ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳ್ಳಿಮೋಡ ನಿಮಗಾಗಿ ತೆರೆದಿದೆ..

ಮೀರಾ ಶಂಕರ

‘ಬೆಳ್ಳಿಮೋಡ ‘ – ಶ್ರೀಮತಿ ತ್ರಿವೇಣಿ ಅವರ ಕಾದಂಬರಿ ಹಾಗೂ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ, ಮಿನುಗುತಾರೆ ಕಲ್ಪನಾ ಅವರ ಅಪ್ರತಿಮ ನಟನೆ.

ಶ್ರೀಮತಿ ತ್ರಿವೇಣಿ ಅವರು ಬಾಳಿ ಬದುಕಿದ, ಪ್ರಸಿದ್ಧ ಕಾದಂಬರಿಗಳನ್ನು ಬರೆದ, ಅವರ ಮನೆ ಮೈಸೂರು ಚಾಮರಾಜಪುರಂನಲ್ಲಿ ಇದೀಗ ಅಕ್ಟೋಬರ್ 12, 2022, ಮ್ಯೂಸಿಯಂ/ ವಸ್ತು ಸಂಗ್ರಹಾಲಯ ಆಗಿ ಪುನಃಸ್ಥಾಪನೆ ಕೆಲಸ ಶುರುವಾಗಿದೆ.

ಈ ಮನೆಗೆ ‘ಬೆಳ್ಳಿಮೋಡ ‘ ಎಂಬ ಹೆಸರು ಇಡಲಾಗಿದೆ. ಮುಂದಿನ ವರ್ಷ ಕರ್ನಾಟಕದ ಜನತೆಗೆ, ತ್ರಿವೇಣಿ ಅವರ ಅಸಂಖ್ಯಾತ ಅಭಿಮಾನಿಗಳಿಗೆ ‘ಬೆಳ್ಳಿಮೋಡ ‘ ತೆರೆಯಲಾಗುತ್ತದೆ.

ಮುಂಬರುವ ದಿನಗಳಲ್ಲಿ ಇಲ್ಲಿ ವೈವಿಧ್ಯವಾದ ಸಾಹಿತ್ಯಿಕ ಚಟುವಟಿಕೆಗಳು, ಕವಿ ಗೋಷ್ಠಿ, ಕಥಾ ಸ್ಪರ್ದೆಗಳು, ಚರ್ಚೆಗಳು, ನವಸಾಹಿತಿಗಳಿಗೆ ಮಾರ್ಗದರ್ಶನ ಕೊಡುವ ಹಿರಿಯ ಸಾಹಿತಿಗಳ ಸಂದರ್ಶನಗಳು, ಹಾಗೂ ಮಾನಸಿಕ ಸಮಸ್ಯೆಗಳನ್ನು ಬಗೆಹರಿಸುವ ಸಲಹಾ ಕೇಂದ್ರ ಸ್ಥಾಪಿತಗೊಳ್ಳುತ್ತದೆ.

ಇದೀಗ ಸದ್ಯದಲ್ಲೇ ತ್ರಿವೇಣಿ ಅವರ ‘ಆಡಿಯೋ ‘ ಕಥೆ ಹಾಗೂ ಕಾದಂಬರಿಗಳು; ಡಿಜಿಟಲ್ ಪುಸ್ತಕಗಳು ಬಿಡುಗಡೆಯಾಗಲಿದೆ. ನನ್ನದೊಂದು ಅಭಿಲಾಷೆ, ಕೋರಿಕೆ, ತ್ರಿವೇಣಿಯವರ ಅಭಿಮಾನಿಗಳು ‘ ಬೆಳ್ಳಿಮೋಡ ‘ ವನ್ನು ತಮ್ಮದೆಂದೇ ಭಾವಿಸಿ, ಅಲ್ಲಿ ಕಾರ್ಯಕ್ರಮಗಳು, ಹಾಗೂ ನೀವೇ ಸೃಷ್ಟಿಸಿದ ವೈವಿದ್ಯವಾದ ಸಾಹಿತ್ಯದ ಚಟುವಟಿಕೆಗಳನ್ನು ಪ್ರಾರಂಭಿಸಿ.

ಈ ನಿಟ್ಟಿನಲ್ಲಿ ಯುವಜನಾಂಗಕ್ಕೂ ಪುಸ್ತಕದ ಹವ್ಯಾಸ ಬೆಳೆಸಬೇಕು, ಅವರ ವಯಸ್ಸಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ‘ ಬೆಳ್ಳಿಮೋಡ ‘ ದಲ್ಲಿ ನಡೆಸುವ ಎಲ್ಲರಿಗೂ ಸ್ವಾತಂತ್ರ್ಯ ಇದೆ, ಆಹ್ವಾನವಿದೆ.

ತ್ರಿವೇಣಿ ಅವರ ‘ಬೆಳ್ಳಿಮೋಡ ‘ ವನ್ನು ನೀವೆಲ್ಲರೂ ಸೇರಿ ಆಗಸದೆತ್ತರ ಬೆಳೆಸಬೇಕೆಂದು ಕೇಳಿಕೊಳ್ಳುತ್ತೇನೆ.
ತ್ರಿವೇಣಿಯವರು ಎಲ್ಲರ ಅಮೂಲ್ಯವಾದ ನಿಧಿ.

‍ಲೇಖಕರು Admin

18 October, 2022

1 Comment

  1. Shyamala Madhav

    ಪುಸ್ತಕ ಲೋಕಾರ್ಪಣಾ ಸಮಾರಂಭಗಳೂ ನಡೆಯ ಬಹುದು.
    ತುಂಬು ನಿರೀಕ್ಷೆಯೊಂದಿಗೆ,

    – ಶ್ಯಾಮಲಾ ಮಾಧವ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading