ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೋಳ್ಪಾಡಿ ಮತ್ತು ಕುಂ ವೀ…

ಪ್ರಸನ್ನ ಚಲಂ

ವ್ಯಕ್ತಿ ಜನಪ್ರಿಯನಾದಷ್ಟು ನಿಖರತೆಯ ಬಗ್ಗೆ ಗಮನವಹಿಸಬೇಕಾಗುತ್ತದೆ. ಜನಪ್ರಿಯನಾದವನನ್ನು ಹಿಂಬಾಲಿಸುವವರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಈ ವಿಚಾರದ ಬಗ್ಗೆ ಆತನಿಗೆ ಸರಿಯಾದ ಅರಿವಿರಬೇಕಾಗುತ್ತದೆ.

ಸಿನಿಮಾ ನಟರದ್ದು ಜನಪ್ರಿಯತಯೇ. ಕ್ರಿಕೆಟ್ ತಾರೆಯರದ್ದು ಜನಪ್ರಿಯತೆಯೇ…ಈ ಜನಪ್ರಿಯತೆಯನ್ನು, ಅದು ನೀಡುವ ಶಕ್ತಿಯನ್ನು ನಾಡಿನ ಒಳಿತಿಗೆ ಶ್ರಮಿಸಿದವರ ಸಂಖ್ಯೆ ವಿರಳವಾಗಿದೆ. ಈ ವಿಷಯದಲ್ಲಿ ಡಾ ರಾಜ್ಕುಮಾರ್ ನಿಖರತೆಯ ವಿಷಯದಲ್ಲಿ ಬದ್ಧರಾಗಿದ್ದರು. ಅವರಿಗೆ ತನ್ನ ಜನ ಪ್ರಿಯತೆಯ ಬಗ್ಗೆಯೂ ಅರಿವಿತ್ತು. ಇದೆ, ವಿಷಯದಲ್ಲಿ ಗಂಭೀರವಾಗಿ ನೋಡಬೇಕಾಗಿರುವುದು ಸಾಹಿತ್ಯದ ವಿಚಾರದಲ್ಲಿ. ಕಳೆದ ಭಾನುವಾರ ಜೋಗಿಯವರ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವಿತ್ತು. ಅಲ್ಲಿನ ಪ್ರಮುಖ ಆಕರ್ಷಣೆ ಒಂದು  ಧೃವದ ಕುಂ. ವೀರಭದ್ರಪ್ಪ. ಇನ್ನೊಂದು ಧೃವದ ಲಕ್ಷ್ಮೀಶತೋಳ್ವಾಡಿ. ಅವರು ವಿರುದ್ಧ ದಿಕ್ಕಿನವರಂತೆ ಕಾಣುವುದಕ್ಕೆ ಕಾರಣವೂ ಈ ಜನಪ್ರಿಯತೆಯೇ.

ಕುಂ.ವೀರಭದ್ರಪ್ಪನವರು ಕಥೆಗಳ ಮೂಲಕ, ಕಾದಂಬರಿಗಳ ಮೂಲಕ ಜನಪ್ರಿಯ ಲೇಖಕರಾಗಿ ಹೊರಹೊಮ್ಮಿದವರು. ಲಕ್ಷ್ಮೀಶ ತೋಳ್ಪಾಡಿ ಅನ್ನುವ ಹೆಸರು ನನ್ನಂತಹವರಿಗೆ ತಿಳಿದದ್ದು ಇತ್ತೀಚೆಗೆ. ಅವರೂ ಕೂಡ ಒಂದು ವಲಯದಲ್ಲಿ ಜನಪ್ರಿಯರೇ. ಕುಂ.ವಿ ಯವರಿಗೆ ತುಂಬಾ ಬರೆಯುವವರನ್ನು ತಾತ್ಸಾರದಿಂದ ಕಾಣಲಾಗುತ್ತದೆ ಎಂಬ ಸಂಕಟ . ಕತೆ ಬೇಕು ಅಂದವರಿಗೆ ಕುಂ.ವೀ ಯವರು ಇಲ್ಲೆ ಕೂತಿರಿ ಅಂತ ಒಳಗೆ ಹೋಗಿ ಕಾಪಿ ತಂದು ಕೊಡುವ ಗೃಹಿಣಿಯಂತೆ ಕತೆ ಕೊಟ್ಟವರು. ಬರವಣಿಗೆಯಲ್ಲಿ ಗಂಭೀರವಾಗಿ ತೊಡಗಿಕೊಂಡವರು. ಒಬ್ಬ ಎಷ್ಟೆಲ್ಲಾ ಬರದರೂ ತೂಕವನ್ನು ಕಾಯ್ದುಕೊಳ್ಳುವ ರೀತಿಯನ್ನು ತೋರಿಸಿದವರು. ಲಕ್ಷ್ಮೀಶ ತೋಳ್ಪಾಡಿಯವರು ಇತ್ತೀಚೆಗೆ ’ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ’ ಅನ್ನುವಂತಹ ಪುಸ್ತಕ ಕೊಟ್ಟು ನಿಬ್ಬೆರರಾಗುವಂತೆ ಮಾಡಿದವರು. ಲಂಕೇಶ್‌ಗೆ ಇವರು ಆಧ್ಯಾತ್ಮ ಗುರುಗಳಾಗಿದ್ದವರು ಎಂಬಂತಹ ದಂತಕಥೆಗಳು ಅಲ್ಲಲ್ಲಿ ಕೇಳಿದ್ದೆವು. ಆದರೆ ಹೆಚ್ಚಾಗಿ ಕಾಣಿಸಿಕೊಂಡವರಲ್ಲ.

ಕಾರ್ಯಕ್ರಮದಲ್ಲಿ ಕುಂ.ವೀ ಮಾತನಾಡಲು ಎದ್ದು ನಿಂತಾಗ ಅವರ ಬಲಗೈಗೆ ಪೆಟ್ಟಾಗಿದ್ದುದು ಕಾಣಿಸಿತು. ನಾವೀಗ ಎಡಪಂಥೀಯ. ನನ್ನ ಬಲಗೈಗೆ ಪೆಟ್ಟಾಗಿರುವುದರಿಂದ ಅನಿವಾರ್ಯವಾಗಿ ಏನೂ ಬರೆಯದ ಎಡಪಂಥೀಯರ ಸಾಲಿಗೆ ಸೇರಬೇಕಾಗಿದೆ ಎಂದು ವಿಷಾದದಿಂದ ಹೇಳಿದರು. ಕುಂ.ವೀ. ಯವರಂತಹವರ ಮಾತನ್ನು ಲಘುವಾಗಿ ಪರಿಗಣಿಸುವುದು ಹೇಗೆ. ಅರೆ ಹೌದಲ್ಲಾ ಎಡಪಂಥೀಯರು ಬರೆಯುತ್ತಿಲ್ಲ ಅನ್ನಿಸಿದ್ದು ನಿಜ. ಆದರೆ ನನ್ನನ್ನು ದಿಗ್ಬ್ರಮೆಯುಂಟುಮಾಡಿದ್ದು ಕುಂವೀಯವರನ್ನು ಇದೂವರೆಗೆ ನಾನು ಎಡಪಂಥೀಯ ಅಂತಲೇ ನಂಬಿದ್ದ ಪೂರ್ವಾಗ್ರಹ. ಯಾಕೆ ನಾನು ಕುಂವೀಯನ್ನು ಎಡಪಂಥೀಯ ಅಂದು ಕೊಂಡೆ. ಅವರ ಕತೆಗಳನ್ನು ಓದಿದ್ದೆ. ಅವರ ಕತೆಯನ್ನಾದರಿಸಿದ್ದ ಸಿನೆಮಾಗಳನ್ನು ನೋಡಿದ್ದೆ. ಕೊಟ್ರ ಹೈಸ್ಕೂಲಿಗೆ ಸೇರಿದ್ದು ಕೋಟ್ರೇಶಿಯ ಕನಸು ಆಗಿ ಬಂದಾಗ ಅಲ್ಲಿ ನನಗೆ ಕಂಡದ್ದು ಎಡಪಂಥೀಯ ಪ್ರೇರಣೆಗಳೇ.

ಅವರ ಎಡಪಂಥೀಯ ಧೋರಣೆಗಳ ಬೇಸರ ಕಾಣಿಸಿಕೊಳ್ಳುವುದು ಶಾಮಣ್ಣ ಮತ್ತು ಅರಮನೆ ಕಾದಂಬರಿಗಳಲ್ಲಿ. ಅದಿನ್ನೂ ಸ್ಪಷ್ಟವಾಗಿದ್ದು ಮೊನ್ನೆ ಅವರು ಹೇಳಿದ ಮಾತು. ಇದನ್ನು ಇನ್ನೂ ಹೆಚ್ಚಿಗೆ ಬೆಳೆಸದೇ ಎಡಪಂಥೀಯರ ಬಗ್ಗೆ ಕುಂ.ವೀಯವರು ಸೇರಿದಂತೆ ಜನರ ಅನಿಸಿಕೆ ಏನು ಎಂಬುದನ್ನು ಮಾತ್ರ ನೋಡಬಹುದಾಗಿದೆ. ಹೀಗೆ ಹೇಳುತ್ತಾ ಗತಿಸ್ಥಿತಿ ಅಂತ ಒಂದು ಕಾದಂಬರಿ ಬರೆದ ಗಿರಿ ಅನ್ನುವವರು ಬಂದಾಗ ಪತ್ರಿಕೆಗಳು ವ್ಯಾಪಕ ಪ್ರಚಾರ ನೀಡಿದವು ಮೂರೆ ಕತೆ ಬರೆದ ದಿಟ್ಟ ಲೇಖಕ ಎಂದು ಹೊಗಳಿದ್ದುದನ್ನು ಹೇಳುತ್ತಾ ಕಡಿಮೆ ಬರೆದರೆ ಮಾತ್ರ ಮೌಲ್ಯಯುತವಾಗಿರುತ್ತದೆ ಎಂದು ಜನರು ತಪ್ಪು ತಿಳಿದಿದ್ದಾರೆ ಎಂದರು. ಅಲ್ಲಿ ಜೋಗಿಯವರೂ ಇದ್ದುದರಿಂದ, ಅವರೂ ಸಹ ಬರೆಯುವ ವೇಗದಲ್ಲಿ ಕುಂ.ವೀ.ಯವರ ಸಹಪಾಠಿಯಾಗಿರುವುದರಿಂದ ಒಂದು ಸಮಾನ ಮನಸ್ಕರ ಅನಿಸಿಕೆಯಂತಿತ್ತು.

ಇಲ್ಲಿ ಪ್ರಶ್ನೆಯಿರುವುದು ಹೆಚ್ಚು ಬರೆಯಬೇಕೋ..? ಹೆಚ್ಚು ಜನ ಬರೆಯಬೇಕೋ..? ಎಂಬುದು. ಹಾಗೆಯೆ ಕಡಿಮೆ ಬರೆದವರನ್ನು ಹೊಗಳಿದರೆ ಬೇಸರ ಯಾಕಾಗಬೇಕು..? ಹಾಗೆ ನೋಡಿದರೆ ದೇವನೂರು ಮಹಾದೇವರು ಕೂಡ ಪುಟ ಸಂಖ್ಯೆಯಲ್ಲಿ ಕಡಿಮೆ ಬರೆವರೇ. ಲಕ್ಷ್ಮೀಶತೋಳ್ವಾಡಿಯವರು ಮಾತನಾಡುತ್ತಾ ಕೆಲವು ವಿಚಾರಗಳನ್ನು ಮನದಟ್ಟು ಮಾಡಿಸಿದರು. ಕುಂವೀಯವರ ನಾಜೂಕುತನವನ್ನು ಗುರುತಿಸುತ್ತಾ ಮಾತಿಗೆ ಮಾತನಾಡುವುದಾದರೆ ಕುಂವೀ ರೀತಿ ಮಾತನಾಡಬಹುದು. ಆದರೆ ವಸ್ತುಸ್ಥಿತಿ ಹಾಗಲ್ಲ. ಅಂದರು. ಯಾವ ಹಿರಿಯವರನ್ನು ಅವರ ಗತಿಸ್ಥಿತಿಯನ್ನು ಕಟು ಶಬ್ದಗಳಲ್ಲಿ ಕುಂವೀ ಮಾತನಾಡಿದ್ದರೋ. ಅದೇ ವ್ಯಕ್ತಿ ಮತ್ತು ಪುಸ್ತಕದ ಬಗ್ಗೆ ತೋಳ್ಪಾಡಿಯವರು ಉತ್ತಮವಾದದು ಎಂಬ ಸರ್ಟಿಫಿಕೆಟ್ ನೀಡಿದರು. ಲಕ್ಷ್ಮೀಶ ತೋಳ್ಪಾಡಿಯವರು ಆಧ್ಯಾತ್ಮದ ಕೆಟಗರಿಯಲ್ಲಿ ಗಂಭೀರವಾಗಿ ನಿಲ್ಲುವವರು. ಯಾವಾಗ್ಯೂ ಅಂತರದಲ್ಲೇ ಇರುವುದರಿಂದ ವಿಚಾರಗಳ ಅರ್ಥ ಪಲ್ಲಟವನ್ನು ಗುರುತಿಸಬಲ್ಲವರು.

ಕುಂವೀ ಹಾಗೂ ಜೋಗಿ ಪ್ರಕಾಶಕರ ’ಹಾಟ್ ಫೇವರೇಟ್’.  ಅವರ ಪುಸ್ತಕಗಳು ಖರ್ಚಾಗುತ್ತವೆ. ಅವರಿಗೂ ಸಹ ನಾನು ರೀಚ್ ಆಗ ಬೇಕು ಅನ್ನುವ ಹಂಬಲವಿದೆ. ಆದರೆ ತೋಳ್ಪಾಡಿಯವರು ತಮ್ಮ ಪಾಡಿಗೆ ಬರೆದುಕೊಳ್ಳುತ್ತಾ ಪುಸ್ತಕ ಮಾರುಕಟ್ಟೆಯ ಬಗ್ಗೆ ಅಷ್ಟೇನೂ ಆಸಕ್ತಿವಹಿಸದವರು. ಹೀಗಿದ್ದಾಗ ಒಂದು ಕಾಲಘಟ್ಟದಲ್ಲಿ ನಡೆಯುತ್ತಿದ್ದ ಜನಪ್ರಿಯ ಡ/ಠ ಗಂಭೀರ ಸಾಹಿತ್ಯ ವಿಚಾರ ನೆನಪಿಗೆ ಬಂದಿತು. ಈಗ ಜನಪ್ರಿಯವಾದುದೇ. ಮೌಲ್ಯಯುತವಾದುದು ಎಂಬುದನ್ನು ಮನದಟ್ಟು ಮಾಡಿಸುವ ಕೆಲಸ ಜೋರಾಗಿ ನಡೆದಿದೆ. ಬೆಟ್ಟ ಮಹಮದನ ಒಳಗೆ ಬಾರದಿದ್ದರೆ ಜನಪ್ರಿಯವಲ್ಲದಿರಹುದು. ಆದರೆ ಗಂಭೀರವಾದದು ಮೌಲ್ಯಯುತವಾದದು ಎಂಬುದರಲ್ಲಿ ಸಂಶಯವಿಲ್ಲ. ಯೋಚಿಸಬೇಕಾದ್ದಿಷ್ಟೆ. ಅದು ಜನಪ್ರಿಯ ಯಾಕಾಗಲಿಲ್ಲ. ಆ ವಿಚಾರದಲ್ಲಿ ಲಕ್ಷ್ಮೀಶರವರಲ್ಲಿ ಸಂಕಟವಿರಲಿಲ್ಲ. ಅವರ ವಿಚಾರಕ್ಕೆ ಬರುವುದಾದರೆ ಕುಂವೀಯವರ ಮಾತಲ್ಲೇ ಉತ್ತರವಿತ್ತು. ಶಾಮಣ್ಣ, ಅರಮನೆ ಅರ್ಥವಾಗಲಿಲ್ಲ. ಅಂತ ತುಂಬಾ ಜನ ಹೇಳಿದರು. ಅವರನ್ನು ನಾನು ಅರ್ಥ ಮಾಡಿಕೊಳ್ಳಬೇಕೋ…? ನನ್ನನ್ನು ಅವರು ಅರ್ಥಮಾಡಿಕೊಳ್ಳಬೇಕೋ.. ಅಂದರು. ಅವರ ಪ್ರಾರಂಭಿಕ ಹಂತದ ದಿನಗಳಲ್ಲಿ ಹೀಗೆ ಹೇಳುವ ಧೈರ್ಯವಿತ್ತೋ…? ಗೊತ್ತಿಲ್ಲ. ಆದರೆ ಲಕ್ಷ್ಮೀಶ ತೋಳ್ಪಾಡಿಯವರು ಪ್ರಾರಂಭಿಕವಾಗಿಯೂ ಹೀಗೆ ಹೇಳಬಲ್ಲರು ಎಂಬುದರ ಬಗ್ಗೆ ನಂಬಿಕೆಯಾಗುತ್ತದೆ.

ಇದು ನಿಖರತೆಯ ಬಗ್ಗೆ ಯೋಚಿಸುವಾಗ ಹೊಳೆದ ವಿಚಾರಗಳು. ಈಗಿನ ಸಮಾಜ, ಬರಹ, ಪುಸ್ತಕ, ಮಾಧ್ಯಮಗಳು,ವ್ಯಾಪಾರ ಇವುಗಳ ನಡುವೇ ಈಗಲೂ ಕುಂವೀ ಮತ್ತು ಲಕ್ಷ್ಮೀಶ ತೋಳ್ಪಾಡಿಯವರು ಬೇರೆಯಾಗಿಯೇ  ಕಾಣಿಸುತ್ತಾರೆ. ಪ್ರಮುಖರ ಬೇರೆ ಬೇರೆ ರೀತಿಗಳ ನಡುವೆ ನಾವು ಬರೆಯಬೇಕಾಗಿದೆ. ಓದಬೇಕಿದೆ.

 

 

 

‍ಲೇಖಕರು avadhi

5 June, 2013

6 Comments

  1. kum.veerabhadrappa

    ನಾನು ಜನಪ್ರಿಯ ಸಾಹಿತ್ಯವನ್ನು ಓದುತ್ತೇನೆ, ಗಂಭೀರ ಸಾಹಿತ್ಯವನ್ನು ಪಾರಾಯಣ ಮಾಡುತ್ತೇನೆ, ಆದ್ದರಿಂದ ನನಗೆ ಗಿರಿಯಷ್ಟು ಮುಖ್ಯವೋ ಜೋ’ಗಿರಿ’ ಸಹ ಅಷ್ಟೇ ಮುಖ್ಯ

  2. ನಾಗರಾಜ್ ಹೆತ್ತೂರ್

    ಎಡಪಂಥಿಯ, ಬಲಪಂಥೀಯ ಎಂಬ ಬಗ್ಗೆಯೇ ನನಗೆ ಜಿಜ್ಞಾಸೆಯಿದೆ. ಅದರಲ್ಲೂ ಎಡಪಂಥೀಯ ಧೋರಣೆ ಇರುವವರು ಬರವಣಿಗೆಗೆಗಳಲ್ಲಿ ಮಾತ್ರ ತೋರಿಸಿಕೊಳ್ಳುತ್ತಾ ವಾಸ್ತವದಲ್ಲಿ ಬೇರೆಯದೇ ಕೆಲಸ ಮಾಡುತ್ತಿದ್ದಾರೆ. ಲಕ್ಷ್ಮೀಶ ತೋಳ್ಪಾಡಿ ಅವರ ಬಗ್ಗೆ ಇನ್ನಷ್ಟು ಬರೆಯಬೇಕಿತ್ತು. ಒದೊಳ್ಳೆ ಲೇಖನ

  3. Rj

    ಉತ್ತಮ ವಿಶ್ಲೇಷಣೆ.
    ಹೌದು,ಜನಪ್ರೀಯತೆಯ ಧಾಡಸೀತನ ಮತ್ತು ಮಡಿವಂತಿಕೆಯ ಶ್ರೇಷ್ಠತೆ-ಎರಡನ್ನೂ ಮೇಳೈಸಬಲ್ಲ ಬರಹ ಸಿಗುವದಾದರೆ,ಅದು ಓದುಗರ ಸೌಭಾಗ್ಯವಾದೀತು.
    -Rj

  4. samyuktha

    sabheyalli nadeyuva haasya jokes galige nakku vichalitaraagade, ondu bhashanavannu hege adhyayana poorvakavagi kelabahudu embudannu torisiddeeri. Thanks!

  5. bharathi b v

    ishtavaythu …tumba …

  6. nagraj harapanahalli

    kumvi and tolpadi maatinalli binna binna dwanigalu horatave? binna dwani athva enadaru hosa drusti koona bandiddare..adannu dhakalisabekittu…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading