಮುಖ್ಯವಾಗಿ ಮೂರು:
• ನಮ್ಮ ಮುಖಗಳ ಮೇಲಿಂದ ವಿಷಾದದ ಛಾಯೆ ತೆಗೆದುಹಾಕೋದು
• ಬಿಕ್ಕಟ್ಟು ಬಿಕ್ಕಟ್ಟು ಅಂತ ನಮ್ಮ ಹುಬ್ಬುಗಳು ಕಗ್ಗಂಟಾಗಿಹೋಗಿವೆ. ಈ ಗಂಟನ್ನು ಬಿಡಿಸೋದು
• ಜನಕ್ಕಾಗಿ ನಾವು ಮಾತಾಡ್ತೇವೆ ಆದರೆ ಜನರೇ ನಮ್ಮ ಜೊತೆ ಇಲ್ಲವಲ್ಲ ಅನ್ನುವ ಹತಾಶೆಯಲ್ಲಿರುವವರಿಗೆ ಬಹುಮತ ಅನ್ನೋದು ಜನಮತ ಅಲ್ಲ; ಜನರ ಮನಸಲ್ಲಿ ವಿವೇಕವಿರತ್ತೆ, ಕೆಲವೊಮ್ಮೆ ಅದು ಮಂಕಾಗಿರತ್ತೆ, ಕೆಲವೊಮ್ಮೆ ಪ್ರಕಾಶಗೊಳ್ಳುತ್ತೆ. ಅಲ್ಲಿಯವರೆಗೆ ನಾವು ಸಹನೆಯಿಂದ ಕಾಯಬೇಕು. ಜನ ನಮ್ಮ ಜೊತೆಗಿದ್ದಾರೆ ಅಂತ ಹೇಳೋದು
• ಕೊನೆಯದಾಗಿ ಮತ್ತು ಬಹುಮುಖ್ಯವಾಗಿ, ಕೆಲವಾರು ವರ್ಷಗಳಿಂದ ನಮ್ಮ ಗಂಟಲಲ್ಲಿ ಕೂಗುಮಾರಿ ಅನುಷ್ಠಾನಕ್ಕೆ ಬಂದುಬಿಟ್ಟಿದೆ. ಇದನ್ನು ದೂರ ಇಡಬೇಕು ಅನ್ನೋದು.
ದಕ್ಷಿಣಾಯನ ಒಂದು ಪಯಣ. ಇದೊಂದು ಅಭಿಯಾನ. ಇದು ಪ್ರಯೋಗ. ಇಲ್ಲಿ ಸಿದ್ಧ ಸಿದ್ಧಾಂತಗಳ ಗೊಡವೆಯಿಲ್ಲ, ನಮ್ಮ ಚಿಂತನೆಯನ್ನು ಒತ್ತಾಯವಾಗಿ ಹೇರುವ ಹುನ್ನಾರವಿಲ್ಲ. ಇದು ಬರಹಗಾರ, ಕಲಾವಿದ, ಸೃಜನಶೀಲ ವ್ಯಕ್ತಿಗಳ ಸಮೂಹ.

‍ಲೇಖಕರು avadhi

9 April, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading