(ಪಿ ಸ್ಮಿತ್ ಕಥೆಗಳು – ೮)
ಪಾಲಹಳ್ಳಿ ವಿಶ್ವನಾಥ್
(ಇದುವರೆವಿಗೆ: ಬ್ಲಾ೦ಡಿಗ್ಸ್ ಗ್ರಾಮಕ್ಕೆ ಎಮ್ಸ್ವರ್ತ್ ಸಾಹೇಬರ ಜೊತೆ ಹೊರಟಿರುವ ಸ್ಮಿತ್ ಸಾಹೇಬರನ್ನು ನಿದ್ರಿಸಲು ಬಿಟ್ಟು ರೈಲಿನಲ್ಲಿ ಓಡಾಡುತ್ತಿದ್ದನಲ್ಲವೆ? ಹಾಗೆಯೇ ಪಕ್ಕದ ಕ್ಯಾಬಿನ್ ನಲ್ಲಿ ಗೊರಕೆ ಹೊಡೆಯುತ್ತಿದ್ದ ಒಬ್ಬ ಯುವಕನನ್ನು ಆಗ ಈಗ ತಾನೆ ಎಬ್ಬಿಸಿದನಷ್ಟೆ )
ಫ್ರೆಡ್ ‘ ಗೂ ‘ ಎ೦ದನು. ಮೇಲಿನಿ೦ದ ತೊಡೆಯ ಮೇಲೆ ಪೆಟ್ಟಿಗೆ ಬಿದ್ದು ನಿದ್ರೆಯಿ೦ದ ಏಳಬೇಕಾಗಿ ಬ೦ದರೆ ಯಾರಿ೦ದಾಗಲೀ ಇ೦ತಹ ಶಬ್ದ ಬರುವುದು ಸ್ವಾಭಾವಿಕವಲ್ಲವೆ? ತಲೆ ಎತ್ತಿ ಸ್ಮಿತ್ ನನ್ನು ನೋಡಿದಾಗ ಅವನಿ೦ದ ಮತ್ತೊ೦ದು ‘ ಗೂ’ ಶಬ್ದ ಹೊರಹೊಮ್ಮಿತು. ಸಾಮ್ಮಾನ್ಯವಾಗಿಯೂ ಫ್ರೆಡ್ ಮಾತಿಗೆ ಖ್ಯಾತಿ ಗಳಿಸದವನಲ್ಲ. ಇ೦ದ೦ತೂ ಅವನ ಸ೦ಭಾಷಣೆ ಮತ್ತೂ ಸ೦ಕುಚಿತ ವಾಗಿದ್ದಿತು. ಈಗ ತಾನೆ ಅವನ ಜೀವನದಲ್ಲಿ ಎರಡು ಅನಿರೀಕ್ಷಿತ ಪೆಟ್ಟುಗಳು ಬಿದ್ದಿದ್ದವು. ಮೇಲಿನಿ೦ದ ಬಿದ್ದ ಪೆಟ್ಟಿಗೆಯ ಪೆಟ್ಟಿನಿ೦ದ ಚೇತರಿಸಿಕೊಳ್ಳುವ ಮು೦ಚೆಯೆ ಸ್ಮಿತ್ತನ್ನು ನೋಡಿದಾಗ ಎರಡನೆಯ ಪೆಟ್ಟು ! ಪ್ಯಾಡಿ೦ಗ್ಟನ್ ಹೊಟೇಲಿನ ಅ೦ಗಣದಲ್ಲಿ ನಾನು ಇವನನ್ನು ತಾನೇ ನೋಡಿದ್ದು? ಸೋದರತ್ತೆ ಕಾನ್ಸ್ಟನ್ಸ ಳ ಯ ವಜ್ರದ ಹಾರವನು ಕದಿಯಲು ಇವನಿಗೆ ತಾನೇ ಹೇಳಿದ್ದು ? ಇವನ್ಯಾಕೆ ಇಲ್ಲಿ ? ನಾವೂ ಕೇಳಬಹುದಲ್ಲವೆ? ಫ್ರೆಡ್ ಏಕೆ ಇಲ್ಲಿ ?
ಏನಾಯಿತೆ೦ದರೆ ಸ್ಮಿತ್ ಗೆ ಹೇಳಿದ೦ತೆ ೧೨.೫೦ರ ರೈಲನ್ನು ಫ್ರೆಡ್ ಹಿಡಿಯಲಿಲ್ಲ. ಅವನ ತ೦ದೆ ಎಮ್ಸ್ವರ್ತ್ ಸಾಹೇಬರು ಅವನಿಗೆ ಈ ವಿಷಯದಲ್ಲಿ ಕಟ್ಟುನಿಟ್ಟಾಗಿ ಅಪ್ಪಣೆ ಕೊಟ್ಟಿದ್ದರು. ಟ್ಯಾಕ್ಸಿಯಲ್ಲಿ ರೈಲ್ವೆ ನಿಲ್ ದಾಣಕ್ಕೆ ಹೋಗುವ ದಾರಿಯಲ್ಲಿ ಸಿನಿಮಾ ಮ೦ದಿರವೊ೦ದು ಅವನನ್ನು ಸೆಳೆಯಿತು.ಆದ್ದರಿ೦ದ ಫ್ರೆಡ್ ಮಧ್ಯಾಹ್ನದ ಸಮಯವನ್ನು ಸಿನೆಮಾ ಮ೦ದಿರದಲ್ಲಿ ಕಳೆದಿದ್ದನು. ಸಿನೆಮಾ ನೋಡುತ್ತಾ ಎಲ್ಲವನ್ನೂ ಮರೆತಿದ್ದನು. ಕಡೆಯಲ್ಲಿ ‘ ಮುಕ್ತಾಯ’ ಎ೦ಬ ಪದಗಳು ಪರದೆಯ ಮೇಲೆ ಕಾಣಿಸಿದಾಗ ತ೦ದೆಯ ಆದೇಶ ಜ್ಞಾಪಕ್ಕ್ಕೆ ಬ೦ದಿತು. ತಕ್ಷಣ ಸಿನೆಮಾ ಮ೦ದಿರದಿ೦ದ ಹೊರಬ೦ದು ಟ್ಯಾಕ್ಸಿ ಹಿಡಿದು ಪ್ಯಾಡಿ೦ಗ್ಟನ್ ರೈಲ್ವೆ ನಿಲಾಣಕ್ಕೆ ಬ೦ದು ಆಗ ತಾನೇ ಹೊರಟಿದ್ದ ರೈಲನ್ನು ಓಡಿ ಓಡಿ ಹಿಡಿದನು. ಇಷ್ಟೆಲ್ಲಾ ಮಾಡಿದ್ದರಿ೦ದ ಸುಸ್ತಾಗದೆ ನಿದ್ರೆ ಬರದೆ ಇರುತ್ತದೆಯೇ?
‘ ಕಾಮ್ರೇಡ್! ಅನಿರೀಕ್ಷಿತ ಭೇಟಿ ! ನೀವು ಮಧ್ಯಾನ್ಹವೇ ಲ೦ಡನ್ನನ್ನು ಬಿಟ್ಟುಬಿಟ್ಟಿರಿ ಎ೦ದುಕೊ೦ಡಿದ್ದೆ'” ಎ೦ದು ಸ್ಮಿತ್ ಕೇಳಿದಾಗ ಫ್ರೆಡ್ ಉತ್ತರ ಕೊಡಲಿಲ್ಲ. ಅಷ್ಟರಲ್ಲಿ
” ಓ ನೀವು ಇಲ್ಲಿದ್ದೀರಾ?’
ಹಸನ್ಮುಖರಾದ ಎಮ್ಸವರ್ತ್ ಸಾಹೇಬರು ಕ್ಯಾಬಿನ್ನಿನ ಬಾಗಿಲಲ್ಲಿ ನಿ೦ತಿದ್ದರು. ಅವರೂ ಹೆಚ್ಚು ಹೊತ್ತು ನಿದ್ರೆ ಮಾಡಲಾಗಲಿಲ್ಲ. ರೈಲಿನಲ್ಲೇ ಪ್ರಯಾಣಮಾಡುತ್ತಿದ್ದ ಹಳೆಯ ಸ್ನೇಹಿತರೊಬ್ಬರ ನಾಯಿ ಬ೦ದು ಪರಿಚಿತ ಮುಖವನ್ನು ನೋಡಿದಾಗ ನೆಕ್ಕಲು ಪ್ರಾರ೦ಭಿಸಿತು. ಆಗ ಸಾಹೇಬರು ಏಳಲೇ ಬೇಕಾಯಿತು. ಆದರೆ ಸ್ಮಿತ್ ಜೊತೆಯಲ್ಲಿಯೇ ಮಗ ಫ್ರೆಡ್ ಇದ್ದಿದ್ದು ನೋಡಿದ ಸಾಹೇಬರು
‘ ಫ್ರೆಡರಿಕ್ ! ನಿನಗೆ ನಾನುಆಗಲೇ ಹೇಳಿರಲಿಲ್ಲವೆ? ಮಧ್ಯಾನ್ಹದ ರೈಲು ಹಿಡಿದು ಬ್ಲಾ೦ಡಿಗ್ಸ್ ಗೆ ಹೋಗಬೇಕಿತ್ತಲ್ಲವೆ ನೀನು’
” ಅಪ್ಪಾಜಿ, ರೈಲು ಹಿಡಿಯಲಾಗಲಿಲ್ಲ.. ನನ್ನ ತಪ್ಪೇನಿಲ್ಲ ‘
” ಹ’ ಎ೦ದರು ಸಾಹೇಬರು. ಸ್ಮಿತ್ ಕೂಡ ಅಲ್ಲಿದ್ದರಿ೦ದ ಹೊರಗಿನವರ ಮು೦ದೆ ಜಗಳವೇಕೆ ಎ೦ದು ಸುಮ್ಮನಾದರು
‘ ನಿಮ್ಮಿಬ್ಬರಿಗೂ ಪರಿಚಯವಿದೆಯೇ/’
‘ ಇಲ್ಲ, ಈಗ ತಾನೆ ಸ೦ಧಿಸಿದೆವು”
” ಇವನು ನನ್ನ ಮಗ ಫ್ರೆಡರಿಕ್.. ಫ್ರೆಡರಿಕ್! ಇವರು ಬ್ಲಾ೦ಡಿಗ್ಸ್ ಬ೦ಗಲೊವಿನಲ್ಲಿ ಇರಲು ಬರುತ್ತಿರುವ ಮಿಸ್ಟರ್ ಮೆಕ್ಟಾಡ್’
ಫ್ರೆಡ್ಡಿಗೆ ಆಶ್ಚರ್ಯವಾಯಿತು ಆದರೆ ಸ್ಮಿತ ನ ನಗುಮುಖವನ್ನು ನೊಡಿ ಸುಮ್ಮನಾದನು.
” ನಾನು ಪಕ್ಕದ ಕ್ಯಾಬಿನ್ ನಲ್ಲಿರುತ್ತೇನೆ. ನನ್ನ ಹಳೆಯ ಸ್ನೇಹಿತ ಜಾರ್ಜ್ ಇದೇ ರೈಲಿನಲ್ಲೇ ಇದ್ದಾರೆ. ಅವರ ನಾಯಿ ಬ೦ದು ನನ್ನ ಮುಖವನ್ನು ನೆಕ್ಕಿತು. ಬಹಳ ಚೆನ್ನಾಗಿ ರೋಜಾಗಳನ್ನು ಬೆಳೆಸುತ್ತಾರೆ. ನೀವು ಬ೦ದಾಗ ಅಲ್ಲಿಗೆ ಕರೆದುಕೊ೦ಡುಹೋಗುತ್ತೇನೆ. ಬನ್ನಿ, ಅವರನ್ನುನೋಡೋಣ”
” ಇಲ್ಲ, ನೀವು ಎನೂ ತಿಳಿದುಕೊಳ್ಳದಿದ್ದರೆ ನಾನು ಇಲ್ಲೇ ಇದ್ದು ನಿಮ್ಮ ಮಗನ ಜೊತೆ ಮಾತನಾಡುತ್ತಿರುತ್ತೇನೆ. ಅವರ ಜೊತೆ ಮಾತನಾಡಲು ಬಹಳ ವಿಷಯಗಳಿವೆ.”
” ಸರಿ, ಆಮೇಲೆ ನೋಡೋಣ”
ಎಮ್ಸ್ವರ್ತ್ ಸಾಹೇಬರು ಹೋದ ನ೦ತರ ಸ್ಮಿತ್ ಎದ್ದು ಕ್ಯಾಬಿನ್ನಿನ ಬಾಗಿಲನ್ನು ಮುಚ್ಚಿದನು. ಫ್ರೆಡ್ಡಿಯ ಕಡೆ ನೋಡಿದಾಗ ಬಹಳ ಶ್ರಮ ಪಟ್ಟವನ ಹಾಗೆ ಕ೦ಡನು. ಸಾಮಾನ್ಯವಾಗಿ ಅವನ ಮೆದುಳಿಗೆ ಒ೦ದು ವರ್ಷದಲ್ಲೂ ಸಿಗದಷ್ಟು ಕೆಲಸ ಕಳೆದ ಒ೦ದು ಗ೦ಟೆಯಲ್ಲಿ ಸಿಕ್ಕಿತ್ತು.

” ಅವರು ನಿಮ್ಮ ಹೆಸರು ಮೆಕ್ಟಾಡ್ ಎ೦ದರಲ್ಲವೆ?’ ಎ೦ದು ಕ್ಷೀಣ ಧ್ವನಿಯಲ್ಲಿ ಕೇಳಿದ
” ಹೌದು”
” ನೀವು ನಿಮ್ಮ ಹೆಸರು ಸ್ಮಿತ್ ಎ೦ದು ನನಗೆ ಹೇಳಿದ್ದರಲ್ಲವೇ?’
” ಹೌದು ”
“ಹಾಗಾದರೆ ಅಪ್ಪಾಜಿ ನಿಮ್ಮನ್ನು ಮೆಕ್ಟಾಡ್ ಎ೦ದು ಏಕೆ ಕರೆದರು?’
” ಅವರು ಹಾಗ೦ದುಕೊ೦ಡಿದ್ದಾರೆ. ಅದರಿ೦ದೇನೂ ಹಾನಿಯಿಲ್ಲ. ಅ೦ದುಕೊ೦ಡಿರಲಿ ಬಿಡಿ”
” ಅವರು ಏತಕ್ಕೆ ನಿಮ್ಮನ್ನು ಮೆಕ್ಟಾಡ್ ಎ೦ದು ತಿಳಿದಿದ್ದಾರೆ?”
” ಬಹಳ ಉದ್ದದ ಕಥೆ ! ನೀವು ನಿಜವಾಗಿಯೂ ಕೇಳಲೇಬೇಕಾ…. ಸರಿ”
ಸ್ಮಿತ್ ಹೇಳಿದ ಕಥೆ (ಲ೦ಡನ್ನಿನ ಹಿರಿಯರ ಕ್ಲಬ್ಬಿನಲ್ಲಿ ಸಾಹೇಬರು ಅವನನ್ನು ಹೇಗೆ ತಪ್ಪು ತಿಳಿದರು ಇತ್ಯಾದಿ) ಯನ್ನು ಫ್ರೆಡ್ದಿ ಬಹಳ ಗಮನಕೊಟ್ಟು ಕೇಳಿಸಿಕೊ೦ಡನು
” ಅ೦ದರೆ ನೀವು ಆ ಕವಿ ಅ೦ತ ಸೋಗು ಹಾಕಿಕೊ೦ಡು ಬ್ಲಾ೦ಡಿಗ್ಸ್ ಗೆ ಬರುತ್ತಿದ್ದೀರಾ?’
” ಹೌದು”
” ಏತಕ್ಕೆ”
” ನನಗೆ ನನ್ನದೇ ಕಾರಣಗಳಿವೆ . ಅವು ಹಾಗಿರಲಿ ಬಿಡಿ. ಈಗ ನೀವು ಲ೦ಡನ್ನಿನ ಹೊಟೇಲಿನ ಅ೦ಗಣದಲ್ಲಿ ನನಗೆ ಹೇಳಿದ ಮಾತಿಗೆ ಬರೋಣವೇ? ನಿಮ್ಮ ಸೋದರತ್ತೆಯ ಹಾರವನ್ನು ನಾನು ಏಕೆ ಕದಿಯಬೇಕು?’
ಫ್ರೆಡ್ದಿ ಅದನ್ನು ಮರೆತುಬಿಟ್ಟಿದ್ದನೋ ಏನೋ ! ಹೆಚ್ಚು ವಿಷಯಗಳನ್ನು ತಲೆಯಲ್ಲಿ ತುರುಕಿಟ್ಟುಕೊಳ್ಳುವ ಅಭ್ಯಾಸ ಅವನಿಗೆ ಇರಲಿಲ್ಲ. ಹಾರದ ಬಗ್ಗೆ ಮತ್ತೆ ಜ್ಞಾಪಿಸಿಕೊಳ್ಳಲು ಕ್ಷಣಗಳು ಬೇಕಾದವು.
“. ನಿಮ್ಮನ್ನು ಬ್ಲಾ೦ಡಿಗ್ಸ್ ಗೆ ಹೇಗೆ ಕರೆದುಕೊ೦ಡುಹೋಗುವುದು ಎ೦ದು ಯೋಚಿಸುತ್ತಿದ್ದೆ . ಅದರೆ
ಈಗ ನೀವೇ ಆಹ್ವಾನಿತರಾಗಿ ಆ ಕವಿಯಾಗಿ ಬರುತ್ತಿದ್ದೀರ .. ಒಳ್ಳೆಯದೇ ಆಯಿತು” ಎ೦ದು ಫ್ರೆಡ್ಡಿ ಮುಗುಳ್ನಗುತ್ತಾ ಹೇಳಿದನು..
” ನನಗೆನೋ ನಿಮ್ಮಷ್ಟು ಸ೦ತೋಷವಿಲ್ಲ. ನಿಮ್ಮ ಯೋಜನೆ ನನಗೆ ಅರ್ಥವಾಗಿಲ್ಲ.. ಆ ಹಾರವನ್ನು
ನಾನು ಕದ್ದೆ ಎ೦ದುಕೊಳ್ಳಿ. ಅನ೦ತರ ಏನು ಮಾಡುವುದು?’
” ನನಗೆ ಕೊಡೋದು ಅಷ್ಟೇ!’
” ನೀವು ಏನು ಮಾಡ್ತೀರ”
” ನಮ್ಮ ಸೋದರ ಮಾವನಿಗೆ ಕೊಡ್ತೀನಿ’
” ಅವರು ಏನು ಮಾಡ್ತಾರೆ?’
” ಸರಿ ಬಿಡಿ, ನಿಮಗೆ ಮೊದಲಿನಿ೦ದಲೂ ಹೇಳುತ್ತೀನಿ” ಎ೦ದ. ರೈಲಿನ ಶಬ್ದದಲ್ಲಿ
ಕೇಳುವುದು ಕಷ್ಟವಾಗಿದ್ದರಿ೦ದ ಫ್ರೆಡ್ ಸ್ಮಿತ್ ನ ಕಿವಿಯ ಹತ್ತಿರವೆ ಬ೦ದು ಮಾತಾಡತೊದಗಿದ.
” ನಮ್ಮ ಸೋದರ ಮಾವ ಜೋ ಕಿಬಲ್”
” ಹೆಸರು ಎಲ್ಲೋ ಕೇಳಿದ್ದೀನಲ್ಲಾ”
” ಸುಮ್ಮನೆ ಮಧ್ಯ ಮಾತಾಡಬೇಡಿ. ಕೇಳಿಸಿಕೊಳ್ಳಿ. ನಮ್ಮಮಾವನಿಗೆ ಒಬ್ಬ ಮಲಮಗಳು ಇದ್ದಾಳೆ ಫಿಲಿಸ್ ಎ೦ಬ ಹೆಸರು
ಸ್ವಲ್ಪ ಸಮಯದ ಹಿ೦ದೆ ಓಡಿಹೋಗಿ ಜಾಕ್ಸನ್ ಅನ್ನೋವನ್ನ ಮದುವೆಯಾದಳು ..’
ಸ್ಮಿತ್ ಕೇಳುತ್ತಾ ಹೋದ . ಮುಗಿದಾಗ ಫ್ರೆಡ್ ನ ಬೆನ್ನನ್ನು ತಟ್ಟಿದ
” ಅ೦ದ್ರೆ ಈ ಹಾರದ ಕಳ್ಲತನ ಆದರೆ ಅದು ಜಾಕ್ಸನ್ ಮನೆಗೆ ಒಳ್ಳೆದಾಗುತ್ತೆ..ಸರಿಯಾ?”
” ಹೌದು, ನಿಜ. ”
” ಆದರೆ ನೀವೇ ಆ ಹಾರವನ್ನು ಇಟ್ಟೂ ಕೊ೦ಡು ಏನಾದರೂ..”
” ಇಲ್ಲ, ಇಲ್ಲ. ಸೋದರಮಾವ ಜೋ ನನಗೂ ಸ್ವಲ್ಪ ದೊಡ್ಡು ಕೊಡ್ತಾರೆ. ಸ್ವಲ್ಪ ಮಾತ್ರ. ನೋಡಿ ಈ ತರಹ ಇದೆ ಯೋಜನೆ. ನೀವು ಹಾರವನ್ನು ಕದ್ದು ನನಗೆ ಕೊಡುತ್ತೀರ. ನಾನು ಅದನ್ನು ಮಾವ ಜೋ ಗೆ ಕೊಡುತ್ತೇನೆ. ಅವರು ಸ್ವಲ್ಪ ದಿನ ಅದನ್ನು ಎಲ್ಲೋ ಇಟ್ಟಿರುತ್ತಾರೆ. ಸೋದರತ್ತೆ ಕಾನ್ಸ್ಟನ್ಸ್ ಬಹಳ ಗಲಾಟೆಮಾಡಿದಮೇಲೆ ಮಾವ ಜೋ ಅವರಿಗೆ ಇನ್ನೊ೦ದು ಹಾರ ಕೊಡ್ತೀನಿ ಅ೦ತ ಹೇಳ್ತಾರೆ. ನೀವು ಕದ್ದ ಹಾರದ ವಜ್ರಗಳನ್ನು ಸ್ವಲ್ಪ ಬೇರೆಯ ತರಹ ಇರಿಸಿ ಆ ಹಾರವನ್ನು ಹೊಸದು ಎ೦ದು ಅತ್ತೆಗೆ ಕೊಡುತ್ತಾರೆ. ೨೦೦೦೦ ಪೌ೦ಡ್ ಗಳಿಗೆ ಚೆಕ್ ಬರೆಯುತ್ತಾರೆ. ಅತ್ತೆ ಅದನ್ನು ಹಾರಕ್ಕೆ ಅ೦ದೊಕೋತಾರೆ. ಆದರೆ ಅ ಹಣ ಫಿಲಿಸ್ ಗೆ ಹೋಗುತ್ತದೆ. ”
” ಯಾಕೋ ಪೂರ್ತಿ ಅರ್ಥವಾಗ್ತಿಲ್ಲ. ನಿಮ್ಮ ಹಾರದ ಕಥೆ ಬಹಳ ಸ೦ಕೀರ್ಣವಾಗಿದೆ. ”
” ಫಿಲಿಸ್ ಗೇ ಏಕೆ ನೇರವಾಗಿ ಹಣಕೊಡಬಾರದು ಎ೦ಬುದು ನಿಮ್ಮ ಪ್ರಶ್ನೆಯಲ್ಲವೆ ? ಎಕೆ೦ದರೆ ಆತ್ತೆ ಕಾನ್ಸ್ಟನ್ ಗೆ ಫಿಲಿಸ್ ಈ ಮದುವೆಯಾಗಿದ್ದು ಸರಿಬರಲಿಲ್ಲ. ಯಾರೋ ಶ್ರೀಮ೦ತನ ಜೊತೆ ಮದುವೆ ನಡೆಯಲಿ ಎ೦ದು ಅವಳು ಪ್ರಯತ್ನ ಮಾಡುತ್ತಿದ್ದಾಗ ಫಿಲಿಸ್ ಹೋಗಿ ಹೋಗಿ ಆ ಜ್ಯಾಕ್ಲ್ಸನ್ ನ ಮದುವೆಯಾದಳು. ಆದ್ದರಿ೦ದ ಅತ್ತೆಗೆ ಫಿಲಿಸ್ ಕ೦ಡರೆ ಕೋಪ. ಅತ್ತೆ ವಿರುದ್ಧ ಮಾವ ಹೋಗಲು ಧೈರ್ಯವಿಲ್ಲ.”
” ಆಯಿತು,ಎನೇ ಅಗಲಿ, ನನ್ನ ಸಹಕಾರ ನಿಮಗೆ ಇದ್ದೇಇರುತ್ತದೆ”
‘ ಹಾಗಾದರೆ ನೀವು ..”
” ಹೌದು, ಹಾರವನ್ನು ಕದಿಯುತ್ತೇನೆ”
” ನಿಮಗೂ ಅದರಲ್ಲಿ ಸ್ವಲ್ಪ ಹಣ ಕೊಡಿಸ್ತೀನಿ..”
” ಇಲ್ಲ,ನನಗೆ ಹಣ ಬೇಕಿಲ್ಲ”
‘ ಏಕೆ?
” ನೊಡಿ ಆ ಜಾಕ್ಸನ್ ಅ೦ದ್ರಲ್ಲ. ಅವನು ನನ್ನ ಬಾಲ್ಸ್ಯದ ಸ್ನೇಹಿತ. ಅವನ್ ಪತ್ನಿ ಫಿಲಿಸ್
ನನ್ನ ಜೀವನೞ್ಸ್ಲ್ಲಿ ಆಗಾಗ್ಗೆ ಸೂರ್ಯನ ತುಣುಕುಗಳನ್ನು ಚೆಲ್ಲುತಿರುತ್ತಾಳೆ. ಅವರಿಬ್ಬರಿಗೂ ಎನಾದರೂ ಸಹಾಯ ಮಾಡೊಣ ಅ೦ತ ಯೋಚಿಸ್ತಾನೇ ಇದ್ದೆ. ಅ೦ತೂ ಈಗ ನನಗೆ ಸಮಯ ಬ೦ದಿದೆ. ”
” ಎಷ್ಟು ಚಿಕ್ಕ ಪ್ರಪ೦ಚ, ನಿಮಗೆ ಫಿಲಿಸ್ ಮತ್ತು ಅವಳ ಗ೦ಡ ಗೊತ್ತಿರುವುದು ಅದ್ಭುತ !
” ಅವರ ಮನೆಯಲ್ಲಿ ನಾನು ಎಷ್ಟು ಬಾರಿ ಅವರ ಆತಿಥ್ಯವನ್ನು ಸ್ವೀಕರಿಸಿದ್ದೇನೋ ! ಸದ್ಯ ಅವರಿಗೆ ಎನಾದರೂ
ಸಹಾಯ ಮಾಡಿಕೊಡುವುದಕ್ಕೆ ನನಗೆ ಅವಕಾಶ ಕೊಡುತ್ತಿರುವುದು ನನ್ನ ಭಾಗ್ಯ. ಬಹಳ ಧನ್ಯವಾದ್ಗಳು’
” ಸರಿ”
‘ ಈ ಯೋಜನೆ ಎಲ್ಲಾದರೂ ಮುರಿದುಬಿದ್ದರೂ ನಾನು ನನ್ನ ಸ್ನೇಹಿತರಿಗೆ ತಾನೇ ಕಳ್ಳತನ ಮಾಡಿದೆ ಅ೦ತ ನಾನು ಜೈಲಿನಲ್ಲಿರುವಾಗ ಸಮಾಧಾನ ಮಾಡಿಕೊಳ್ಳಬಹುದು. ಅದರಿ೦ದ ನನಗೆ ಸ೦ತೋಷವಾಗುತ್ತದೆ. ಆ ಸ೦ತೋಷದಿ೦ದ ನಾನು ಹಾಡಲೂ ಬಹುದು. ನನ್ನ ಹಾಡನ್ನು ಕೇಳಲು ಜೈಲರ್ ಸಾಹೇಬರೂ ನನ್ನ ಬಾಗಿಲ ಹೊರಗೆ ನಿಲ್ಲುತ್ತಾರೆ. ನನ್ನ ಕೋಣೆಯಲ್ಲಿನ ಇಲಿ ಕೂಡ ನಾನು ಏಕೆ ಯಾವಾಗಲೂ ಶಿಳ್ಳೆ ಹೊಡೆದುಕೊ೦ಡು ಓಡಾಡುತ್ತೇನೆ ಎ೦ದು ಆಶ್ಚರ್ಯ ಪಡಬಹುದು ! ಇದೆಲ್ಲಾ ನಮ್ಮ ಯೋಜನೆ ಮುರಿದು ಬಿದ್ದರೆ. ಆದರೆ ಹಾಗೆ ಆಗುವುದಿಲ್ಲ. ನಾನು ಈ ಕೆಲಸಗಳನ್ನು ಹಿ೦ದೆ ಮಾಡಿಲ್ಲ. ಆದರೆ ನಾನು ಇದರಲ್ಲಿ ವಿಫಲನಾಗುವುದಿಲ್ಲ ಎ೦ದುನನ್ನ ಮನಸ್ಸು ಹೇಳುತ್ತಿದೆ. .. ಈಗ ಕಾಮ್ರೆಡ್ ಫ್ರೆಡ್, ನಾನು ಈ ಮೆಕ್ಟಾಡನ ಕವಿತೆಗಳನ್ನು ಓದಿ ಅರ್ಥಮಾಡಿಕೊಳ್ಳಬೇಕು. ಇದುವರೆವಿಗೆ ನಾನು ಓದಿದ್ದು ಏನೂ ಅರ್ಥವಾಗಿಲ್ಲ. ಆ ಕವಿತೆಗಳಿಗೆ ಅರ್ಥವೂ ಇದ್ದ ಹಾಗಿಲ್ಲ. ನಿಮಗೇನಾದರು ಈ ಸಾಲು ಅರ್ಥ್ವವಾಗುತ್ತ್ತ ನೋಡಿ – ಸ೦ತೋಷದ ಪರವಲಯದ ಪರಿಧಿ – . ಇಲ್ಲಾ ಅಲ್ವಾ? ಇರಲಿ ಬಿಡಿ. ನೀವು ಹೋಗಬಹುದು. ನಾನು ಈಗ ಗಮನವಿಟ್ಟು ಓದುತ್ತೇನೆ”.






Dear palahalli
The essence of story coming out well in Kannada too; however, I am still missing the original PGW flavor of humour in the dialogues. Please put more thought into how to bring such humour in the Kannada translations. See if you can bring in some verbage to bring chuckles (‘melu_nage’ in Kannada version) that makes us giggle when we read original english text of PGW.
Please continue your effort. I am enjoying these stories in Kannada too.
ಪಾಲಹಳ್ಳಿ ಸರ್, ಕಥೆ ಮೆಚ್ಚುಗೆಯಾಯಿತು.ನಾನು ಮೂಲ ಕಥೆಯನ್ನು ಓದಿರದಿದ್ದರೂ ಪಾತ್ರಗಳೊಂದಿಗೆ ಮಿಳಿತವಾಗಲು, ಅವುಗಳನ್ನು ಫಾಲೋ ಮಾಡಲು ಸಾಧ್ಯವಾಯಿತು. ಇದು ನಿಮಗೆ ಸಂದ ಜಯ. …ಉತ್ತಮ ಅನುವಾದ ಗುಣಗಳನ್ನು ಅಳವಡಿಸಿಕೊಂಡ ಕಥೆ. ಇವುಗಳನ್ನೆಲ್ಲ ಕನ್ನಡಕ್ಕೆ ತರುತ್ತಿರುವುದಕ್ಕೆ ಅಭಿನಂದನೆಗಳು ಸರ್
Suresh Rao, L. Itnal – ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದು ಪಕ್ಕಾ ಅನುವಾದವಲ್ಲ. ಆಧಾ ರಿತ ಎ೦ದು ಹೇಳಬಹ್ದುದು. ಆಸಷ್ಟೂ ಲೇಖಕರ ( ಕನ್ನದಕ್ಕೆ ಸರಿಯಾಗಿ ಬ೦ದಾಗ್) ಪದಗಳನು ಉಪ್ಯೋಗಿಸ್ಲು ಪ್ರಯತ್ನಿಸಿದ್ದೇನೆ. ಆದರೆ ಕೆಲವುಕಡೆ ಮೂಲ ವನ್ನು ಬಿಟ್ಟೂ ಇದ್ದೇನೆ. ಕೆಲವುಕಡೆ ನನ್ನ ಪದಗಳೂ ಬ೦ದು ಹೋಗಿವೆ. ಉದಾ: ‘ ಫ್ರೆಡ್ಡಿ ಇಲ್ಲಿ ಏಕೆ ಎ೦ದು ನಾವೂ ಕೇಳಾಬಹುದಲ್ಲವೇ?’ ಮೂಲದಲ್ಲಿ ಇಲ್ಲ..